Breaking News

ಸಿಟಿ ಬಸ್ಸಿನಲ್ಲಿ ಪಿಕ್ ಪಾಕೆಟ್‌ ಮಾಡಿದ್ದ ಆರೋಪಿಯ ಬಂಧನ

 

ದಿನಾಂಕ17/8/19 ರಂದು ಅಜ್ಜಂಪುರದ ಲೋಕೇಶಪ್ಪರವರು ಸಿಟಿ ಬಸ್ಸಿನಲ್ಲಿ ಹೋಗುತ್ತಿರುವಾಗ ಮೀನಾಕ್ಷಿ ಭವನದ ಹತ್ತಿರ ಅವರ ಜೇಬಿನಲ್ಲಿ ಇದ್ದ 25,000/- ಹಣವನ್ನು ಪಿಕ್ ಪಾಕೆಟ್‌ ಮಾಡಿದ್ದು ಈ ಬಗ್ಗೆ ಕೋಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆರೋಪಿ ಪತ್ತೆಗಾಗಿ ಮಾನ್ಯ ಪೋಲೀಸ್ ಅಧೀಕ್ಷಕರಾದ ಕೆ.ಎಂ . ಶಾಂತರಾಜ್. ಐ.ಪಿ.ಎಸ್. & ಹೆಚ್ಚು ವರಿ ಪೋಲೀಸ್ ಅಧೀಕ್ಷಕರಾದ ಡಾ.ಶೇಖರ್ .ಹೆಚ್.ಟಿ. ಕೆ.ಎಸ್.ಪಿ.ಎಸ್. , ಡಿ.ವೈ.ಎಸ್.ಪಿ.ಉಮೇಶ್ ಈಶ್ವರ ನಾಯ್ಕ, ಮತ್ತು ಸಿ.ಪಿ.ಐ ರವರಾದ ಕೆ.ಟಿ.ಗುರುರಾಜ. ರವರ ಮಾರ್ಗದರ್ಶನದಲ್ಲಿ ಕೋಟೆ ಪೋಲೀಸ್ ಠಾಣೆಯ ಪಿ.ಎಸ್.ಐ ರವರಾದ ಹೆಚ್.ತಿಮ್ಮಯ್ಯ ರವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿರುತ್ತೆ.

ಸದರಿ ತಂಡವು ದಿನಾಂಕ18/8/19 ರಂದು ನದೀಮ್ @ ನದ್ದು ಬಿನ್ ನಜ್ರುಲ್ಲ . 20 ವರ್ಷ, ಬುದ್ದಾನಗರ ಇವನನ್ನು ಬಂಧಿಸಿ ಆತನಿಂದ ಪಿಕ್ ಪಾಕೆಟ್‌ ಆಗಿದ್ದ ಹಣವನ್ನು ವಶಪಡಿಸಿಕೊಂಡಿರುತ್ತೆ.

ಆರೋಪಿಯನ್ನು ಪತ್ತೆ ಮಾಡಿದ ತಂಡದಲ್ಲಿ ಹೆಚ್.ವಿ.ತಿಮ್ಮಯ್ಯ.,ಪಿ.ಎಸ್.ಐ.,
ಸಿಬಂದಿಯವರಾದ ವಾಚ್ಯನಾಯ್ಕ್,ಗೋಪಾಲ, ಕಲ್ಲನಗೌಡ,ನಾಗಪ್ಪ ಅಡಿವೆಪ್ಪನವರ್ ಇದ್ದರು.

ಕೋಟಿ ಠಾಣಾ ಸಿಬಂದಿಯವರ ಕಾರ್ಯವನ್ನು ಪೋಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.

 

ADVT.

Contact for Advt 7676226690

Leave a Reply

Your email address will not be published. Required fields are marked *

*