Breaking News

ಶಿವಮೊಗ್ಗ

ಶಿವಮೊಗ್ಗ ನಗರದಲ್ಲಿ ಪರಿಹಾರ ಕಾರ್ಯ ಚುರುಕು: ಚಾರುಲತಾ ಸೋಮಲ್

  ಶಿವಮೊಗ್ಗ ನಗರದಲ್ಲಿ ನೆರೆ ಪರಿಸ್ಥಿತಿ ಸಂಪೂರ್ಣವಾಗಿ ಇಳಿದಿದ್ದು, ಪುನರ್ ವಸತಿ ಸೇರಿದಂತೆ ಪರಿಹಾರ ಕಾಮಗಾರಿಗಳನ್ನು ಚುರುಕುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ನೆರೆ ಪೀಡಿತ ಪ್ರದೇಶಗಳಿಂದ 250 ಕುಟುಂಬಗಳ ಸುಮಾರು 1675 ಜನರನ್ನು ರಕ್ಷಿಸಲಾಗಿದೆ. ಇವರಲ್ಲಿ 556ಮಂದಿಯನ್ನು ಬೋಟ್‍ಗಳ ಸಹಾಯದಿಂದ ನೆರೆ ಪೀಡಿತ ಸ್ಥಳದಿಂದ ರಕ್ಷಿಸಲಾಗಿದೆ. ನಗರದಲ್ಲಿ ತೆರೆಯಲಾಗಿರುವ 15 ಪರಿಹಾರ ಕೇಂದ್ರಗಳಲ್ಲಿ 2500 ಮಂದಿ ಸಂತ್ರಸ್ತರು ಆಶ್ರಯ ಪಡೆದಿದ್ದು, ಅವರಿಗೆ ಬಿಸಿಯೂಟ, ಬಟ್ಟೆ, ಚಪ್ಪಲ್, ಸ್ಯಾನಿಟರಿ ಪ್ಯಾಡ್‍ಗಳು ಸೇರಿದಂತೆ ಅಗತ್ಯ ...

Read More »

ಶಿವಮೊಗ್ಗದ ನೆರೆಪೀಡಿತ ಬಡಾವಣೆ ಶಾಂತಮ್ಮ ಲೇ ಔಟ್ ಗೆ ಬಿಗಿ ಪೊಲೀಸ್ ಬಂದೋಬಸ್ತ್.

ಶಾಂತಮ್ಮ ಲೇ ಔಟ್  ಬಡಾವಣೆಯ ಎಲ್ಲ ಮನೆಗಳನ್ನು ಖಾಲಿ ಮಾಡಿಸಿದ್ದರಿಂದ ಎಲ್ಲರೂ ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡು ಗಂಜಿಕೇಂದ್ರದಲ್ಲಿ ಬೀಡು ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಂತಮ್ಮ ಲೇ ಔಟ್ ಸೇರಿದ್ದಂದೆ ನೆರೆಪೀಡಿತ ಪ್ರದೇಶಕ್ಕೆ ಹೋಗಿ ಯಾರು ಅಪಾಯಕ್ಕೆ ಸಿಲುಕಬಾರದು ಹಾಗೂ ಕಳ್ಳತನವಾಗಬಾರದು ಎಂಬ ಉದ್ದೇಶದಿಂದ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಖುದ್ದು ಎಸ್ ಪಿ ಶಾಂತರಾಜು ಅವರು ಸ್ಥಳಕ್ಕೆ ಭೇಟಿ ನೀಡಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Read More »

ಜಿಲ್ಲೆಯಲ್ಲಿ 14 ನೆರೆ ಪರಿಹಾರ ಕೇಂದ್ರ ಆರಂಭ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

  ಜಿಲ್ಲೆಯ ಹಲವು ಭಾಗಗಳಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ಇದುವರೆಗೆ ಒಟ್ಟು 14 ನೆರೆ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ 7, ಭದ್ರಾವತಿ ಮತ್ತು ತೀರ್ಥಹಳ್ಳಿಯಲ್ಲಿ ತಲಾ ಒಂದು ಹಾಗೂ ಸೊರಬ ತಾಲೂಕಿನಲ್ಲಿ 5 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು 2250 ಮಂದಿ ಈ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಪರಿಹಾರ ಕೇಂದ್ರ ವಿವರ: ಶಿವಮೊಗ್ಗ ನಗರದ ಇಮಾಮ್ ಬಾಡ, ಸೀಗೆಹಟ್ಟಿ, ರಾಮಣ್ಣ ಶ್ರೇಷ್ಟಿ ಪಾರ್ಕ್, ಗುಡ್ಡೇಕಲ್, ಪುಟ್ಟಪ್ಪ ಕ್ಯಾಂಪ್, ...

Read More »

ಸೆಲ್ಫಿ ಸ್ಪಾಟ್ ಆಯ್ತು ಈ ಚಾನೆಲ್..

ಕೆಲವೊಂದು ಸ್ಥಳಗಳೇ ಹಾಗೆ ಒಂದು ಕಾಲದಲ್ಲಿ ಅಸಹ್ಯ ಹುಟ್ಟಿಸುವಂತೆ ಇದ್ದರೂ ಕೆಲ ಕಾಲದಲ್ಲಿ ಜನರನ್ನು ಸೂಜಿಗಲ್ಲಿನಂತೆ‌ ಸೆಳೆಯುವ ಆಕರ್ಷಣೆ ಹೊಂದಿರುತ್ತವೆ. ಇಷ್ಟೆಲ್ಲ ಪೀಠಿಕೆ ಏಕೆ ಎನ್ನುತ್ತೀರಾ? ಹೌದು. ಶಿವಮೊಗ್ಗ ಕೀರ್ತಿ ನಗರದಿಂದ ಎಲ್ ಬಿಎಸ್‌ನಗರಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಗಾರೆ ಚಾನೆಲ್ ಇದಕ್ಕೆ ಉತ್ತಮ ಉದಾಹರಣೆ. ಬೇಸಿಗೆ ಕಾಲದಲ್ಲಿ ಬರೀ ಕೊಳಚೆಯನ್ನೇ ತುಂಬಿಕೊಂಡು ಅಸಹ್ಯ ಹುಟ್ಟಿಸುವ ಈ ನಾಲೆ ಮಳೆಗಾಲ ಬಂತೆದರೆ ಸಾಕು ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ತುಂಗಾ ನಾಲೆ ತುಂಬಿ ಹರಿದು ಬರುವಾಗ ಗಾರೆ ಚಾನಲ್ ಬಳಿ ಉಕ್ಕಿ ಕೆಳಗ್ಗೆ ಧುಮ್ಮಿಕ್ಕುತ್ತದೆ. ಹೀಗೆ ...

Read More »

ಇಂದಿರಾ ಕೊಲೆ ಆರೋಪಿ ಬಂಧನ.

  ಭದ್ರಾವತಿ ತಾಲೂಕು ಕಾಳಿಂಗನಹಳ್ಳಿಯಲ್ಲಿ ಅಪ್ರಾಪ್ತ‌ ಬಾಲಕಿಯನ್ನು ಕೊಲೆ ಮಾಡಿದ ಆರೋಪಿಯನ್ನು ಭದ್ರಾವತಿ ಹೊಸಮನೆ ಪೊಲೀಸರು ಬಂಧಿಸಿದ್ದಾರೆ. ಕಾಳಿಂಗನಹಳ್ಳಿಯ ಶಿವಕುಮಾರ್‌ ಬಂಧಿತ ಆರೋಪಿಯಾಗಿದ್ದು, ಇಂದಿರಾಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಅದರೆ ಇಂದಿರಾ ಪ್ರೀತಿಯನ್ನು ನಿರಾಕರಿಸಿದ್ದರಿಂದ ಆಕ್ರೋಶಗೊಂಡು ಶಿವಕುಮಾರ್‌ ರಾತ್ರಿ ಮಲಗಿದ್ದಾಗ ಯಾರಿಗೂ ತಿಳಿಯದಂತೆ ಅಡುಗೆ ಮನೆಗೆ ಆಕೆಯನ್ನು ಎಳೆದೊಯ್ದು ಕತ್ತು ಸೀಳಿ ಕೊಲೆ ಮಾಡಲಾಗಿದೆ.

Read More »

ವಿದ್ಯಾರ್ಥಿನಿಯ ಬರ್ಭರ ಹತ್ಯೆ.

ವಿದ್ಯಾರ್ಥಿನಿಯ ಬರ್ಭರ ಹತ್ಯೆ ಶಿವಮೊಗ್ಗ: ಮನೆಯಲ್ಲಿಯೇ ವಿದ್ಯಾರ್ಥಿನಿಯ ಕತ್ತನ್ನು ಕೊಯ್ದು ಬರ್ಭರವಾಗಿ ಕೊಲೆ ಮಾಡಿರುವ ಘಟನೆ ಭದ್ರಾವತಿ ತಾಲೂಕಿನ ಕಾಳಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿನಿ ಇಂದಿರಾ(17) ಕೊಲೆಯಾದ ವಿದ್ಯಾರ್ಥಿನಿ. ತಂದೆಯನ್ನು ಕಳೆದುಕೊಂಡಿದ್ದ ಇಂದಿರಾ‌ ಕಾಳಿಂಗಹಳ್ಳಿಯಲ್ಲಿರುವ ತನ್ನ ಚಿಕ್ಕಪ್ಪ ಹಾಗೂ ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ನಡೆಸುತ್ತಿದ್ದಳು. ಇಂದಿರಾಳ ಚಿಕ್ಕಪ್ಪ ಚಿಕ್ಕಮ್ಮ ಇಬ್ಬರೂ ಮೂಗರಾಗಿದ್ದು ಇವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ದುಷ್ಕರ್ಮಿಗಳು ಇಂದಿರಾಳ ಕತ್ತುಕೊಯ್ದು ಬರ್ಭರವಾಗಿ ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ‌‌ಎಸ್.ಪಿ.ಶಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ...

Read More »

ನೂತನ ಎಸ್‍ಪಿಯಾಗಿ ಕೆ.ಎಂ.ಶಾಂತರಾಜು ಅಧಿಕಾರ ಸ್ವೀಕಾರ

  ಶಿವಮೊಗ್ಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಟಾಧಿಕಾರಿಯಾಗಿ ಕೆ.ಎಂ.ಶಾಂತರಾಜು ಅವರು ಶನಿವಾರ ಕರ್ತವ್ಯ ವಹಿಸಿಕೊಂಡರು. ನಿರ್ಗಮಿತ ಪೊಲೀಸ್ ವರಿಷ್ಟಾಧಿಕಾರಿ ಡಾ.ಅಶ್ವಿನಿ ಅವರು ನೂತನ ಎಸ್ಪಿಯವರಿಗೆ ಅಧಿಕಾರ ಹಸ್ತಾಂತರಿಸಿ ಪುಷ್ಪಗುಚ್ಛ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಂ.ಶಾಂತರಾಜು ಅವರು, ಜಿಲ್ಲೆಯಲ್ಲಿ ಈ ಹಿಂದೆ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಇದೇ ಪ್ರಥಮ ಬಾರಿಗೆ ಪೊಲೀಸ್ ವರಿಷ್ಟಾಧಿಕಾರಿಯಾಗಿ ಕರ್ತವ್ಯ ವಹಿಸುತ್ತಿದ್ದೇನೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವುದು ಇಲಾಖೆಯ ಪ್ರಾಥಮಿಕ ಕರ್ತವ್ಯವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಜಿಲ್ಲೆಯಲ್ಲಿ ...

Read More »

ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

ಇದ್ದಕ್ಕಿದ್ದಂತೆ ಕಾರೊಂದು ಹೊತ್ತಿ ಉರಿದ ಘಟನೆ ಸಾಗರದ ಸಮೀಪ ಬಳಸಗೋಡಿನಲ್ಲಿ ನಡೆದಿದೆ. ಇಂದು ಮುಂಜಾನೆ ಈ ಘಟನೆ ಸಂಭವಿಸಿದ್ದು, ಶಿವಮೊಗ್ಗ ನೊಂದಣಿಯ ಟಾಟಾ ಇಂಡಿಗೋ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದು ಎಂದು ಶಂಕಿಸಲಾಗಿದ್ದು, ಘಟನೆ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯ ಇಲ್ಲ. ಇಮ್ರಾನ್ ಸಾಗರ್’

Read More »

ಮೀನು ಹಿಡಿಯಲು ಹೋದ ಮೂವರು ಯುವಕರ ಸಾವು.

  ಮೀನು ಹಿಡಿಯಲು ಹೋದ ಮೂವರು ಯುವಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸೊರಬದಲ್ಲಿ ಇಂದು ನಡೆದಿದೆ. ತಾಲೂಕಿನ ಚಂದ್ರಗುತ್ತಿ ಹೋಬಳಿ ಹೊಳೆಜೋಳದಗುಡ್ಡೆ ಗ್ರಾಮದ ವಾಸಿಗಳಾದ ಪ್ರದೀಪ ಬಿನ್ ಕೆರಿಯಪ್ಪ (19), ಶರತ್ ಬಿನ್ ಕುಬೇರಪ್ಪ (15) ಹಾಗೂ ಕಾರ್ತಿಕ್ ಬಿನ್ ರಾಮಪ್ಪ (17) ಮೃತಪಟ್ಟ ದುರ್ಧೈವಿಗಳು. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಗ್ರಾಮದ ಹೊಸ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದು, ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ಸಿಪಿಐ ಉಮಾಪತಿ, ಪೊಲೀಸ್ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.  

Read More »

ತೆರೆದ ಮ್ಯಾನ್‍ಹೋಲ್‍ಗಳನ್ನು 10ದಿನಗಳ ಒಳಗಾಗಿ ಮುಚ್ಚದಿದ್ದರೆ ಕ್ರಿಮಿನಲ್ ಮೊಕದ್ದಮೆ: ಚಾರುಲತಾ ಸೋಮಲ್ ಎಚ್ಚರಿಕೆ

  ಶಿವಮೊಗ್ಗ ನಗರದ ಹಲವು ವಾರ್ಡ್‍ಗಳ ವ್ಯಾಪ್ತಿಯಲ್ಲಿ ತೆರೆದ ಮ್ಯಾನ್‍ಹೋಲ್‍ಗಳು ಇರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಅಂತಹ ಮ್ಯಾನ್‍ಹೋಲ್‍ಗಳನ್ನು 10ದಿನಗಳ ಒಳಗಾಗಿ ಮುಚ್ಚದಿದ್ದರೆ ಸಂಬಂಧಪಟ್ಟ ವ್ಯಾಪ್ತಿಯ ಇಂಜಿನಿಯರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಎಚ್ಚರಿಕೆ ನೀಡಿದ್ದಾರೆ. ವಾರ್ಡ್‍ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಕಡೆಗಳಲ್ಲಿ ತೆರೆದ ಮ್ಯಾನ್‍ಹೋಲ್‍ಗಳು ಕಂಡು ಬಂದಿದ್ದು, ಅವುಗಳನ್ನು ತಕ್ಷಣ ಮುಚ್ಚುವಂತೆ ಸಂಬಂಧಪಟ್ಟ ಇಂಜಿನಿಯರ್‍ಗಳಿಗೆ ಎಚ್ಚರಿಕೆ ನೀಡಲಾಗಿದೆ. ತೆರೆದ ಮ್ಯಾನ್‍ಹೋಲ್‍ಗಳಿಂದಾಗಿ ಯಾವುದೇ ಅವಘಡಗಳು ಸಂಭವಿಸುವ ಮೊದಲೇ ಮುಚ್ಚಬೇಕು. ತೆರೆದ ಮ್ಯಾನ್‍ಹೋಲ್‍ನಿಂದ ಅವಘಡಗಳು ...

Read More »