ಚುನಾವಣಾ ಸಮಯದಲ್ಲಿ ಸಾಗರಕ್ಕೆ ಆಗಮಿಸಿದ್ದ ಕೇಂದ್ರ ಸಂಪರ್ಕ ಮತ್ತು ಸಂವಹನ ಹಾಗೂ ರೈಲ್ವೆ ರಾಜ್ಯ ಸಚಿವ ಮನೋಜ್ ಕುಮಾರ್ ಸಿನ್ಹಾ ಅವರಿಗೆ ಪ್ರಯಾಣಿಕರ ಹಿತ ದೃಷ್ಟಿಯಿಂದ ಶಿವಮೊಗ್ಗ – ಬೆಂಗಳೂರು ಇಂಟರ್ಸಿಟಿ ರೈಲ್ವೆ ಸಂಪರ್ಕವನ್ನು ತಾಳುಗುಪ್ಪಕ್ಕೆ ವಿಸ್ತರಿಸುವಂತೆ ಮನವಿ ಸಲ್ಲಿಸಲಾಗಿತ್ತು ನಂತರ ಯಡಿಯೂರಪ್ಪ ನವರ ನೇತೃತ್ವದಲ್ಲಿ 8-8-2018 ರಂದು ದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಸೂಕ್ತ ವಾಗಿ ಸ್ಪಂದಿಸಿದ ಸಚಿವರು ಇಂದು ತಾಳುಗುಪ್ಪಕ್ಕೆ ಇಂಟರ್ಸಿಟಿ ರೈಲ್ವೆ ಸಂಪರ್ಕ ವಿಸ್ತರಿಸಿ ಆದೇಶ ಹೊರಡಿಸಿರುತ್ತಾರೆ.ಬೆಂಗಳೂರು-ಶಿವಮೊಗ್ಗ ಇಂಟರ್ ಸಿಟಿ ರೈಲಿನ ಸಂಚಾರವನ್ನು ತಾಳಗುಪ್ಪದವರೆಗೆ ವಿಸ್ತರಣೆ..ರೈಲ್ವೆ ಇಲಾಖೆ ಆದೇಶ..
ಅಕ್ಟೋಬರ್ 10ರಿಂದ ಪ್ರತಿದಿನ
7.55ಕ್ಕೆ ಶಿವಮೊಗ್ಗ ತಲುಪುತ್ತಿದ್ದ ಇಂಟರ್ ಸಿಟಿ ಟ್ರೈನ್ ಅ 10 ರಿಂದ ರಾತ್ರಿ 8.00ಕ್ಕೆ ಶಿವಮೊಗ್ಗ ಬಿಟ್ಟು ರಾತ್ರಿ 10.15ಕ್ಕೆ ತಾಳಗುಪ್ಪ ತಲುಪಲಿದೆ.
ಅ 11ರ ಬೆಳಗಿನ ಜಾವ 3.50ಕ್ಕೆ ತಾಳಗುಪ್ಪ ಬಿಟ್ಟು, ಶಿವಮೊಗ್ಗಕ್ಕೆ ಬೆಳಿಗ್ಗೆ 6.05ಕ್ಕೆ ತಲುಪಲಿದ್ದು, ಶಿವಮೊಗ್ಗದಿಂದ ಯಥಾರೀತಿ ಬೆಳಿಗ್ಗೆ 06.40ಕ್ಕೆ ಬಿಟ್ಟು ಬೆಳಿಗ್ಗೆ 11.35ಕ್ಕೆ ಬೆಂಗಳೂರು ತಲುಪುತ್ತದೆ.
Recent Comments