Breaking News

ರಾಷ್ಟ್ರೀಯ

ಬಜೆಟ್ ನಿಂದ ರೈತರು ಫುಲ್ ಖುಷ್.

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೊನೆಯ ಬಜೆಟ್ ನಲ್ಲಿ ರೈತರಿಗಾಗಿ ಯೋಜನೆಯನ್ನು ಜಾರಿಗೆ ತರಲು ಸಮ್ಮತಿಸಲಾಗಿದೆ. * “ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ” ಈ ಯೋಜನೆಯಡಿ 2 ಹೇಟ್ಟರ್ ಗಿಂತ ಕಡಿಮೆ ಭೂಮಿ ಹೊಂದಿರುವ ರೈತರ ಬ್ಯಾಂಕ್ ಖಾತೆಗಳಿಗೆ ಕೇಂದ್ರ ಸರ್ಕಾರ ನೇರವಾಗಿ 6000 ರೂಪಾಯಿಗಳನ್ನು ಮೂರು ಹಂತಗಳಲ್ಲಿ ಜಮಾ ಮಾಡಲಿದೆ. * ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ 12 ಕೋಟಿ ಸಣ್ಣ ರೈತರಿಗೆ ಅನುಕೂಲಕರವಾಗಲಿದೆ. * ರೈತರಿಗೆ ಕನಿಷ್ಠ ಬೆಂಬಲ ಬೆಲೆ ...

Read More »

ಹೊಸ ವರ್ಷದ ಮೊದಲ ದಿನ ಭಾರತದಲ್ಲಿ ಜನಿಸಿದ ಮಕ್ಕಳ ಸಂಖ್ಯೆ ಗೊತ್ತಾ ?

ನವದೆಹಲಿ: ಹೊಸ ವರ್ಷದ ಮೊದಲ ದಿನ ಭಾರತದಲ್ಲಿ 69,944 ಮಕ್ಕಳು ಜನಿಸಿದ್ದಾರೆ ಎಂದು ಯುನಿಸೆಫ್‌ ಅಂಕಿ-ಅಂಶ ನೀಡಿದೆ. ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳು ಹುಟ್ಟಿದ ದೇಶ ಭಾರತವೇ ಆಗಿದೆ. ಚೀನಾ ಎರಡನೇ ಸ್ಥಾನದಲ್ಲಿದ್ದು ಹೊಸ ವರ್ಷದಂದು ಅಲ್ಲಿ 44,940 ಮಕ್ಕಳು ಜನಿಸಿದ್ದಾರೆ. ಮೂರನೇ ಸ್ಥಾನದಲ್ಲಿ ನೈಜೀರಿಯಾ ಇದ್ದು ಅಲ್ಲಿ 25,685 ಮಕ್ಕಳು ಜನಿಸಿದ್ದಾರೆ. ಜಗತ್ತಿನಲ್ಲಿ ಹುಟ್ಟಿದ ಒಟ್ಟು ಮಕ್ಕಳಲ್ಲಿ ಶೇ 18 ಮಕ್ಕಳು ಭಾರತದಲ್ಲಿಯೇ ಹುಟ್ಟಿವೆ.. 2019 ರ ಮೊದಲ ದಿನ ವಿಶ್ವದಾದ್ಯಂತ 3,95,072 ಮಕ್ಕಳು ಜನಿಸಿದ್ದಾರೆ. ವಿಶ್ವದಾದ್ಯಂತ ಜನಿಸಿರುವ ಮಕ್ಕಳಲ್ಲಿ ದಕ್ಷಿಣ ಏಷ್ಯಾ ...

