Breaking News

Monthly Archives: May 2019

ಬೈಕ್ ಗೆ ಟೆಂಪೋ ಢಿಕ್ಕಿ : ಓರ್ವ ಸ್ಥಳದಲ್ಲೇ ಸಾವು,

  ಸಾಗರ ತಾಲ್ಲೂಕಿನ ಆವಿನಹಳ್ಳಿ ಸಮೀಪ ಕಾಗೇಹಳ್ಳ ಹೊಸೂರು ಬಳಿ ಬೈಕ್ ಹಾಗೂ ಟೆಂಪೋ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಚಲಾಯಿಸುತ್ತಿದ್ದ ಜೆಪಿ ನಗರದ ಓಂಕಾರ್(21) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿಂಬದಿ ಕುಳಿತಿದ್ದ ನಂದೀಶ್(13) ಹಾಗೂ ನಂದನ್(14) ಗೆ ತೀವ್ರ ಪೆಟ್ಟಾಗಿದೆ.. ವರದಿ: ಇಮ್ರಾನ್

Read More »

ಶಿವಮೊಗ್ಗ ಜೈಲಿನಲ್ಲಿ ವಿಚಾರಣಾಧೀನ ಖೈದಿ ಅನುಮಾನಾಸ್ಪ ಸಾವು.

ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿ ವಿಚಾರಣಾಧೀನ ಖೈದಿ ಅನುಮಾನಾಸ್ಪವಾಗಿ ಸಾವನ್ನಪ್ಪಿದ್ದಾನೆ. ಭದ್ರಾವತಿ ಮೂಲದ 30 ವರ್ಷದ ಖೈದಿ ಇರ್ಫಾನ್ ಮೃತಪಟ್ಟಿದ್ದು, ಇವನ ವಿರುದ್ಧ ಪೊಕ್ಸೋ ಪ್ರಕರಣ ದಾಖಲಾಗಿತ್ತು ಹಾಗೂ ಹಲವು ಅಪರಾಧ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದ ಆರೋಪಿಯಾಗಿದ್ದ. ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಭೇಟಿ ನೀಡಿದ್ದಾರೆ.

Read More »

ತಳ್ಳು ಗಾಡಿಗಳ ತೆರವು ವಿರೋಧಿಸಿ ಪ್ರತಿಭಟನೆ – ಟ್ರಾಫಿಕ್ ಜಾಮ್.

  ಶಿವಪ್ಪನಾಯಕನ ವೃತ್ತದ ಸುತ್ತಮುತ್ತಲು ಹೂ, ಹಣ್ಣು-ತರಕಾರಿಗಳನ್ನು ಮಾರಾಟ ಮಾಡುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಈ ಹಿಂದೆ ಮಾರಾಟ ಮಾಡಬೇಡಿ ಎಂದು ಪದೇಪದೇ ಹೇಳಿದರು ಸಹ ಮಾರಾಟ ಮಾಡುವುದನ್ನು ಬಿಟ್ಟಿಲ್ಲ. ಇದರಿಂದ ವಾಹನಗಳ ಸಂಚಾರಕ್ಕೆ ಹಾಗೂ ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಸಂಚಾರಕ್ಕೆ ಅಡ್ಡಿಯಾಗಿದೆ ವ್ಯಾಪಾರಸ್ಥರನ್ನು ತೆರವುಗೊಳಿಸಲು ಪೊಲೀಸರು ಮುಂದಾಗಿದ್ದರು. ಈ ವೇಳೆ ವ್ಯಾಪಾರಿಗಳ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪರಿಣಾಮವಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಯಿತು.  

Read More »

ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಡಾ.ಅಶ್ವಿನಿ…

ಜಿಲ್ಲೆಯಲ್ಲಿ ರೌಡಿ ಚಟುವಟಿಕೆಗಳನ್ನು ಹತ್ತಿಕ್ಕಲು, ಶಾಂತಿ ಸುವ್ಯವಸ್ಥೆ ಕಾಪಾಡಲು ಹಾಗೂ ಮುಂಬರಲಿರುವ ರಂಜಾನ್, ಗಣಪತಿ ಹಬ್ಬದಲ್ಲಿ ಯಾವುದೇ ರೀತಿಯಾದ ಅಹಿತಕರವಾದ ಘಟನೆಗಳು ನಡೆಯದಂದ್ದೆ ತಡೆಯುವ ಉದ್ದೇಶದಿಂದ ನಗರದ ಡಿಎಅರ್ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಲಾಯಿತು. ಶಿವಮೊಗ್ಗ ಉಪವಿಭಾಗ ವ್ಯಾಪ್ತಿಗೆ ಸುಮಾರು 1002 ರೌಡಿಗಳು ಇದ್ದು ಅವರ ಚಟುವಟಿಕೆ ಗಳ ಮೇಲೆ ತೀವ್ರಗಮನ ಹರಿಸಲಾಗಿದೆ. ಇನ್ನೂ ಮುಂದೆ ಕೂಡ ರೌಡಿಗಳ ಚಟುವಟಿಕೆಯನ್ನು ಹತ್ತಿಕ್ಕಲು ಇಲಾಖೆ ಸನ್ನದ್ದವಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ.ಅಶ್ವಿನಿಯವರು ತಿಳಿಸಿದರು..

Read More »

Chemical Found In Colgate Toothpaste Linked To Cancer..

  Colgate is one of the most popular brands of toothpaste in the world and one of the most widely used ones as well. If you check your medicine cabinet you probably have one in there as well. However, according to a recent study it turns out that Colgate contains a dangerous substance called Triclosa, which can be overall health ...

