ದಿನಾಂಕ17/8/19 ರಂದು ಅಜ್ಜಂಪುರದ ಲೋಕೇಶಪ್ಪರವರು ಸಿಟಿ ಬಸ್ಸಿನಲ್ಲಿ ಹೋಗುತ್ತಿರುವಾಗ ಮೀನಾಕ್ಷಿ ಭವನದ ಹತ್ತಿರ ಅವರ ಜೇಬಿನಲ್ಲಿ ಇದ್ದ 25,000/- ಹಣವನ್ನು ಪಿಕ್ ಪಾಕೆಟ್ ಮಾಡಿದ್ದು ಈ ಬಗ್ಗೆ ಕೋಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಆರೋಪಿ ಪತ್ತೆಗಾಗಿ ಮಾನ್ಯ ಪೋಲೀಸ್ ಅಧೀಕ್ಷಕರಾದ ಕೆ.ಎಂ . ಶಾಂತರಾಜ್. ಐ.ಪಿ.ಎಸ್. & ಹೆಚ್ಚು ವರಿ ಪೋಲೀಸ್ ಅಧೀಕ್ಷಕರಾದ ಡಾ.ಶೇಖರ್ .ಹೆಚ್.ಟಿ. ಕೆ.ಎಸ್.ಪಿ.ಎಸ್. , ಡಿ.ವೈ.ಎಸ್.ಪಿ.ಉಮೇಶ್ ಈಶ್ವರ ನಾಯ್ಕ, ಮತ್ತು ಸಿ.ಪಿ.ಐ ರವರಾದ ಕೆ.ಟಿ.ಗುರುರಾಜ. ರವರ ಮಾರ್ಗದರ್ಶನದಲ್ಲಿ ಕೋಟೆ ಪೋಲೀಸ್ ಠಾಣೆಯ ಪಿ.ಎಸ್.ಐ ರವರಾದ ಹೆಚ್.ತಿಮ್ಮಯ್ಯ ರವರ ...
Read More »Monthly Archives: August 2019
ನೇಣು ಬಿಗಿದುಕೊಂಡು ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಆತ್ಮಹತ್ಯೆ.
ನೇಣು ಬಿಗಿದುಕೊಂಡು ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಆತ್ಮಹತ್ಯೆ. ಸಾಗರದ ಸರ್ಕಾರಿ ಉರ್ದು ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿನಿ ರುಹಿನಾ(15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ಸಾಗರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಾಗರ ನಗರ ಠಾಣೆ ಇನ್ಸ್ ಪೆಕ್ಟರ್ ಮಹಾಬಲೇಶ್ ನಾಯ್ಕ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.. Contact for news and advertisement 99166 60399
Read More »ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ
ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ. ಶಿವಮೊಗ್ಗ: ಆಗುಂಬೆ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಗುಂಬೆ ಘಾಟಿ ರಸ್ತೆ ಕುಸಿಯುವ ಭೀತಿ ಇರುವುದರಿಂದ ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. 12 ಟನ್ ಗಿಂತಲೂ ಹೆಚ್ಚು ತೂಕದ ವಾಹನಗಳು ಮಳೆಗಾಲ ಮುಗಿಯುವವರೆಗೂ ಈ ಮಾರ್ಗದಲ್ಲಿ ಸಂಚರಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಶಿವಕುಮಾರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಇನ್ನುಳಿದಂತೆ ಮಿನಿಬಸ್, ಕಾರು, ಜೀಪ್, ಬೈಕ್ ಗಳ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. Contact for news and advertisement ...
Read More »ರಸ್ತೆಯಲ್ಲಿ ಕಾಣಿಸಿಕೊಂಡ ಕಾಡುಕೋಣಗಳ ಹಿಂಡು
ಶಿವಮೊಗ್ಗ: ಹೊಸನಗರ ತಾಲೂಕಿನ ಹುಲಿಕಲ್ ಪಿಕ್ ಅಪ್ ಡ್ಯಾಂ ಮೇಲಿನ ರಸ್ತೆಯಲ್ಲಿ ಕಾಡುಕೋಣಗಳ ಹಿಂಡು ಕಾಣಿಸಿಕೊಂಡಿದೆ. ಸುಮಾರು ಎಂಟರಿಂದ ಹತ್ತು ಕಾಡುಕೋಣಗಳ ಹಿಂಡು ರಸ್ತೆ ಮೇಲೆ ಸಂಚರಿಸುವ ವಾಹನಗಳು ಹಾರನ್ ಹೊಡೆದರು ಕೂಡ ನಿರ್ಭಿತಿಯಿಂದ ಸಂಚರಿಸುತ್ತಿದೆ. ಮಾಸ್ತಿಕಟ್ಟೆ ಹಾಗೂ ಹುಲಿಕಲ್ ಭಾಗದಲ್ಲಿ ಬೆಳೆಗಳ ಮೇಲೆದಾಳಿ ನಡೆಸಬಹುದು ಎಂಬ ಅಂತಕ ರೈತರಲ್ಲಿ ಮೂಡಿದೆ.
