Cnewstv.in / 23.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಶಿಕ್ಷಣದಷ್ಟೇ ಪ್ರಾಮುಖ್ಯತೆಯನ್ನು ಆರೋಗ್ಯಕ್ಕೂ ನೀಡಬೇಕು. ಆರೋಗ್ಯವಂತರಾಗಿದ್ದರೆ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ಆರೋಗ್ಯದೆಡೆ ಹೆಚ್ಚಿನ ಗಮನ ಹರಿಸಬೇಕು. ಹಾಗೂ ಎಲ್ಲ ಮಕ್ಕಳು ಜಂತುಹುಳು ನಾಶಕ ಮಾತ್ರೆಗಳನ್ನು ತೆಗೆದುಕೊಳ್ಳಬೇಕೆಂದು ಜಿ.ಪಂ. ಸಿಇಓ ಎಂ.ಎಲ್.ವೈಶಾಲಿ ಕರೆ ನೀಡಿದರು. ಇಂದು ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆ ಸಾಧಿಸಲು ಉತ್ತಮ ಆರೋಗ್ಯ ಹೊಂದಿರಬೇಕು. ...
Read More »Monthly Archives: November 2021
ಹಂಸಲೇಖರವರ ವಿರುದ್ಧ ಹಾಕಿರುವ ಸುಳ್ಳು ಪ್ರಕರಣವನ್ನು ವಜಾಗೊಳಿಸಿ, ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು – ಕರ್ನಾಟಕ ದಲಿತ ಸಂಘರ್ಷ ಸಮಿತಿ
Cnewstv.in / 23.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಹಂಸಲೇಖ ರವರ ಹೇಳಿಕೆಯನ್ನು ಬೆಂಬಲಿಸಿ, ಬ್ರಾಹ್ಮಣ್ಯವನ್ನು ಖಂಡಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು. ಇತ್ತೀಚಿಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಹಂಸಲೇಖರವರು ಮಾತನಾಡುತ್ತಾ ದಲಿತರ ಮನೆಗೆ ಬಲಿತರು ಬಂದು ಅಸ್ಪೃಶ್ಯತೆ ಹೋಗಲಾಡಿಸುತ್ತೇವೆ ಎಂಬುದು ಬೂಟಾಟಿಕೆ, ಬಲಿತರ ಮನೆಗೆ ದಲಿತರನ್ನು ಕರೆತಂದು ಅವರಿಗೆ ಊಟ ಬಡಿಸಿ ಅವರ ತಟ್ಟೆ ಲೋಟ ತೊಳೆದು ತಮ್ಮ ತಪ್ಪು ತಿದ್ದಿಕೊಳ್ಳಬೇಕು ಎಂದು ಮಾತನಾಡಿದ್ದರು. ಇದರಲ್ಲಿ ಯಾವ ...
Read More »ದೇವಸ್ಥಾನಕ್ಕೆ ದೇಣಿಗೆ ನೀಡಿದ ಭಿಕ್ಷುಕಿ.
Cnewstv.in / 23.11.2021/ ಚಿಕ್ಕಮಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಚಿಕ್ಕಮಗಳೂರು : ಭಿಕ್ಷುಕಿಯೊಬ್ಬಳು ದೇವಸ್ಥಾನಕ್ಕೆ ಇಪ್ಪತ್ತು ಸಾವಿರ ರೂಪಾಯಿಗಳನ್ನು ದೇಣಿಗೆ ನೀಡಿದ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕೋಟೆ ಪಾತಾಳ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಕೆಂಪಜ್ಜಿ ಎಂಬ ಭಿಕ್ಷುಕಿ ದೇಣಿಗೆ ನೀಡಿದ್ದಾರೆ. ಭಿಕ್ಷಾಟನೆಯಲ್ಲಿದ್ದ ಕೆಂಪಜ್ಜಿ ಒಂದು ದಿನ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರನ್ನು ಹುಡುಕುತ್ತಿದ್ದರು. ಹಳೆಯ ಬಟ್ಟೆಯನ್ನು ಧರಿಸಿ ಬಂದಂತಹ ಕೆಂಪಜ್ಜಿಯನ್ನು ಕಂಡು ಎಲ್ಲರೂ ಹಣ ಕೇಳಲು ಹುಡುಕುತ್ತಿದ್ದಾರೆ ಎಂದು ಭಾವಿಸಿದರು. ಅಜ್ಜಿಯನ್ನ ಅಲ್ಲಿಂದ ಹೊರಗೆ ಕಳುಹಿಸಲು ಮುಂದಾದರು. ಆದರೆ ...
