Breaking News

ಆಟೋ ಡಿಕ್ಕಿ : ಇಬ್ಬರು ಯುವತಿಯರಿಗೆ ಗಾಯ. ಅಪಘಾತದ ವೀಡಿಯೋ ವೈರಲ್.

Cnewstv.in / 20.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಸಾಗರ ನಗರದ ಬಿ.ಹೆಚ್. ರಸ್ತೆಯ ಸುಜುಕಿ ಶೋ ರೂಂ ಎದುರು, ಶುಕ್ರವಾರ ಸಂಜೆ ಇಬ್ಬರು ಯುವತಿಯರಿಗೆ ಆಟೋವೊಂದು ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಎಸ್.ಎನ್.ನಗರದ ಇಬ್ಬರು ಯುವತಿಯರು ಕಂಪ್ಯೂಟರ್ ಕ್ಲಾಸ್ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ವೇಗವಾಗಿ ಆಟೋ ಆಗಮಿಸಿದೆ. ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ
ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರೂ ಮಹಿಳೆಯರ ಮೇಲೆ ಆಟೋ ನುಗ್ಗಿದೆ.

ಘಟನೆಯಲ್ಲಿ ಓರ್ವ ಯುವತಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೋರ್ವ ಯುವತಿಗೆ ಸಣ್ಣಪುಟ್ಟ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆಟೋ ಡಿಕ್ಕಿಯಿಂದ ವಿದ್ಯುತ್ ಕಂಬ ಕೂಡ ಜಖಂಗೊಂಡಿದೆ. ಈ ಸಂಬಂಧ ಆಟೋ ಚಾಲಕನ ವಿರುದ್ದ ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ದೃಶ್ಯ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ ಎಂಬ ವಿಡಿಯೋ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನು ಒದಿ : https://cnewstv.in/?p=6849

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*