Read More »ಶಿವಮೊಗ್ಗ ನಗರದಲ್ಲಿ ಪರಿಹಾರ ಕಾರ್ಯ ಚುರುಕು: ಚಾರುಲತಾ ಸೋಮಲ್
ಶಿವಮೊಗ್ಗ ನಗರದಲ್ಲಿ ನೆರೆ ಪರಿಸ್ಥಿತಿ ಸಂಪೂರ್ಣವಾಗಿ ಇಳಿದಿದ್ದು, ಪುನರ್ ವಸತಿ ಸೇರಿದಂತೆ ಪರಿಹಾರ ಕಾಮಗಾರಿಗಳನ್ನು ಚುರುಕುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ನೆರೆ ಪೀಡಿತ ಪ್ರದೇಶಗಳಿಂದ 250 ಕುಟುಂಬಗಳ ಸುಮಾರು 1675 ಜನರನ್ನು ರಕ್ಷಿಸಲಾಗಿದೆ. ಇವರಲ್ಲಿ 556ಮಂದಿಯನ್ನು ಬೋಟ್‍ಗಳ ಸಹಾಯದಿಂದ ನೆರೆ ಪೀಡಿತ ಸ್ಥಳದಿಂದ ರಕ್ಷಿಸಲಾಗಿದೆ. ನಗರದಲ್ಲಿ ತೆರೆಯಲಾಗಿರುವ 15 ಪರಿಹಾರ ಕೇಂದ್ರಗಳಲ್ಲಿ 2500 ಮಂದಿ ಸಂತ್ರಸ್ತರು ಆಶ್ರಯ ಪಡೆದಿದ್ದು, ಅವರಿಗೆ ಬಿಸಿಯೂಟ, ಬಟ್ಟೆ, ಚಪ್ಪಲ್, ಸ್ಯಾನಿಟರಿ ಪ್ಯಾಡ್‍ಗಳು ಸೇರಿದಂತೆ ಅಗತ್ಯ ...
Read More »ಶಿವಮೊಗ್ಗದ ನೆರೆಪೀಡಿತ ಬಡಾವಣೆ ಶಾಂತಮ್ಮ ಲೇ ಔಟ್ ಗೆ ಬಿಗಿ ಪೊಲೀಸ್ ಬಂದೋಬಸ್ತ್.
ಶಾಂತಮ್ಮ ಲೇ ಔಟ್ ಬಡಾವಣೆಯ ಎಲ್ಲ ಮನೆಗಳನ್ನು ಖಾಲಿ ಮಾಡಿಸಿದ್ದರಿಂದ ಎಲ್ಲರೂ ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡು ಗಂಜಿಕೇಂದ್ರದಲ್ಲಿ ಬೀಡು ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಂತಮ್ಮ ಲೇ ಔಟ್ ಸೇರಿದ್ದಂದೆ ನೆರೆಪೀಡಿತ ಪ್ರದೇಶಕ್ಕೆ ಹೋಗಿ ಯಾರು ಅಪಾಯಕ್ಕೆ ಸಿಲುಕಬಾರದು ಹಾಗೂ ಕಳ್ಳತನವಾಗಬಾರದು ಎಂಬ ಉದ್ದೇಶದಿಂದ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಖುದ್ದು ಎಸ್ ಪಿ ಶಾಂತರಾಜು ಅವರು ಸ್ಥಳಕ್ಕೆ ಭೇಟಿ ನೀಡಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
Read More »ಜಿಲ್ಲೆಯಲ್ಲಿ 14 ನೆರೆ ಪರಿಹಾರ ಕೇಂದ್ರ ಆರಂಭ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್
ಜಿಲ್ಲೆಯ ಹಲವು ಭಾಗಗಳಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ಇದುವರೆಗೆ ಒಟ್ಟು 14 ನೆರೆ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ 7, ಭದ್ರಾವತಿ ಮತ್ತು ತೀರ್ಥಹಳ್ಳಿಯಲ್ಲಿ ತಲಾ ಒಂದು ಹಾಗೂ ಸೊರಬ ತಾಲೂಕಿನಲ್ಲಿ 5 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು 2250 ಮಂದಿ ಈ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಪರಿಹಾರ ಕೇಂದ್ರ ವಿವರ: ಶಿವಮೊಗ್ಗ ನಗರದ ಇಮಾಮ್ ಬಾಡ, ಸೀಗೆಹಟ್ಟಿ, ರಾಮಣ್ಣ ಶ್ರೇಷ್ಟಿ ಪಾರ್ಕ್, ಗುಡ್ಡೇಕಲ್, ಪುಟ್ಟಪ್ಪ ಕ್ಯಾಂಪ್, ...
Read More »ಸೆಲ್ಫಿ ಸ್ಪಾಟ್ ಆಯ್ತು ಈ ಚಾನೆಲ್..
