Breaking News

ಸಮಿಶ್ರ ಪಕ್ಷದ ಟೀಕೆಟ್ ಯಾರಿಗೆ ?????

ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ಬಿಜೆಪಿ ಪಕ್ಷದಿಂದ ಬಿಎಸ್‌ವೈ ತಮ್ಮ ಪುತ್ರ ಬಿ.ವೈ. ರಾಘವೇಂದ್ರ ಪರ ಪ್ರಚಾರ ಆರಂಭ ಮಾಡಿದ್ದಾರೆ. ಈ ಬಾರಿ ಗೆಲುವು ನಮ್ಮದೇ ಎಂಬ ವಿಶ್ವಾಸದಲ್ಲಿದ್ದಾರೆ. ಆದರೆ ಇತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯ ಹೆಸರು ಸಹ ಹೊರ ಹಾಕಿಲ್ಲ. ಕಡೆ ಪಕ್ಷ ಕಾಂಗ್ರೆಸ್ ಅಧವಾ ಜೆಡಿಎಸ್‌ಗೆ ಟಿಕೆಟ್ ಆಗುತ್ತಾ ಅನ್ನೋದು ಕೂಡ ಪ್ರಶ್ನೆಯಾಗಿದೆ.
ಎರಡು ಪಕ್ಷದಿಂದ ಅನೇಕ ಆಕ್ಷಾಂಕಿಗಳ ಹೆಸರು ಕೇಳಿ ಬರುತ್ತಿದೆ. ಮತ್ತೊಂದು ಕಡೆ ೩ ತಿಂಗಳಿಗೆ ಚುನಾವಣೆ ಮಾಡು ವುದೇ ವ್ಯರ್ಥ. ಆದರೆ ಇದು ಅನಿವಾರ್ಯ ವಾಗಿರುವು ದರಿಂದ ಮಾಡಲೇಬೇಕಾಗಿದೆ. ಕಾಂಗ್ರೆಸ್-ಜೆಡಿಎಸ್ ಎರಡು ಪಕ್ಷದಿಂದ ತಮಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಜನತೆ ಮೈತ್ರಿ ಸರ್ಕಾ ರಕ್ಕೆ ಒಲಿಯುತ್ತಾರೋ? ಅಥವಾ ಬಿಜೆಪಿಗೆ ವಿಜಯಮಾಲೆ ತೋಡಿಸುತ್ತಾರಾ? ಎಂದು ಕಾದು ನೋಡಬೇಕಾಗಿದೆ.

ನಮ್ಮ ಪಕ್ಷ ಕಳೆದ ಚುನಾವಣೆ ಯಲ್ಲಿ ಸೀಟು ಗೆದ್ದಿಲ್ಲ. ಆದರೆ ಶಿವಮೊಗ್ಗ ಗ್ರಾಮಾಂತರ, ಸೊರಬ, ತೀರ್ಥಹಳ್ಳಿ, ಭದ್ರಾ ವತಿ ಭಾಗದಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದಿದ್ದೆ. ಹಾಗಾಗಿ ಈ ಬಾರಿ ಚುನಾವಣೆ ಯಲ್ಲಿ ನಮಗೆ ಟಿಕೆಟ್ ನೀಡಬೇಕು. ಇದು ಕೇವಲ ಪಕ್ಷದ ಆಸೆ. ಅಷ್ಟೇ ಅಲ್ಲದೆ ಪಕ್ಷದ ಕಾರ್ಯಕರ್ತರ ಒತ್ತಾಯ ಕೂಡ ಅಗಿದೆ. ಜೆಡಿಎಸ್ ಪಕ್ಷದಿಂದ ಮಧುಬಂಗಾರಪ್ಪನವರು ಆಯ್ಕೆ ಬಹುತೇಕ ಖಚಿತವಾಗಿದ್ದು, ಈ ಹಿಂದಿನ ಚುನಾವಣೆಯಲ್ಲಿ ಮಧುಂಗಾರಪ್ಪನವರು ಯಾವುದೇ ಗಾಳಿಗೆ ಸೋತಿದ್ದಾರೆ. ಈ ಬಾರಿ ಮಧುಬಂಗಾರಪ್ಪನವರಿಗೆ ಗೆಲುವಿನ ಸಾಧ್ಯತೆ ಹೆಚ್ಚಿರುವ ಕಾರಣ ಜೆಡಿಎಸ್‌ಗೆ ಬಿಟ್ಟು ಕೊಡಿ ಎಂಬುದು ಪಕ್ಷದ ಒತ್ತಾಯವಾಗಿದೆ.

-ಮಂಜುನಾಧ ಗೌಡ
ಜೆಡಿಎಸ್ ಜಿಲ್ಲಾಧ್ಯಕ್ಷರು

ಕಾಂಗ್ರೆಸ್‌ನಲ್ಲಿ ನಾಳೆ ಮಧ್ಯಾಹ್ನ ೩ ಗಂಟೆಗೆ ಬೆಂಗಳೂ ರಿನ ಕಪಿಸಿಸಿ ಕಛೇರಿಯಲ್ಲಿ ಸಭೆ ಕರೆಯಾಲಾಗಿದ್ದು, ಸಭೆಯಲ್ಲಿ ವೇಣುಗೋಪಾಲ, ದಿನೇಶ್ ಗುಂಡೂರಾವ್, ಸಿದ್ದ ರಾಮಯ್ಯನವರು ಜಿಲ್ಲಾ ಮುಖಂಡರ ಜೊತೆ ಚರ್ಚೆ ನಡೆಸಿ ಯಾರಿಗೆ ಟೀಕೆಟ್ ನೀಡುವುದು ಎಂದು ತೀರ್ಮಾನ ತೆಗೆದು ಕೊಳ್ಳಲಾಗುವುದು. ಕಾಂಗ್ರೆಸ್ ಪಕ್ಷಕ್ಕೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿದೆ. ಆದರೆ ಅಭ್ಯರ್ಥಿ ಹೆಸರು ಇನ್ನೂ ಬಹಿರಂಗ ಪಡಿಸಿಲ್ಲ. ಕಾಂಗ್ರೆಸ್ ಬಲ ಹೆಚ್ಚಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಟಿಕೆಟ್ ಸಿಗುವುದು ಬಹುತೇಕ ಖಚಿತ. ಒಂದು ವೇಳೆ ಜೆಡಿಎಸ್‌ಗೆ ಟಿಕೆಟ್ ನೀಡಿದರೂ ನಾವು ಬೆಂಬಲಿಸುತ್ತೇವೆ.

-ತೀ.ನಾ. ಶ್ರೀನಿವಾಸ
ಕಾಂಗ್ರೇಸ್ ಜಿಲ್ಲಾಧ್ಯಕ್ಷರು.

Leave a Reply

Your email address will not be published. Required fields are marked *

*