Read More »

ಮಲೆನಾಡಿನಲ್ಲಿ ಬರದ ಛಾಯೆ

ಮಲೆನಾಡಿನ ಹೆಬ್ಬಾಗಿಲು ಎನಿಸಿಕೊಂಡಿರು ಶಿವಮೊಗ್ಗ ಜಿಲ್ಲೆಯಲ್ಲಿಯೇ ಈ ಬಾರಿ ಭೀಕರ ಬರಗಾಲದ ಛಾಯೆ ಕಾಣಿಸಿಕೊಂಡಿದೆ. ಜಿಲ್ಲೆಯ ಅರೆಮಲೆನಾಡು ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಸೊರಬ ಹಾಗೂ ಶಿಕಾರಿಪುರ ತಾಲೂಕಿನ ಕೆಲ ಗ್ರಾಮಗಳ ಜನರು ಜೀವ ಜಲವನ್ನು ಅರಸಿ ಕಿಲೋಮೀಟರ್ ಗಟ್ಟಲೆ ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆರೆಕಟ್ಟೆಗಳು ಸಂಪೂರ್ಣವಾಗಿ ಒಣಗಿದ್ದು ನೀರಿನ ಸೆಲೆಯೇ ಇಲ್ಲದ ಸ್ಥಿತಿ ನಿರ್ಮಾಣವಾಗಿದ್ದರಿಂದ ಜಾನುವಾರುಗಳ ಸ್ಥಿತಿ ಹೇಳತೀರದಾಗಿದೆ..  ಶಿವಮೊಗ್ಗ ಜಿಲ್ಲೆಯ ಏಳು ತಾಲೂಕುಗಳ ಪೈಕಿ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ ಹಾಗೂ ಸೊರಬ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಒಟ್ಟಾರೆ ...

Read More »

ಬದುಕು ಎಂಬ ಚಿತ್ತಾರೆಯಲ್ಲಿ- ಮೇಘನಾ ಬಸವರಾಜ್

ಬದುಕು ಎಂಬ ಚಿತ್ತಾರೆಯಲ್ಲಿ ಚೀತ್ಕಾರಗಳೆಷ್ಟೋ, ಚಿರಸ್ಮರಣೀಯ ಕ್ಶಣಗಳೆಷ್ಟೋ .. ಚಮತ್ಕಾರ ಬಣ್ಣಗಳು ಸುಖ ದುಃಖದ ಬಣ್ಣ ಹಚ್ಚಿ ಚಕ್ಕೆಯು ಹೌದು ಹೌದು ಎಂದು ನೋಡುವ ಮಾನವ ಪಾಪ, ಆತನಿಗೆ ತಿಳಿದಿಲ್ಲ ಹೋಗಿದೆ ಆ ಚಿತ್ತಾರೆಯಲ್ಲಿ ಏನೋ ಅಡಗಿದೆ ಸಾಮಾನ್ಯ ಎನಿಸುವ ಚಿತ್ತಾರದಲ್ಲಿ ಸಾಮಾನ್ಯನಿಗೆ ನನಗೇನೋ ಕಾಣುತ್ತಿದೆ .. ಕಾಣುತ್ತಿದೆ ಹೌದು ಶೀಟ್ ಮಗುವಿನ ಆಕ್ರಂದನ ಆ ಮಗುವಿನ ಕರುಳ ಬಳ್ಳಿಯ ಚಿಂತೆ ಬೆಳೆದ ಮಗುವಿಗೆ ಜೊತೆ ನೀಡಿದ ಸಂಗಾತಿ, ಅವನು ಬಂದ ಕಷ್ಟಗಳ ಹಾದಿ ಇಂದು ಆ ಮಗುವಿನ ಸಾರ್ಥಕ ಬದುಕು ನೆನಪಿಗೆ ಬಂತು ...

Read More »

ಕರ್ನಾಟಕದ ಪ್ರಖ್ಯಾತ ರಂಗಕರ್ಮಿ, ‘ನಟ ರತ್ನಾಕರ’ ಮಾಸ್ಟರ್ ಹಿರಣ್ಣಯ್ಯ ನಿಧನ.

ಕರ್ನಾಟಕದ ಪ್ರಖ್ಯಾತ ರಂಗಕರ್ಮಿ, ‘ನಟ ರತ್ನಾಕರ’ ಮಾಸ್ಟರ್ ಹಿರಣ್ಣಯ್ಯ ನಿಧನ. ಹಿರಿಯ ರಂಗಕರ್ಮಿ, ಕಲಾವಿದ, ಅಭಿನಯ ಚತುರ ಮಾಸ್ಟರ್ ಹಿರಣ್ಣಯ್ಯ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಸ್ಟರ್ ಹಿರಣ್ಣಯ್ಯ ಇಂದು 10 ಗಂಟೆ ಸುಮಾರಿಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.. ಮಾಸ್ಟರ್ ಹಿರಣ್ಣಯ್ಯ ಅವರ ಲಂಚಾವತಾರ ನಾಟಕ ದೊಡ್ಡ ಮಟ್ಟಕ್ಕೆ ಖ್ಯಾತಿಗಳಿದೆ. ರಾಜಕೀಯವನ್ನು ವಿಡಂಬಣಾತ್ಮವಾಗಿ ಹೇಳುತ್ತಿದ್ದ ಲಂಚಾವತಾರ ನಾಟಕ ಸುಮಾರು 1000 ಪ್ರದರ್ಶನಗಳನ್ನು ನೀಡಿದೆ. ಮಾತಿನ ಮೂಲಕವೆ ರಾಜಕಾರಣಿಗಳನ್ನು ತಿವಿಯುತ್ತಿದ್ದ ಮಾಸ್ಟರ್ ಹಿರಣ್ಣಯ್ಯ ಅವರು ನಾಟಕಗಳ ಜೊತೆಗೆ ಚಿತ್ರರಂಗದಲ್ಲು ...

Read More »