Breaking News

ಶಿವಮೊಗ್ಗ

ಅ. 15 ರಂದು ಬಿ.ವೈ ರಾಘವೇಂದ್ರ ನಾಮಪತ್ರ ಸಲ್ಲಿಕೆ..

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಪ್ರಮುಖರ ವಿಶೇಷ ಸಭೆಯಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ನವರು ಬಿ.ವೈ. ರಾಘವೇಂದ್ರ ಹೆಸರನ್ನು ಪ್ರಸ್ತಾಪಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ ಅನುಮೋದಿಸುವ ಮೂಲಕ ರಾಘವೇಂದ್ರ ಹೆಸರನ್ನು ಅಂತಿಮಗೊಳಿಸಲಾಯಿತು. ಬಳಿಕ ಮಾಜಿ ಸಭಾಪತಿ ಡಿ.ಎಸ್.ಶಂಕರಮೂರ್ತಿ ರಾಘವೇಂದ್ರರನ್ನು ಅಭಿನಂದಿಸಿ ಮಾತನಾಡಿ, ಪಕ್ಷದ ಅಭ್ಯರ್ಧಿಯನ್ನು ಸರ್ವಾನುಮತದಿಂದ ಗೆಲ್ಲಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ. ಈ ನಿಟ್ಟಿನಲ್ಲಿ ಮುಖಂಡರು, ಎಲ್ಲಾ ಕಾರ್ಯಕರ್ತರು ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು. ಸಭೆಯಲ್ಲಿ ಮಾತನಾಡಿದ ಬಿ.ಜೆ.ಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ, ಉಪ ಚುನಾವಣೆಗೆ ರಾಘವೇಂದ್ರ ರವರನ್ನು ಈ ಕ್ಷೇತ್ರದಿಂದ ಅಯ್ಕೆ ...

Read More »

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸಮರ

ಚುನಾವಣಾ ದಿನಾಂಕ ಘೋಷಣೆ ಯಾಗುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಶಿಕಾರಿಪುರ ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ವೈ.ರಾಘ ವೇಂದ್ರ ಅಭ್ಯರ್ಥಿ ಎಂದು ಘೋಷಿಸಿ ದರು. ನಿನ್ನೆ ನಗರದ ಬಿಜೆಪಿ ಕಾರ್ಯಾ ಲಯದಲ್ಲಿ ನಡೆದ ಕೋರ್‌ಕಮಿಟಿ ಸಭೆಯಲ್ಲಿ ಬಿ.ವೈ.ರಾಘವೇಂದ್ರ ಅಭ್ಯರ್ಥಿಯಾಗಿರುವುದನ್ನು ಅಧಿಕೃತ ಘೋಷಿಸಲಾಗಿದೆ. ಇದರಿಂದಾಗಿ ಬಿಜೆಪಿಯಲ್ಲಿ ಅಭ್ಯರ್ಥಿ ಯಾರು ಎಂಬ ಗೊಂದಲಗಳಿಗೆ ತೆರೆ ಬಿದ್ದಂತಾ ಗಿದೆ. ಇನ್ನು ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆಂಬುದು ಕುತೂಹಲದ ಅಂಶವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರ ನಡೆಸುತ್ತಿದ್ದು, ಉಪ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಮ್ಮತದ ...

Read More »

ಸಮಿಶ್ರ ಪಕ್ಷದ ಟೀಕೆಟ್ ಯಾರಿಗೆ ?????

ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ಬಿಜೆಪಿ ಪಕ್ಷದಿಂದ ಬಿಎಸ್‌ವೈ ತಮ್ಮ ಪುತ್ರ ಬಿ.ವೈ. ರಾಘವೇಂದ್ರ ಪರ ಪ್ರಚಾರ ಆರಂಭ ಮಾಡಿದ್ದಾರೆ. ಈ ಬಾರಿ ಗೆಲುವು ನಮ್ಮದೇ ಎಂಬ ವಿಶ್ವಾಸದಲ್ಲಿದ್ದಾರೆ. ಆದರೆ ಇತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯ ಹೆಸರು ಸಹ ಹೊರ ಹಾಕಿಲ್ಲ. ಕಡೆ ಪಕ್ಷ ಕಾಂಗ್ರೆಸ್ ಅಧವಾ ಜೆಡಿಎಸ್‌ಗೆ ಟಿಕೆಟ್ ಆಗುತ್ತಾ ಅನ್ನೋದು ಕೂಡ ಪ್ರಶ್ನೆಯಾಗಿದೆ. ಎರಡು ಪಕ್ಷದಿಂದ ಅನೇಕ ಆಕ್ಷಾಂಕಿಗಳ ಹೆಸರು ಕೇಳಿ ಬರುತ್ತಿದೆ. ಮತ್ತೊಂದು ಕಡೆ ೩ ತಿಂಗಳಿಗೆ ಚುನಾವಣೆ ಮಾಡು ವುದೇ ವ್ಯರ್ಥ. ಆದರೆ ಇದು ಅನಿವಾರ್ಯ ವಾಗಿರುವು ...

Read More »

ವಿಶೇಷ ಪೂಜೆ ಸಲ್ಲಿಸಿದ ಬಿ.ವೈ ರಾಘವೇಂದ್ರ

  ಶಿವಮೊಗ್ಗ ಕ್ಷೇತ್ರದ ಲೇಕಸಭೆ ಚುನಾವಣೆಯ ಬಿ.ಜೆ.ಪಿ ಅಭ್ಯರ್ಧಿಯಾಗಿ ಬಿ.ಎಸ್. ಯಡಿಯೂರಪ್ಪನವರ ಪುತ್ರ ಬಿ.ವೈ ರಾಘವೇಂದ್ರ ಎಂದು ಘೋಷಣೆ ಮಾಡಲಾಯಿತು. ಇಂದು ಬೆಳ್ಳಗ್ಗೆ ಬಿ.ವೈ ರಾಘವೇಂದ್ರ, ಬಿ.ಎಸ್.ಯಡಿಯೂರಪ್ಪ, ರುದ್ರೇಗೌಡ ಹಾಗು ಪಕ್ಷದ ಅನೇಕ ಹಿರಿಯರು ಸೇರಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.ನವೆಂಬರ್ 3 ರಂದು ಉಪ ಚುನಾವಣೆ ನಡೆಯಲಿದ್ದು, 6 ರಂದು ಫಲಿತಾಂಶ ಹೊರಬಿಳಲಿದೆ. ಈ ಚುನಾವಣೆಯ ಅಧಿಕಾರವಧಿ ಕೇವಲ 4 ತಿಂಗಳು, ಅದರೂ ಸಹ ಈ ಚುನಾವಣೆ ಪತ್ರಿಷ್ಧೆಯಾಗಿದ್ದು, ಗೆಲ್ಲುವ ವಿಶ್ವಾಸ ವ್ಯಕ್ತವಾಗುತ್ತಿದೆ.

Read More »

ಹಳೇ ಜೈಲು ಜಾಗ ಸಂಪೂರ್ಣ ಸಾರ್ವಜನಿಕ ಉಪಯೋಗಕ್ಕೆ ಮೀಸಲು -ಬಿ.ಎಸ್.ಯಡಿಯೂರಪ್ಪ

ಮಾಜಿ ಮುಖ್ಯ ಮಂತ್ರಿಗಳು, ರಾಜ್ಯ ಬಿಜೆಪಿಯ ಅಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಶಿವಮೊಗ್ಗ ನಗರದ ಹಳೇ ಜೈಲು ಅವರಣವನ್ನು ಪರಿವೀಕ್ಷಣೆ ನಡೆಸಿ, ಮಾಧ್ಯಮದವರೊಂದಿಗೆ ಮಾತನಾಡಿದ ಕ್ಷಣ..

Read More »

ಸಾಗುವಾನಿ ದಿಮ್ಮಿ ಸಾಗಿಸುವವರು ಗ್ರಾಮಸ್ಧರ ವಶಕ್ಕೆ

ಸಾಗುವಾನಿ ಮರದ ದಿಮ್ಮಿ ಗಳನ್ನು ಉಂಬಳೇಬೈಲ್ ಅರಣ್ಯ ಇಲಾಖೆ ಯಿಂದ ವ್ಯಾಗನಾರ್ ಕಾರನಲ್ಲಿ (  KA 34 M 2972  )ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮದ ಜನರೇ ಕಾರಿನ ಸಮೇತ ಅರೋಪಿಗಳನ್ನು ಹಿಡಿದು ಪೋಲಿಸರ ಹಾಗು ಅರಣ್ಯ ಅಧಿಕಾರಗಳ ವಶಕ್ಕೆ ಒಪ್ಪಿಸಿದ್ದಾರೆ

Read More »