Read More »

ಪಾಕ್ ನಲ್ಲಿ ನಡೆಯುವ SAARC ಸಮ್ಮೇಳನಕ್ಕೆ ಪ್ರಧಾನಿ ಮೋದಿಗೆ ಆಹ್ವಾನ

  ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನವು SAARC (ಸೌತ್ ಏಷ್ಯನ್ ಅಸೋಸಿಯೇಷನ್ ಫಾರ್ ರೀಜಿನಲ್ ಕೋ ಆಪರೇಷನ್) ಸಮ್ಮೇಳನಕ್ಕೆ ಆಹ್ವಾನ ಮಾಡಲಿದೆ ಎಂದು ಅಲ್ಲಿನ ದಿನ ಪತ್ರಿಕೆ ‘ಡಾನ್’ ವರದಿ ಮಾಡಿದೆ. ವಿದೇಶಾಂಗ ಕಚೇರಿ ವಕ್ತಾರರ ಹೇಳಿಕೆ ಆಧರಿಸಿ ಈ ವರದಿ ಮಾಡಲಾಗಿದೆ. “ಗಡಿಯಾಚೆಗಿನ ಭಯೋತ್ಪಾದನಾ ದಾಳಿ” ಕಾರಣಕ್ಕೆ 2016ರಲ್ಲಿ ಪಾಕಿಸ್ತಾನದ ಸಾರ್ಕ್ ಸಮ್ಮೇಳನವನ್ನು ಭಾರತ ಬಹಿಷ್ಕರಿಸಿತ್ತು. ಆ ನಂತರ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್ ಕೂಡ ಆ ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದವು. ಎಂಟು ರಾಷ್ಟ್ರಗಳ ಪೈಕಿ ಯಾವುದೇ ಒಂದು ದೇಶ ...

Read More »

ಗಜಾ ಚಂಡಮಾರುತಕ್ಕೆ ತತ್ತರಿಸಿದ ಜನತೆ

ಗಜ’ ಚಂಡಮಾರುತದ ಅಬ್ಬರಕ್ಕೆ 13 ಮಂದಿ ಬಲಿಯಾಗಿದ್ದಾರೆ. ಇಂದು ಬೆಳಗ್ಗಿನ ಜಾವವೇ ತಮಿಳುನಾಡು ಹಾಗೂ ಪುದುಚೆರಿಯ ತೀರವನ್ನು ತಲುಪಿದ ‘ಗಜ’ದ ಅಬ್ಬರಕ್ಕೆ ಜನತೆ ನಲುಗಿ ಹೋಗಿದ್ದಾರೆ. ಎರಡೂ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಈಗಾಗಲೇ ಸುಮಾರು 76 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಲಾಗಿದೆ. ಇನ್ನು, ಇಂದು ಬಹುತೇಕ ಜಿಲ್ಲೆಗಳಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಡಲು ತೀರದ ಪ್ರದೇಶಗಳಾದ ನಾಗಪಟ್ಟಿನಂ, ತಿರುವರೂರು, ತಂಜಾವೂರಿನಲ್ಲಿ ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ವಿದ್ಯುತ್‌ ಸಮಸ್ಯೆಯುಂಟಾಗಿದೆ. ಅಲ್ಲದೆ, ತಮಿಳುನಾಡಿನ ಕಡಲೂರು, ನಾಗಪಟ್ಟಿನಂ, ತೋಂಡಿ ಹಾಗೂ ಪಂಬನ್‌ ಹಾಗೂ ...

Read More »

ಅನಂತ ಅಮರ.‌

  ಅನಂತಕುಮಾರ್ ಜೀವನ ಹಾಗೂ ನಡೆದು ಬಂದ ಹಾದಿಯ ಕಿರು ಪರಿಚಯ. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅನಂತ ಕುಮಾರ್ ಕಳೆದ ಕೆಲ ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಸೇವೆಗಳು ಹಾಗೂ ಸಾರ್ವಜನಿಕ ಕಾರ್ಯಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿವೆ. ಅನಂತ ಕುಮಾರ್ ಹುಟ್ಟಿದ್ದು 22ನೆಜುಲೈ 1959 ರಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ. ತಂದೆ ನಾರಾಯಣ ಶಾಸ್ತ್ರಿ ಮತ್ತು ತಾಯಿ ಗಿರಿಜ ಎನ್ ಶಾಸ್ತ್ರಿ. ಅನಂತಕುಮಾರ್ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿದ ಹುಬ್ಬಳ್ಳಿಯ ಕೆ ...

Read More »

“ಐಕ್ಯತಾ ಪ್ರತಿಮೆ ವಿಶೇಷತೆಗಳು”

“ಐಕ್ಯತಾ ಪ್ರತಿಮೆ ವಿಶೇಷತೆಗಳು ಭಾರತದ ಉಕ್ಕಿನ ಮನುಷ್ಯ ಎಂದೇ ಬಿಂಬಿತವಾಗಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ರ 143 ನೇ ಜನ್ಮದಿನದಂದು ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ, “ಐಕ್ಯತಾ ಪ್ರತಿಮೆ” ಯನ್ನು ಇಂದು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದರು. ಸ್ವಾತಂತ್ರ್ಯಾನಂತರ ಭಾರತದಲ್ಲಿ ಹರಿದುಹಂಚಿ ಹೋಗಿದ್ದ ರಾಜಮನೆತನಗಳನ್ನು ಒಗ್ಗೂಡಿಸಿ, ಅವರನ್ನೆಲ್ಲ ಭಾರತ ಎಂಬ ಒಂದೇ ಸೂರಿನಡಿ ತಂದ ಕೀರ್ತಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಗೆ ಸಲ್ಲುತ್ತದೆ. ಸರ್ದಾರ್ ಸರೋವರ ತಟದಲ್ಲಿ ನರ್ಮದಾ ಡ್ಯಾಂ ಕಡೆ ಮುಖ ಮಾಡಿ ಈ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಇದು ವಿಶ್ವದಲ್ಲೇ ಅತಿ ...

Read More »

ಐಕ್ಯತಾ ಪ್ರತಿಮೆ ಅನಾವರಣಕ್ಕೆ ಕ್ಷಣ ಗಣನೆ

ಭಾರತದ ಉಕ್ಕಿನ ಮನುಷ್ಯ ಎಂದೇ ಬಿಂಬಿತವಾಗಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಇಂದು 11.30 ಕ್ಕೆ ” ಐಕ್ಯತಾ ಪ್ರತಿಮೆ” ಪ್ರತಿಮೆ ಇಂದು ಅನಾವರಣವಾಗಲಿದೆ.. ಸರ್ದಾರ್ ಸರೋವರ ತಟದಲ್ಲಿ ನರ್ಮದಾ ಡ್ಯಾಂ ಕಡೆ ಮುಖ ಮಾಡಿ ನಿರ್ಮಿತವಾಗಿರುವ ಈ ಪ್ರತಿಮೆ ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ.ಅಮೆರಿಕದ ಸ್ಟ್ಯಾಚು ಆಫ್ ಲಿಬರ್ಟಿಗಿಂತ ನಾಲ್ಕು ಪಟ್ಟು ಎತ್ತರ ಅಂದರೆ ಸುಮಾರು 600 ಅಡಿ ಇರುವ ಸರ್ದಾರ್ ಪಟೇಲರ ಉಕ್ಕಿನ ಪ್ರತಿಮೆ ಈಗ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. ಐಕ್ಯತಾ ...

Read More »

ದೆಹಲಿಯ ಕೆಂಪು ಕೋಟೆಯಲ್ಲಿ ನೇತಾಜಿಗೆ ನಮನ

ನವದೆಹಲಿ: ಸಾಮಾನ್ಯವಾಗಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನ ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡಲಾಗುತ್ತಿತ್ತು ಅದರೆ ಇಂದು ಸುಭಾಷ್ ಚಂದ್ರ ಬೋಸ್ ಅವರು ಸ್ಥಾಪಿಸಿದ್ದ ಆಝಾದ್ ಹಿಂದ್ ಗೌರ್ನಮೆಂಟ್ ನ ಸ್ಥಾಪನೆಯಾಗಿ 75 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಸುಭಾಷ್ ಚಂದ್ರ ಬೋಸರಿಗೆ ಗೌರವ ಸಲ್ಲಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ತ್ರಿವರ್ಣ ಧ್ವಜಾರೋಹಣ ಮಾಡಿದ್ದರು. ಮತ್ತು ಆಝಾದ್ ಹಿಂದ್ ಫೌಜ್ ಮ್ಯೂಸಿಯಂ ಗೆ ಶಿಲಾನ್ಯಾಸ ನೆರವೇರಿಸಿದರು. 1943 ಅ.21 ರಂದು ನೇತಾಜಿ ಸುಭಾಷ್ ಚಂದ್ರ ಬೋಸರು ಭಾರತ ದೇಶದ ಪ್ರಥಮ ಸ್ವಾಯತ್ತ ಸರ್ಕಾರವನ್ನು ರಚಿಸಿದ್ದರು. ...