ಕೆಲವೊಂದು ಸ್ಥಳಗಳೇ ಹಾಗೆ ಒಂದು ಕಾಲದಲ್ಲಿ ಅಸಹ್ಯ ಹುಟ್ಟಿಸುವಂತೆ ಇದ್ದರೂ ಕೆಲ ಕಾಲದಲ್ಲಿ ಜನರನ್ನು ಸೂಜಿಗಲ್ಲಿನಂತೆ ಸೆಳೆಯುವ ಆಕರ್ಷಣೆ ಹೊಂದಿರುತ್ತವೆ. ಇಷ್ಟೆಲ್ಲ ಪೀಠಿಕೆ ಏಕೆ ಎನ್ನುತ್ತೀರಾ? ಹೌದು. ಶಿವಮೊಗ್ಗ ಕೀರ್ತಿ ನಗರದಿಂದ ಎಲ್ ಬಿಎಸ್‌ನಗರಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಗಾರೆ ಚಾನೆಲ್ ಇದಕ್ಕೆ ಉತ್ತಮ ಉದಾಹರಣೆ. ಬೇಸಿಗೆ ಕಾಲದಲ್ಲಿ ಬರೀ ಕೊಳಚೆಯನ್ನೇ ತುಂಬಿಕೊಂಡು ಅಸಹ್ಯ ಹುಟ್ಟಿಸುವ ಈ ನಾಲೆ ಮಳೆಗಾಲ ಬಂತೆದರೆ ಸಾಕು ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ತುಂಗಾ ನಾಲೆ ತುಂಬಿ ಹರಿದು ಬರುವಾಗ ಗಾರೆ ಚಾನಲ್ ಬಳಿ ಉಕ್ಕಿ ಕೆಳಗ್ಗೆ ಧುಮ್ಮಿಕ್ಕುತ್ತದೆ. ಹೀಗೆ ...
Read More »ಇಂದಿರಾ ಕೊಲೆ ಆರೋಪಿ ಬಂಧನ.
ಭದ್ರಾವತಿ ತಾಲೂಕು ಕಾಳಿಂಗನಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಕೊಲೆ ಮಾಡಿದ ಆರೋಪಿಯನ್ನು ಭದ್ರಾವತಿ ಹೊಸಮನೆ ಪೊಲೀಸರು ಬಂಧಿಸಿದ್ದಾರೆ. ಕಾಳಿಂಗನಹಳ್ಳಿಯ ಶಿವಕುಮಾರ್ ಬಂಧಿತ ಆರೋಪಿಯಾಗಿದ್ದು, ಇಂದಿರಾಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಅದರೆ ಇಂದಿರಾ ಪ್ರೀತಿಯನ್ನು ನಿರಾಕರಿಸಿದ್ದರಿಂದ ಆಕ್ರೋಶಗೊಂಡು ಶಿವಕುಮಾರ್ ರಾತ್ರಿ ಮಲಗಿದ್ದಾಗ ಯಾರಿಗೂ ತಿಳಿಯದಂತೆ ಅಡುಗೆ ಮನೆಗೆ ಆಕೆಯನ್ನು ಎಳೆದೊಯ್ದು ಕತ್ತು ಸೀಳಿ ಕೊಲೆ ಮಾಡಲಾಗಿದೆ.
Read More »ವಿದ್ಯಾರ್ಥಿನಿಯ ಬರ್ಭರ ಹತ್ಯೆ.
ವಿದ್ಯಾರ್ಥಿನಿಯ ಬರ್ಭರ ಹತ್ಯೆ ಶಿವಮೊಗ್ಗ: ಮನೆಯಲ್ಲಿಯೇ ವಿದ್ಯಾರ್ಥಿನಿಯ ಕತ್ತನ್ನು ಕೊಯ್ದು ಬರ್ಭರವಾಗಿ ಕೊಲೆ ಮಾಡಿರುವ ಘಟನೆ ಭದ್ರಾವತಿ ತಾಲೂಕಿನ ಕಾಳಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿನಿ ಇಂದಿರಾ(17) ಕೊಲೆಯಾದ ವಿದ್ಯಾರ್ಥಿನಿ. ತಂದೆಯನ್ನು ಕಳೆದುಕೊಂಡಿದ್ದ ಇಂದಿರಾ ಕಾಳಿಂಗಹಳ್ಳಿಯಲ್ಲಿರುವ ತನ್ನ ಚಿಕ್ಕಪ್ಪ ಹಾಗೂ ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ನಡೆಸುತ್ತಿದ್ದಳು. ಇಂದಿರಾಳ ಚಿಕ್ಕಪ್ಪ ಚಿಕ್ಕಮ್ಮ ಇಬ್ಬರೂ ಮೂಗರಾಗಿದ್ದು ಇವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ದುಷ್ಕರ್ಮಿಗಳು ಇಂದಿರಾಳ ಕತ್ತುಕೊಯ್ದು ಬರ್ಭರವಾಗಿ ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆಎಸ್.ಪಿ.ಶಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ...
Read More »
Recent Comments