Breaking News

ಮೀನು ಹಿಡಿಯಲು ಹೋದ ಮೂವರು ಯುವಕರ ಸಾವು.

 

ಮೀನು ಹಿಡಿಯಲು ಹೋದ ಮೂವರು ಯುವಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸೊರಬದಲ್ಲಿ ಇಂದು ನಡೆದಿದೆ.
ತಾಲೂಕಿನ ಚಂದ್ರಗುತ್ತಿ ಹೋಬಳಿ ಹೊಳೆಜೋಳದಗುಡ್ಡೆ ಗ್ರಾಮದ ವಾಸಿಗಳಾದ ಪ್ರದೀಪ ಬಿನ್ ಕೆರಿಯಪ್ಪ (19), ಶರತ್ ಬಿನ್ ಕುಬೇರಪ್ಪ (15) ಹಾಗೂ ಕಾರ್ತಿಕ್ ಬಿನ್ ರಾಮಪ್ಪ (17) ಮೃತಪಟ್ಟ ದುರ್ಧೈವಿಗಳು. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಗ್ರಾಮದ ಹೊಸ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದು, ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸ್ಥಳದಲ್ಲಿ ಸಿಪಿಐ ಉಮಾಪತಿ, ಪೊಲೀಸ್ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.

 

Leave a Reply

Your email address will not be published. Required fields are marked *

*