Cnewstv.in / 23.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಹಂಸಲೇಖ ರವರ ಹೇಳಿಕೆಯನ್ನು ಬೆಂಬಲಿಸಿ, ಬ್ರಾಹ್ಮಣ್ಯವನ್ನು ಖಂಡಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.
ಇತ್ತೀಚಿಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಹಂಸಲೇಖರವರು ಮಾತನಾಡುತ್ತಾ ದಲಿತರ ಮನೆಗೆ ಬಲಿತರು ಬಂದು ಅಸ್ಪೃಶ್ಯತೆ ಹೋಗಲಾಡಿಸುತ್ತೇವೆ ಎಂಬುದು ಬೂಟಾಟಿಕೆ, ಬಲಿತರ ಮನೆಗೆ ದಲಿತರನ್ನು ಕರೆತಂದು ಅವರಿಗೆ ಊಟ ಬಡಿಸಿ ಅವರ ತಟ್ಟೆ ಲೋಟ ತೊಳೆದು ತಮ್ಮ ತಪ್ಪು ತಿದ್ದಿಕೊಳ್ಳಬೇಕು ಎಂದು ಮಾತನಾಡಿದ್ದರು. ಇದರಲ್ಲಿ ಯಾವ ತಪ್ಪು ಇರಲಿಲ್ಲ. ಆದರೆ ಕೇವಲ 3% ಇರುವ ಮನುವಾದಿಗಳು ಇದು ನಮ್ಮ ಮನಸ್ಸಿಗೆ ಘಾಸಿಮಾಡಿತು. ಅವರು ಹಿಂದೂಗಳ ಕ್ಷಮೆಯಾಚಿಸಬೇಕು ಎಂದು ಜಾಲತಾಣಗಳಲ್ಲಿ ಟ್ರೋಲ್ ಮಾಡಿ ಧಮ್ಮಿ ಹಾಕಿದ್ದರಿಂದ ಹಂಸಲೇಖ ರವರು ಕ್ಷಮೆ ಕೋರಿದ್ದಾರೆ. ಇದು ಅತ್ಯಂತ ಖಂಡನೀಯಾ.
ಭಗವದ್ಗೀತೆ ನಮಗೆ ಎಷ್ಟು ಸಹಾಯ ಮಾಡಿದೆಯೋ ಗೊತ್ತಿಲ್ಲಾ. ಆದರೆ ಅಂಬೇಡ್ಕರ್ ಕೊಟ್ಟ ಬಡವರ ಗೀತೆ, ಸಂವಿಧಾನ ನಮ್ಮನ್ನು ಸಾಂಸ್ಕೃತಿಕ ಗುಲಾಮಗಿರಿಯಿಂದ ಹೊರಗೆ ತಂದಿದೆ. ಈ ದೇಶದಲ್ಲಿ ಶೇ.15%ರಷ್ಟಿರುವ ಮನುವಾದಿಗಳು ಶೇ.85 ರಷ್ಟಿರುವ ದಲಿತರು ಮತ್ತು ಹಿಂದುಳಿದವರು ಸ್ವಾಭಿಮಾನವನ್ನು ಕೆಣಕುತ್ತಿದ್ದು ಇದೇ ಧೋರಣೆ ಮುಂದುವರಿದಿದ್ದೇ ಆದರೆ ಮನುವಾದಿಗಳು ಬಹುದೊಡ್ಡ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ.
ಹಂಸಲೇಖರವರ ವಿರುದ್ಧ ಹಾಕಿರುವ ಸುಳ್ಳು ಪ್ರಕರಣವನ್ನು ವಜಾಗೊಳಿಸಿ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು ಎಂದು ಸಮಿತಿಯಿಂದ ಸರ್ಕಾರವನ್ನು ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ರಾಜ್ಯ ಸಂಚಾಲಕರಾದ ಗುರುಮೂರ್ತಿ, ಶಿವಬಸಪ್ಪ, ಏಳುಕೋಟಿ, ಎಂ ರಮೇಶ್ ಚಿಕ್ಕಮರಡಿ, ರಾಘವೇಂದ್ರ ಜೋಗಿಹಳ್ಳಿ, ರವಿಹರಿಗೆ, ದೇವೇಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.
ಇದನ್ನು ಒದಿ : https://cnewstv.in/?p=6864
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments