Breaking News

ಶಿವಮೊಗ್ಗ

ಶಿವಮೊಗ್ಗ ಜೆಡಿಎಸ್ ಗ್ರಾಮಾಂತರ ಅಧ್ಯಕ್ಷ ಟಿಬಿ ಜಗದೀಶ್ ಬಿಜೆಪಿಗೆ ಸೇರ್ಪಡೆ

  ಶಿವಮೊಗ್ಗ ಗ್ರಾಮಾಂತರದ ಪ್ರಭಾವಿ ನಾಯಕ ಜೆಡಿಎಸ್ ನ ಅಧ್ಯಕ್ಷ ಶ್ರೀ ಟಿಬಿ ಜಗದೀಶ್ ರವರಿಗೆ ಎಪಿಎಂಸಿ ಚುನಾವಣೆಯ ಸಂದರ್ಭದಲ್ಲಿ ಅಧ್ಯಕ್ಷನಾಗಿ ಮಾಡುತ್ತೇವೆ ಎಂಬ ಆಶ್ವಾಸನೆಯನ್ನು ಹೆಚ್ ಡಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ,ಮಾಜಿ ಶಾಸಕಿ ಶಾರದಾ ಪೂರ್ಯ ನಾಯ್ಕ್ ನೀಡಿದ್ದರು. ಅದರೆ ಅವರು ನೀಡಿದ ಮಾತನ್ನು ಉಳಿಸಿಕೊಳ್ಳದೆ, ಪಕ್ಷದಲ್ಲಿ ಅವರನ್ನು ನಡೆಸಿಕೊಂಡ ನೀತಿಗೆ ಬೇಸತ್ತು, ನಾಳೆ ಸಂಜೆ ನಡೆಯುತ್ತಿರುವ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಎಲ್ಲಾ ನಾಯಕರ ಸಮೂಕದಲ್ಲಿ ಬಿಜೆಪಿ ಸೇರಲಿದ್ದಾರೆ.. ಜಗದೀಶ್ ಸೇರ್ಪಡೆ ಚುನಾವಣೆಯ ಮೇಲೆ ಪ್ರಭಾವವನ್ನು ಬೀರಲಿದೆ.

Read More »

ಲಾರಿಗಳ ಮುಖಾಮುಖಿ ಡಿಕ್ಕಿ ಮೂವರ ಸಾವು

ಶಿವಮೊಗ್ಗ: ಸಾಗರ ತಾಲೂಕಿನ ಆನಂದಪುರ ಸಮೀಪದ ಐಗಿನಬೈಲು ಕ್ರಾಸ್ ಬಳಿ ಶನಿವಾರ ಬೆಳಗಿನ ಜಾವ ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ ಹಾಗೂ ಡಾಂಬರು ತುಂಬಿದ ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.     ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ ಸಾಗರ ಕಡೆಗೆ ಬರುತ್ತಿದ್ದು, ಡಾಂಬರ್ ತುಂಬಿದ ಲಾರಿ ಶಿವಮೊಗ್ಗ ಕಡೆ ಹೋಗುತ್ತಿತ್ತು ಎನ್ನಲಾಗಿದೆ. ಅಪಘಾತದಲ್ಲಿ ಡಾಂಬರ್ ಲಾರಿಯ ಚಾಲಕ ಸೋಮವಾರ ಪೇಟೆಯ ಸಚಿನ್ (25) ಕಂಡಕ್ಟರ್ ಬಿಜಾಪುರದ ತಾಳಿಕೋಟೆ ಮಲಕಪ್ಪ(22)ಮತ್ತು ಗ್ಯಾಸ್ ಲಾರಿಯ ಚಾಲಕ ಶಿಕಾರಿಪುರದ ಕಲವತ್ತಿಯ ಲೋಕೇಶ್(42) ಮೃತಪಟ್ಟಿದ್ದಾರೆ. ...

Read More »

ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪ್ರಚಾರ ಶುರು.

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಶುಕ್ರವಾರ ಶಿಕಾರಿಪುರ ತಾಲೂಕಿನ ನೇರಲಗಿ ಗ್ರಾಮದಲ್ಲಿ ಪ್ರಚಾರ ಸಭೆ ನಡೆಸಿದರು. ನೇರಲಗಿ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಇಂದಿನ ಪ್ರಚಾರ ಆರಂಭಿಸಿದರು. ಪೂಜೆ ಬಳಿಕ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ನಡೆದ ಶಿರಾಳಕೊಪ್ಪ, ತೋಗರ್ಸಿ, ಹಾಗೂ ಸುಣ್ಣದಕೊಪ್ಪ ಮಹಾಶಕ್ತಿ ಕೇಂದ್ರಗಳ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾತನಾಡಿದ ರಾಘವೇಂದ್ರ ಅವರು ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿಯನ್ನಾಗಿಸಲು ಸಂಕಲ್ಪ ಮಾಡಿದರು.

Read More »

ದಾಖಲೆ ಇಲ್ಲದ 2 ಕೋಟಿ ವಶ.

ಸಾಗರ ತಾಲೂಕಿನ ಅಮಟಿಕೊಪ್ಪದ ಚೆಕ್ ಪೋಸ್ಟ್ ಹತ್ತಿರ 2 ಕೋಟಿ ಹಣವನ್ನು ಎರ್ಟಿಗಾ ಕಾರ್ ನಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್ ನ ಅಸಿಸ್ಟೆಂಟ್ ಮ್ಯಾನೇಜರ್ ತೆಗೆದುಕೊಂಡು ಹೋಗುತ್ತಿದ್ದರು.ಅನುಮಾನಗೊಂಡು ಪ್ಲೇಯಿಂಗ್ ಸ್ಕ್ವಾಡ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಸರಿಯಾದ ದಾಖಲೆ ಇಲ್ಲದ ಕಾರಣ ಅಧಿಕಾರಿಗಳು ಐಟಿಯವರ ವಶಕ್ಕೆ ಹಣವನ್ನು ಒಪ್ಪಿಸಿದ್ದಾರೆ…

Read More »

ಒಂದೇ ಮರಕ್ಕೆ ನೇಣು ಹಾಕಿಕೊಂಡು ಸ್ನೇಹಿತರು.

  ಮಒಂದೇ ಮರಕ್ಕೆ ನೇಣು ಹಾಕಿಕೊಂಡು ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟಕ ಹೊಸನಗರದ ಮಾರಿಗುಡ್ಡದಲ್ಲಿ ನಡೆದಿದ್ದೆ..ಶ್ರೀಕಾಂತ್(29) ಮತ್ತು ಪ್ರಕಾಶ (32) ಮೃತ ಸ್ನೇಹಿತರು .ಸ್ಮಶಾನದಲ್ಲಿಯೇ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಇಬ್ಬರು ಹೊಸನಗರದಲ್ಲಿ ಕೂಲಿಕಾರ್ಮಿಕರಾಗಿದ್ದ, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Read More »

ನೇಣುಬಿಗಿದುಕೊಂಡು ಪ್ರೇಮಿಗಳಿಬ್ಬರು ಆತ್ಮಹತ್ಯೆ.

ಶಿವಮೊಗ್ಗ ನ್ಯೂಮಂಡ್ಲಿ ಸಮೀಪದ ಪಂಪ್ ಹೌಸ್ ಬಳಿಯ ಮನೆಯಲ್ಲಿ ನೇಣು ಬಿಗಿದುಕೊಂಡಿರುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದ ನ್ಯೂ ಮಂಡ್ಲಿಯ ಕೌಶಿಕ್(19) ಹಾಗೂ ಸಾಗರ ತಾಲೂಕು ಹುಲಿದೇವರ ಬನದ ಮೆಹತಾಜ್ ಶಿರಿನ್(18)ಇಬ್ಬರು ಸಹ ಅನ್ಯ ಧರ್ಮದ ಪ್ರೇಮಿಗಳಾಗಿದ್ದು, ಮದುವೆಗೆ ಎರಡು ಮನೆಯಲ್ಲಿ ಒಪ್ಪುವುದಿಲ್ಲ ಎಂಬ ಕಾರಣದಿಂದ ನೊಂದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರೂ ಶಿವಮೊಗ್ಗದ ನ್ಯಾಷನಲ್ ಸಂಜೆ ಕಾಲೇಜಿನ ವಿದ್ಯಾರ್ಥಿಗಳಗಿದ್ದು, ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Read More »

ದೇಶ ಮಾರುವವರ ಎದುರು ಚಾಯ್ ಮಾರುವವ ಉತ್ತಮ

  ಪ್ರಧಾನಿ ಮೋದಿಗೆ ಷಂಡ ಎಂದು ಪದಬಳಕೆ ಮಾಡಿದ ಕಾಂಗ್ರೇಸ್ ಶಾಸಕರ ಹಾಗೂ ಪಕ್ಷದ ವಿರುದ್ಧ ಆಯನೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು. ಷಂಡ ಪದ ಬಳಕೆ ಸರಿಯಲ್ಲ. ದೇಶದ ಮೇಲೆ ಹಲವು ದಾಳಿಗಳಾದ ಸಂದರ್ಭದಲ್ಲಿ ನಾಮರ್ಧರಾಗಿದ್ದವರು ಕಾಂಗ್ರೆಸ್ ನವರೇ ಹೊರತು, ಮೋದಿಯಲ್ಲ. ಮೋದಿಯವರು ಈಗಾಗಲೇ ಅದನ್ನು ಸಾಬೀತು ಮಾಡಿದ್ದಾರೆ. ಮೋದಿ ಭಾರತದ ಗೌರವವನ್ನು ಎತ್ತಿಹಿಡಿದಿದ್ದಾರೆ. ಜನಾರ್ಧನ ಪೂಜಾರಿ, ಶೀಲಾದೀಕ್ಷಿತ್ ಸೇರಿದಂತೆ ಹಲವು ನಾಯಕರು ಮೋದಿ ಹಾಗೂ ಮೋದಿಯ ಕಾರ್ಯವನ್ನು ಹೊಗಳುತ್ತಿದ್ದಾರೆ.ಸೈನಿಕರ ದಾಳಿಗೆ ಸಾಕ್ಷಿ ಕೇಳಿದವರು ಷಂಡರಾಗುತ್ತಾರೆ. ನರೇಂದ್ರ ಮೋದಿಯವರು, ಷಂಡ ಹೌದೋ, ಅಲ್ಲವೋ ಎಂಬುದು, ...

Read More »

ಮಧು ಬಂಗಾರಪ್ಪ ಪರವಾಗಿ ಪ್ರಚಾರ ಆರಂಭಿಸಿದ ದೇವೇಗೌಡ

ಜೆ.ಡಿ.ಎಸ್ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆ ಕ್ಯಾಂಟೀನ್ ಇಂದು ಆರಂಭಗೊಂಡಿದೆ, ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರಕ್ಕಾಗಿ ಮಾಜಿ ಪ್ರಧಾನಿ ದೇವೇಗೌಡರು ಶಿವಮೊಗ್ಗಗೆ ಆಗಮಿಸಿದ್ದರು. ಅವರು ಮಾತನಾಡುತ್ತಿದ್ದಾಗ ಹಾಸನ, ಮಂಡ್ಯದಲ್ಲಿ ಮೊಮ್ಮಕ್ಕಳು ಗೆಲುವು ಪ್ರಚಾರ ಮಾಡಲು ಮಧು ಬಂಗಾರಪ್ಪ ಪರ ಪ್ರಚಾರದಲ್ಲಿ ಶಿವಮೊಗ್ಗ. ಮತ್ತು ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಸಹ ಪ್ರಚಾರದಲ್ಲಿ ಮಧುರ ಪ್ರಚಾರದಲ್ಲಿದ್ದಾರೆ. ಮತ್ತು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡ ನಂತರ ಸೀಟ್ ಹಂಚಿಕೆ ವಿಚಾರದ ಗೊಂದಲಗಳು ಇರೋಡು ಮಾದ್ಯಮಗಳಲ್ಲಿ ಹೊರತುಪಡಿಸಿ ನಮ್ಮ ನಡುವೆ ಇಲ್ಲವೇ ಉತ್ತರ ನೀಡಿದರು …

Read More »

ಭೀಕರ ರಸ್ತೆ ಅಪಘಾತ -ಓರ್ವ ಸಾವು, ಮೂವರಿಗೆ ಗಂಭೀರ ಗಾಯ.

ಸಾಗರ ತಾಲ್ಲೂಕಿನ ಆನಂದಪುರಂ ಸಮೀಪದ ಬೈರಾಪುರ ಎಂಬಲ್ಲಿ ಕಾರು ಅಪಘಾತಕ್ಕೀಡಾಗಿದ್ದು, ಬಾಲ ಸಾಹೇಬ್ ಕೃಷ್ಣ ದೇಸಾಯಿ(48) ಎಂಬುವವರು ಮೃತಪಟ್ಟಿದ್ದಾರೆ. ಹಾಗು ಕಾರಿನಲ್ಲಿದ್ದ ಮೂವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಟ್ಟ ಮಂಜು ಕವಿದಿದ್ದ ಕಾರಣ ರಸ್ತೆ ಕಾಣದೇ ಇದ್ದುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.ಅಪಘಾತದ ರಭಸಕ್ಕೆ ಕಾರು ರಸ್ತೆ ಬದಿಯಲ್ಲಿದ್ದ ಕಟ್ಟೆಯೊಂದರ ನಡುವೆ ಸಿಲುಕಿಕೊಂಡಿದೆ. ಭೀಕರ ರಸ್ತೆ ಅಪಘಾತ -ಓರ್ವ ಸಾವು, ಮೂವರಿಗೆ ಗಂಭೀರ ಗಾಯ.

Read More »

ಅಗ್ನಿ ಆಕಸ್ಮಿಕಕ್ಕೆ ಐದು ಮನೆಗಳು ಭಸ್ಮ -ಬೀದಿಗೆ ಬಿದ್ದ ಬಡ ಕೂಲಿ ಕಾರ್ಮಿಕರು

    ಶಿವಮೊಗ್ಗ ಹೊರವಲಯದ ಅಬ್ಬಲಗೆರೆ ಸಮೀಪದ ಮತ್ತೋಡು ಗ್ರಾಮದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಐದು ಗುಡಿಸಲುಗಳು ಹಾಗೂ ಒಂದು ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಶನಿವಾರ ಸಂಜೆ ಮತ್ತೋಡು ಗ್ರಾಮದ ಎಲ್ಲರೂ ಕೂಲಿ ಕೆಲಸ ಮಾಡಿ ಬಂದು ಮನೆಯ ಕೆಲಸವನ್ನೆಲ್ಲೂ ಮುಗಿಸಿ ತಮ್ಮೂರಿನಲ್ಲಿ ಟಿವಿ ಇರುವವರಮನೆಗೆ ಟಿವಿ ನೋಡಲು ಹೋಗಿದ್ದರು. ಆದರೆ ಅವರು ಟಿವಿ ನೋಡಿ ತಮ್ಮ ಮನೆಗೆ ಬರುವಷ್ಟರಲ್ಲಿ ಮನೆಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ನಂದಿಸಲು ಹೋದ ಕೆಲ ಮಹಿಳೆಯರು ಸುಟ್ಟಗಾಯಕ್ಕೂ ತುತ್ತಾಗಿದ್ದಾರೆ. ಕೊನೆಗೂ ಐದು ಗುಡಿಸಲುಗಳು ಹಾಗೂ ಒಂದು ಅಂಗಡಿ ...

Read More »