Read More »

ನಾಯಿಗಳಿಗಾಗಿಯೇ ಮೀಸಲಾದ ದೇಶದ ಮೊದಲ ಉದ್ಯಾನವನ

ಹೈದರಾಬಾದ್: ನಾಯಿಗಳಿಗಾಗಿಯೇ ಮೀಸಲಾದ ದೇಶದ ಮೊದಲ ಉದ್ಯಾನವನ ಇಲ್ಲಿನ ಕೊಂಡಾಪುರ್‌ ಪ್ರದೇಶದಲ್ಲಿ ಉದ್ಘಾಟನೆಯಾಗಿದೆ. 1.3 ಎಕರೆ ಪ್ರದೇಶದಲ್ಲಿರುವ ಈ ಕೇಂದ್ರ ನಾಯಿಗಳಿಗೆ ಅನುಕೂಲವಾದ ನಡಿಗೆಪಥ, ವಿಹಾರಕ್ಕೆ ಅನುಕೂಲವಾದ ಜಾಗ, ಕ್ಲಿನಿಕ್‌ ಸಹ ಒಳಗೊಂಡಿದೆ. ಈ ಉದ್ಯಾನವನ್ನು ತೆಲಂಗಾಣ ಮುಖ್ಯ ಕಾರ್ಯದರ್ಶಿ ಎಸ್.ಕೆ. ಜೋಶಿ ಉದ್ಘಾಟಿಸಿದರು. ‘₹1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಉದ್ಯಾನದಲ್ಲಿ ಸಾಕುಪ್ರಾಣಿಗಳಿಗೆ ಉಚಿತ ಲಸಿಕೆ, ಆರೋಗ್ಯ ತಪಾಸಣೆ ಮಾಡಲಾಗುತ್ತೆ. ಜತೆಗೆ ವ್ಯದ್ಯರು ಹಾಗೂ ತರಬೇತುದಾರರನ್ನು ನೇಮಕ ಮಾಡಲಾಗುವುದು’ ಎಂದು ಹೈದರಾಬಾದ್ ಪುರಸಭೆಯ ವಲಯ ಆಯುಕ್ತ ಹರಿಚಂದನ ತಿಳಿಸಿದರು.’ನಾಯಿಗಳಿಗೆ ತರಬೇತಿ ಮತ್ತು ವ್ಯಾಯಾಮಕ್ಕೆ ಅನುಕೂಲವಾದ ...

Read More »

ಕಾಶ್ಮೀರದಲ್ಲಿ ಮೂವರು ಉಗ್ರರನ್ನು ಸದೆಬಡಿದ ಭಾರತೀಯ ಸೇನೆ

ಪುಲ್ವಾಮಾ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಹತ್ಯೆಯಾದ ಮೂವರು ಭಯೋತ್ಪಾದಕರೂ ತೆಹ್ರಿಕ್ ಉಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದವರೆಂಬುದು ತಿಳಿದುಬಂದಿದೆ. ಕಾಶ್ಮೀರ: ಎನ್ ಕೌಂಟರ್ ದಾಳಿಯಲ್ಲಿ ಮೂವರು ಉಗ್ರರ ಹತ್ಯೆ ಬುಧವಾರವಷ್ಟೇ ಶ್ರೀನಗರದಲ್ಲಿ ನಡೆದಿದ್ದ ಎನ್ ಕೌಂಟರ್ ದಾಳಿಯಲ್ಲಿ ಮೂವರು ಉಗ್ರರನ್ನು ಸದೆಬಡಿಯುವಲ್ಲಿ ಸೇನೆ ಯಶಸ್ವಿಯಾಗಿತ್ತು. ಈ ಸಂದರ್ಭದಲ್ಲಿ ಉಗ್ರರು ನಡೆಸಿದ ಪ್ರತಿದಾಳಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದರು.ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಮನನ್ ಬಶಿರ್ ವಾನಿ ...

Read More »