Read More »ಸಾಮೂಹಿಕ ಭೋಜನ ಕಾರ್ಯಕ್ರಮಗಳಲ್ಲಿ ಮುಂಜಾಗರೂಕತೆ ಕ್ರಮ ಕಡ್ಡಾಯ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್
Cnewstv.in / 22.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : : ಸಾಮೂಹಿಕ ಭೋಜನ, ಅನ್ನ ಸಂತರ್ಪಣೆ, ಜಾತ್ರೆ, ಉತ್ಸವದಂತಹ ಸಂದರ್ಭಗಳಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಮುಂಜಾಗರೂಕತಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಇದೇ ರೀತಿ ಸರ್ಕಾರಿ ಹಾಸ್ಟೆಲ್‍ಗಳು, ವೃದ್ಧಾಶ್ರಮಗಳು ಹಾಗೂ ಇತರ ಸರ್ಕಾರಿ ಅಥವಾ ಖಾಸಗಿ ಸ್ಥಳಗಳಲ್ಲಿ ಸಾಂಕ್ರಾಮಿಕ ರೋಗಗಳು ಮತ್ತು ಅವಘಡಗಳು ಸಂಭವಿಸಿದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನಿಂದ ಇದನ್ನು ಪಾಲಿಸಲು ಆದೇಶಿಸಿದ್ದಾರೆ. ಸಾಮೂಹಿಕ ಭೋಜನ/ಅನ್ನ ಸಂತರ್ಪಣೆ ...
Read More »ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಗೆ ವೀರ ಚಕ್ರ ಪ್ರಶಸ್ತಿ.
Cnewstv.in / 22.11.2021/ ನವದಹಲಿ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ನವದೆಹಲಿ: ಫೆಬ್ರವರಿ 2019 ರಲ್ಲಿ ಬಾಲಕೋಟ್ ಮೇಲಿನ ವೈಮಾನಿಕ ಕಾಳಗದಲ್ಲಿ ಪಾಕಿಸ್ಥಾನದ ಎಫ್ -16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕಾಗಿ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ರವರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಇಂದು ವೀರ ಚಕ್ರವನ್ನು ಪ್ರದಾನ ಮಾಡಿದ್ದಾರೆ. ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಧಮಾನ್ ಅಭಿನಂದನ್ ಅವರ ಸಾಹಸ ಮತ್ತು ಸೇವೆಯನ್ನು ಗೌರವಿಸಲಾಯಿತು. ಪರಮವೀರ ಚಕ್ರದ ಬಳಿಕ ವೀರಚಕ್ರ ಮೂರನೇ ಅತ್ಯುನ್ನತ ಶೌರ್ಯ ಪದಕವಾಗಿದೆ. ಈ ಹಿನ್ನೆಲೆ ...
Read More »ಆರಗ ಜ್ಞಾನೇಂದ್ರ ತೀರ್ಥಹಳ್ಳಿಗೆ ಮಾತ್ರ ಗೃಹಸಚಿವರಾಗಿದ್ದಾರೆ : ಕಿಮ್ಮನೆ ರತ್ನಾಕರ್ ವಾಗ್ದಾಳಿ.
Cnewstv.in / 22.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಆರಗ ಜ್ಞಾನೇಂದ್ರ ತೀರ್ಥಹಳ್ಳಿಗೆ ಮಾತ್ರ ಗೃಹಸಚಿವರಾಗಿದ್ದಾರೆ : ಕಿಮ್ಮನೆ ರತ್ನಾಕರ್ ವಾಗ್ದಾಳಿ. ಶಿವಮೊಗ್ಗ: ಆರಗ ಜ್ಞಾನೇಂದ್ರ ಅವರು ಇಡೀ ರಾಜ್ಯಕ್ಕೆ ಗೃಹ ಮಂತ್ರಿಯಾಗಿಲ್ಲ. ಬದಲಾಗಿ ತೀರ್ಥಹಳ್ಳಿಗೆ ಮಾತ್ರ ಗೃಹಸಚಿವರಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಗ ಜ್ಞಾನೇಂದ್ರ ಅವರು ಸಚಿವರಾದಾಗ ನಾನೂ ಶುಭ ಹಾರೈಸಿದ್ದೆ. ಆದರೆ ಇದೀಗ ಅವರು ನಡೆದುಕೊಳ್ಳುವ ರೀತಿ ನೋಡಿದರೆ ತೀರ್ಥಹಳ್ಳಿ ಮರ್ಯಾದೆ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ತೀರ್ಥಹಳ್ಳಿಯ ಪೊಲೀಸ್ ...