ಇಂದಿನಿಂದಲೇ ನೀತಿ ಸಂಹಿತೆ ಜಾರಿ- ಜಿಲ್ಲಾಧಿಕಾರಿ ಕೆ.ಎ.ದಯಾನಂದ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ದಿನಾಂಕ ನಿಗದಿಯಾದ ಹಿನ್ನಲೇಯಲ್ಲೇ , ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಾಗಲಿದೆ. ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಲು ಈಗಾಗಲೇ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜಕೀಯ ಪಕ್ಷಗಳು, ವ್ಯಕ್ತಿಗಳ ಪ್ರಚಾರದ ಬ್ಯಾನರ್, ಪೋಸ್ಟರ್ ಇತ್ಯಾದಿಗಳನ್ನು 24ಗಂಟೆಗಳ ಒಳಗಾಗಿ ತೆರವುಗೊಳಿಸಲು ಸೂಚನೆ ನೀಡಲಾಗಿದ್ದು, ಕಾರ್ಯ ಆರಂಭಿಸಲಾಗಿದೆ. ರಾಜಕೀಯ ಪಕ್ಷಗಳು ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವ ಪೂರ್ವದಲ್ಲಿ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ..ಮಾದರಿ ನೀತಿ ಸಂಹಿತೆ ಜಾರಿಗಾಗಿ ಈಗಾಗಲೇ ತಂಡಗಳನ್ನು ರಚಿಸಲಾಗಿದೆ. 162 ಸೆಕ್ಟರ್ ಅಧಿಕಾರಿಗಳು, 9 ಅಕೌಂಟಿಂಗ್ ತಂಡಗಳು, 39 ...

Read More »

ಬಿ.ಎಸ್.ವೈ ಮಗನ‌ಪರ ಪ್ರಚಾರು ಶುರು

ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾಗುತ್ತಿದಂತೆ ಬಿ.ಎಸ್’ವೈ ಮಗನ‌ಪರ ಪ್ರಚಾರು ಶುರುಮಾಡಿದ್ದಾರೆ.ಶಿಕಾರಿಪುರ ತಾಲೂಕಿನ ನೀರಾವರಿ ಯೋಜನೆ ಚಾಲನೆ ನೀಡಿದ ಅವರು ಇಂದು ಚುನಾವಣೆ ದಿನಾಂಕ ಘೋಷಣೆ ನೀಡುತ್ತಿದ್ದಂತೆ .ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ ಬಿ ವೈ ರಾಘವೇಂದ್ರ ಅವರನ್ನು ಮತ್ತೋಮ್ಮೆ ಸಂಸದರಾಗಿ ಆಯ್ಕೆ ಮಾಡಲು ಜನತೆ ಮನವಿ ಮಾಡಿದರು.

Read More »

ಬೆಂಗಳೂರು-ಶಿವಮೊಗ್ಗ ಇಂಟರ್ ಸಿಟಿ ರೈಲಿನ ಸಂಚಾರವನ್ನು ತಾಳಗುಪ್ಪದವರೆಗೆ ವಿಸ್ತರಣೆ..ರೈಲ್ವೆ ಇಲಾಖೆ ಆದೇಶ..

ಚುನಾವಣಾ ಸಮಯದಲ್ಲಿ ಸಾಗರಕ್ಕೆ ಆಗಮಿಸಿದ್ದ ಕೇಂದ್ರ ಸಂಪರ್ಕ ಮತ್ತು ಸಂವಹನ ಹಾಗೂ ರೈಲ್ವೆ ರಾಜ್ಯ ಸಚಿವ ಮನೋಜ್ ಕುಮಾರ್ ಸಿನ್ಹಾ ಅವರಿಗೆ ಪ್ರಯಾಣಿಕರ ಹಿತ ದೃಷ್ಟಿಯಿಂದ ಶಿವಮೊಗ್ಗ – ಬೆಂಗಳೂರು ಇಂಟರ್ಸಿಟಿ ರೈಲ್ವೆ ಸಂಪರ್ಕವನ್ನು ತಾಳುಗುಪ್ಪಕ್ಕೆ ವಿಸ್ತರಿಸುವಂತೆ ಮನವಿ ಸಲ್ಲಿಸಲಾಗಿತ್ತು ನಂತರ ಯಡಿಯೂರಪ್ಪ ನವರ ನೇತೃತ್ವದಲ್ಲಿ 8-8-2018 ರಂದು ದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಸೂಕ್ತ ವಾಗಿ ಸ್ಪಂದಿಸಿದ ಸಚಿವರು ಇಂದು ತಾಳುಗುಪ್ಪಕ್ಕೆ ಇಂಟರ್ಸಿಟಿ ರೈಲ್ವೆ ಸಂಪರ್ಕ ವಿಸ್ತರಿಸಿ ಆದೇಶ ಹೊರಡಿಸಿರುತ್ತಾರೆ.ಬೆಂಗಳೂರು-ಶಿವಮೊಗ್ಗ ಇಂಟರ್ ಸಿಟಿ ರೈಲಿನ ಸಂಚಾರವನ್ನು ತಾಳಗುಪ್ಪದವರೆಗೆ ವಿಸ್ತರಣೆ..ರೈಲ್ವೆ ...

Read More »