ಶಿವಮೊಗ್ಗ: ಸಾಗರ ತಾಲೂಕಿನ ಆನಂದಪುರ ಸಮೀಪದ ಐಗಿನಬೈಲು ಕ್ರಾಸ್ ಬಳಿ ಶನಿವಾರ ಬೆಳಗಿನ ಜಾವ ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ ಹಾಗೂ ಡಾಂಬರು ತುಂಬಿದ ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ ಸಾಗರ ಕಡೆಗೆ ಬರುತ್ತಿದ್ದು, ಡಾಂಬರ್ ತುಂಬಿದ ಲಾರಿ ಶಿವಮೊಗ್ಗ ಕಡೆ ಹೋಗುತ್ತಿತ್ತು ಎನ್ನಲಾಗಿದೆ. ಅಪಘಾತದಲ್ಲಿ ಡಾಂಬರ್ ಲಾರಿಯ ಚಾಲಕ ಸೋಮವಾರ ಪೇಟೆಯ ಸಚಿನ್ (25) ಕಂಡಕ್ಟರ್ ಬಿಜಾಪುರದ ತಾಳಿಕೋಟೆ ಮಲಕಪ್ಪ(22)ಮತ್ತು ಗ್ಯಾಸ್ ಲಾರಿಯ ಚಾಲಕ ಶಿಕಾರಿಪುರದ ಕಲವತ್ತಿಯ ಲೋಕೇಶ್(42) ಮೃತಪಟ್ಟಿದ್ದಾರೆ. ಗ್ಯಾಸ್ ಸಿಲಿಂಡರ್ ಲಾರಿಯ ಕಂಡಕ್ಟರ್ ಉಮೇಶ್(28) ಎನ್ನುವವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ಲಾರಿಗಳು ನಜ್ಜು ಗುಜ್ಜಾಗಿದೆ. ಈ ಅಪಘಾತದಿಂದಾಗಿ ಶಿವಮೊಗ್ಗ-ಸಾಗರ ರಸ್ತೆ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು.
C News TV Kannada News Online in cnewstv