Breaking News

ದೇವಸ್ಥಾನಕ್ಕೆ ದೇಣಿಗೆ ನೀಡಿದ ಭಿಕ್ಷುಕಿ.

Cnewstv.in / 23.11.2021/ ಚಿಕ್ಕಮಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಚಿಕ್ಕಮಗಳೂರು : ಭಿಕ್ಷುಕಿಯೊಬ್ಬಳು ದೇವಸ್ಥಾನಕ್ಕೆ ಇಪ್ಪತ್ತು ಸಾವಿರ ರೂಪಾಯಿಗಳನ್ನು ದೇಣಿಗೆ ನೀಡಿದ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕೋಟೆ ಪಾತಾಳ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಕೆಂಪಜ್ಜಿ ಎಂಬ ಭಿಕ್ಷುಕಿ ದೇಣಿಗೆ ನೀಡಿದ್ದಾರೆ.

ಭಿಕ್ಷಾಟನೆಯಲ್ಲಿದ್ದ ಕೆಂಪಜ್ಜಿ ಒಂದು ದಿನ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರನ್ನು ಹುಡುಕುತ್ತಿದ್ದರು. ಹಳೆಯ ಬಟ್ಟೆಯನ್ನು ಧರಿಸಿ ಬಂದಂತಹ ಕೆಂಪಜ್ಜಿಯನ್ನು ಕಂಡು ಎಲ್ಲರೂ ಹಣ ಕೇಳಲು ಹುಡುಕುತ್ತಿದ್ದಾರೆ ಎಂದು ಭಾವಿಸಿದರು. ಅಜ್ಜಿಯನ್ನ ಅಲ್ಲಿಂದ ಹೊರಗೆ ಕಳುಹಿಸಲು ಮುಂದಾದರು. ಆದರೆ ಕೆಂಪಜ್ಜಿ 500 ರೂಪಾಯಿಯ 40 ನೋಟುಗಳನ್ನು ಅರ್ಚಕರಿಗೆ ಕೊಟ್ಟು, ಇದರಿಂದ ಆಂಜನೇಯಸ್ವಾಮಿಗೆ ಬೆಳ್ಳಿಯ ಮುಖವಾಡ ಮಾಡಿಸಿ ಎಂದು ಹೇಳಿದರು.

ಕಡೂರಿನ ಸಾಯಿಬಾಬ ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಿದ್ದ ಕೆಂಪಜ್ಜಿ, ತನ್ನ ಗಳಿಕೆಯ ಹಣದಲ್ಲಿ 20 ಸಾವಿರ ರೂಪಾಯಿಗಳನ್ನು ದೇವಸ್ಥಾನಕ್ಕೆ ನೀಡಿ ಮಾದರಿಯಾಗಿದ್ದಾಳೆ. ಕೆಂಪಜ್ಜಿಯ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.‌

ಇದನ್ನು ಒದಿ : https://cnewstv.in/?p=6862

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*