ಕೆಲವೊಂದು ಸ್ಥಳಗಳೇ ಹಾಗೆ ಒಂದು ಕಾಲದಲ್ಲಿ ಅಸಹ್ಯ ಹುಟ್ಟಿಸುವಂತೆ ಇದ್ದರೂ ಕೆಲ ಕಾಲದಲ್ಲಿ ಜನರನ್ನು ಸೂಜಿಗಲ್ಲಿನಂತೆ ಸೆಳೆಯುವ ಆಕರ್ಷಣೆ ಹೊಂದಿರುತ್ತವೆ. ಇಷ್ಟೆಲ್ಲ ಪೀಠಿಕೆ ಏಕೆ ಎನ್ನುತ್ತೀರಾ? ಹೌದು. ಶಿವಮೊಗ್ಗ ಕೀರ್ತಿ ನಗರದಿಂದ ಎಲ್ ಬಿಎಸ್‌ನಗರಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಗಾರೆ ಚಾನೆಲ್ ಇದಕ್ಕೆ ಉತ್ತಮ ಉದಾಹರಣೆ. ಬೇಸಿಗೆ ಕಾಲದಲ್ಲಿ ಬರೀ ಕೊಳಚೆಯನ್ನೇ ತುಂಬಿಕೊಂಡು ಅಸಹ್ಯ ಹುಟ್ಟಿಸುವ ಈ ನಾಲೆ ಮಳೆಗಾಲ ಬಂತೆದರೆ ಸಾಕು ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ತುಂಗಾ ನಾಲೆ ತುಂಬಿ ಹರಿದು ಬರುವಾಗ ಗಾರೆ ಚಾನಲ್ ಬಳಿ ಉಕ್ಕಿ ಕೆಳಗ್ಗೆ ಧುಮ್ಮಿಕ್ಕುತ್ತದೆ. ಹೀಗೆ ಧುಮ್ಮಿಕ್ಕುವ ನೀರನ್ನು ನೋಡಲು ಎರಡು ಕಣ್ಣುಗಳೂ ಸಾಲುವುದಿಲ್ಲ. ಹೀಗಾಗಿಯೇ ಮಳೆಗಾಲದಲ್ಲಿ ಗಾರೆ ಚಾನಲ್ ಧುಮಿಕ್ಕಲಾರಂಭಿಸುತ್ತಿದ್ದಂತೆ ಜನ ಇದನ್ನು ನೋಡಲು ಮುಗಿಬೀಳುತ್ತಾರೆ ಜೊತೆಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಾರೆ.
Recent Comments