Read More »ಆಟೋ ಡಿಕ್ಕಿ : ಇಬ್ಬರು ಯುವತಿಯರಿಗೆ ಗಾಯ. ಅಪಘಾತದ ವೀಡಿಯೋ ವೈರಲ್.
Cnewstv.in / 20.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಸಾಗರ ನಗರದ ಬಿ.ಹೆಚ್. ರಸ್ತೆಯ ಸುಜುಕಿ ಶೋ ರೂಂ ಎದುರು, ಶುಕ್ರವಾರ ಸಂಜೆ ಇಬ್ಬರು ಯುವತಿಯರಿಗೆ ಆಟೋವೊಂದು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಎಸ್.ಎನ್.ನಗರದ ಇಬ್ಬರು ಯುವತಿಯರು ಕಂಪ್ಯೂಟರ್ ಕ್ಲಾಸ್ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ವೇಗವಾಗಿ ಆಟೋ ಆಗಮಿಸಿದೆ. ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರೂ ಮಹಿಳೆಯರ ಮೇಲೆ ಆಟೋ ನುಗ್ಗಿದೆ. ಘಟನೆಯಲ್ಲಿ ಓರ್ವ ಯುವತಿಗೆ ಗಂಭೀರ ಸ್ವರೂಪದ ...
Read More »ಸಫಾಯಿ ಕರ್ಮಚಾರಿ ನಿಗಮ : ಅರ್ಜಿ ಅವಧಿ ವಿಸ್ತರಣೆ.
Cnewstv.in / 18.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಸಫಾಯಿ ಕರ್ಮಚಾರಿ ನಿಗಮ : ಅರ್ಜಿ ಅವಧಿ ವಿಸ್ತರಣೆ. ಶಿವಮೊಗ್ಗ : ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಡಿಯಲ್ಲಿ ಬರುವ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ನಿಗಮದ ವತಿಯಿಂದ 2021-22 ನೇ ಸಾಲಿನ ಸಫಾಯಿ ಕರ್ಮಚಾರಿ/ಪೌರ ಕಾರ್ಮಿಕರು ಮತ್ತು ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‍ಗಳಿಗೆ ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರ ಖರೀದಿ ಮತ್ತು ಮಕ್ಕಳಿಗೆ ಆನ್‍ಲೈನ್ ಪಾಠ ಕೇಳಲು ಟ್ಯಾಬ್ ವಿತರಣೆ ಹಾಗೂ ದ್ವಿಚಕ್ರ ವಾಹನ ಯೋಜನೆಗಳಿಗೆ ಆಹ್ವಾನಿಸಲಾಗಿದ್ದ ಅರ್ಜಿ ಅವಧಿಯನ್ನು ಡಿಸೆಂಬರ್ 15 ರವರೆಗೆ ...
Read More »ಲಕ್ಕಿನಕೊಪ್ಪ ಬಳಿ ಭೀಕರ ಅಪಘಾತ, ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ.
Cnewstv.in / 18.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಲಕ್ಕಿನಕೊಪ್ಪ ಬಳಿ ಭೀಕರ ಅಪಘಾತ, ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ. ಶಿವಮೊಗ್ಗ : ಶಿವಮೊಗ್ಗದ ಹೊರಹೊಲಯ ಲಕ್ಕಿನಕೊಪ್ಪ ಬಳಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪ ಗ್ರಾಮದ ಸಮೀಪ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತವಾಗಿದೆ. ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಅಪಘಾತವಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ...
Read More »ಶಸ್ತ್ರ ಮತ್ತು ಆಯುಧ ಠೇವಣಿ ಮಾಡಲು ಸೂಚನೆ.
Cnewstv.in / 18.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಸಾಗರ, ಶಿಕಾರಿಪುರ, ಸೊರಬ ಹಾಗೂ ಹೊಸನಗರ ತಾಲ್ಲೂಕು ಹಾಗೂ ನಗರ ವ್ಯಾಪ್ತಿಯಲ್ಲಿ ಆಯುಧಗಳನ್ನು ಹೊಂದಿರುವವರು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಶಸ್ತ್ರ/ಆಯುಧಗಳನ್ನು ಸಮೀಪದ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಲು ಈ ಮೂಲಕ ಸೂಚಿಸಲಾಗಿದೆ. ಠೇವಣಿಯಲ್ಲಿ ಇಡಲಾಗುವ ಶಸ್ತ್ರ/ಆಯುಧಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆಯ ಅಧಿಕಾರಿಗಳು ಸುರಕ್ಷಿತವಾಗಿ ಇಟ್ಟುಕೊಳ್ಳುವುದಲ್ಲದೇ ಠೇವಣಿ ...
Read More »
Recent Comments