ಶಿವಮೊಗ್ಗ : ಮಕ್ಕಳಲ್ಲಿ ಭೇದಿಗೆ ಕಾರಣವಾಗುವ ರೋಟಾ ವೈರಸ್ ತಡೆಗೆ ಹೊಸ ಲಸಿಕೆಯನ್ನು ನೀಡಲಾಗುತ್ತಿದ್ದು, ಅದನ್ನು ಪ್ರತಿಯೊಂದು ಮಗುವಿಗೆ ಹಾಕಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ವಿವಿಧ ಯೋಜನೆಗಳ ಅನುಷ್ಟಾನ ಕುರಿತು ಸಭೆ ನಡೆಸಿದರು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಟಾ ವೈರಸ್ ಲಸಿಕೆಯನ್ನು ನೀಡಲಾಗುತ್ತಿದ್ದು, ಮಗುವಿಗೆ 6, 10 ಮತ್ತು 14ನೇ ವಾರದಲ್ಲಿ ಈ ಲಸಿಕೆಯನ್ನು ಹಾಕಬೇಕು. ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ಮಕ್ಕಳು ರೋಟಾ ...
Read More »ಶಿವಮೊಗ್ಗ
ಯುವಕನಿಗೆ ಚಾಕು ಇರಿತ
ಶಿವಮೊಗ್ಗ: ಯುವತಿಯ ವಿಚಾರಕ್ಕೆ ನಡೆದ ಗಲಾಟೆ ಹಾಗೂ ಹಳೆ ವೈಷ್ಯಮ್ಯದ ಹಿನ್ನೆಲೆಯಲ್ಲಿ ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆ ಹೊಸನಗರ ತಾಲೂಕು ರಿಪ್ಪನ್ ಪೇಟೆ ಸಮೀಪದ ಗವಟೂರು ಗ್ರಾಮದಲ್ಲಿ ನಡೆದಿದೆ. ಗವಟೂರು ಗ್ರಾಮದ ಶಶಿಕುಮಾರ್ (28) ಚಾಕು ಇರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡು ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಗವಟೂರು ಗ್ರಾಮದ ಈಶ್ವರ, ಅಭಿಷೇಕ್, ದೇವೇಂದ್ರಪ್ಪ, ಸಚಿನ್ ಎಂಬುವರೊಂದಿಗೆ ಶಶಿಕುಮಾರ್ ಗೆ ಹಳೆಯ ದ್ವೇಷವಿತ್ತು. ಜೊತೆಗೆ ಕೆಲ ದಿನಗಳ ಹಿಂದೆ ಈ ನಾಲ್ವರ ಸಂಬಂಧಿ ಯುವತಿಯೋರ್ವಳ ವಿಚಾರದಲ್ಲಿ ಶಶಿಕುಮಾರ್ ಗಲಾಟೆ ಮಾಡಿಕೊಂಡಿದ್ದ. ...
Read More »ವಿದ್ಯಾರ್ಥಿ ನಿಲಯಗಳಿಗೆ ಸಿಇಒ ದಿಢೀರ್ ಭೇಟಿ
ಶಿವಮೊಗ್ಗ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ಬುಧವಾರ ಸಂಜೆ ಶಿವಮೊಗ್ಗ ನಗರದಲ್ಲಿರುವ ವಿದ್ಯಾರ್ಥಿ ನಿಲಯಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರು ಕೋಟೆ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ನಂತರದ ಹಾಗೂ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಕುಂದುಕೊರತೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನಿಲಯದ ಸಮಸ್ಯೆಗಳನ್ನು ಸಿಇಒ ಅವರೊಂದಿಗೆ ತೋಡಿಕೊಂಡರು. ವಿದ್ಯಾರ್ಥಿನಿಯರಿಗೆ ...
Read More »ಸಾರ್ವಜನಿಕ ಅಭಿಯೋಜಕ ಎಸಿಬಿ ಬಲೆಗೆ
ಶಿವಮೊಗ್ಗ: ಭದ್ರಾವತಿಯ ನಿರಂಜನ್ ಕದಂ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಕೊಡಿಸಲು ತಮ್ಮ ಕಕ್ಷಿದಾರರಿಂದ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭದ್ರಾವತಿ 4 ನೇ ಅಡಿಷನಲ್ ಸೆಷೆನ್ಸ್ ನ್ಯಾಯಾಲಯದ ಹೆಚ್ಚುವರಿ ಸಾರ್ವಜನಿಕ ಅಭಿಯೋಜಕ ರವೀಂದ್ರ ಇಂದು 20 ಸಾವಿರ ರೂಪಾಯಿ ಲಂಚಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ನಿರಂಜನ್ ಕದಂ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಕೊಡಿಸಲು 50 ಸಾವಿರ ರೂಪಾಯಿ ಲಂಚ ನೀಡುವಂತೆ ತನ್ನ ಕಕ್ಷಿದಾರ ಸುನೀಲ್ ಗಾಯಕ್ವಾಡ್ ಎಂಬುವರ ಬಳಿ ರವೀಂದ್ರ ಬೇಡಿಕೆ ಇಟ್ಟಿದ್ದರು. ಇಂದು ರವೀಂದ್ರ ಅವರು ...
Read More »ಅನಧಿಕೃತ ಕಲ್ಲು ಗಣಿಗಾರಿಕೆ ಮುಂದುವರೆಸುವವರ ಗಡಿಪಾರು: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್
ಶಿವಮೊಗ್ಗ : ಜಿಲ್ಲೆಯಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆಯನ್ನು ಹಲವು ಬಾರಿ ದಾಳಿ ನಡೆಸಿ ಸ್ಥಗಿತಗೊಳಿಸಿದ್ದರೂ, ಮತ್ತೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅಂತಹ ವ್ಯಕ್ತಿಗಳ ವಿರುದ್ಧ ಗಡಿಪಾರು ಸೇರಿದಂತೆ ಕುರಿತು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮರಳು ಸಮಿತಿ ಸಭೆಯಲ್ಲಿ ಈ ಕುರಿತು ಸೂಚನೆಗಳನ್ನು ನೀಡಿದರು. ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿರುವ ವಲಯಗಳಲ್ಲಿ ಕ್ರಶರ್, ಕ್ವಾರಿ ಸೇರಿದಂತೆ ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಅಕ್ರಮ ಗಣಿಗಾರಿಕೆ ಕ್ವಾರಿಗಳ ಮೇಲೆ ...
Read More »ರಾಜುಗೌಡ ಅವರಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಪ್ರತಿಭಟನೆ
ಶಿವಮೊಗ್ಗ: ಸುರಪುರದ ಶಾಸಕ ರಾಜುಗೌಡ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ರಾಜುಗೌಡ ಅಭಿಮಾನಿ ಬಳಗದ ಕಾರ್ಯಕರ್ತರು ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರಾಜುಗೌಡ ಅವರು ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿದ್ದು ಅವರಿಗೆ ಸಚಿವ ಸ್ಥಾನ ನೀಡದೆ ಇರುವುದು ವಾಲ್ಮೀಕಿ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ರಾಜುಗೌಡ ಅವರು ವಾಲ್ಮೀಕಿ ಸಮುದಾಯವನ್ನು ಬಿಜೆಪಿ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೂ ರಾಜುಗೌಡ ಅವರಿಗೆ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.. ...
Read More »ಜಲಪಾತದಲ್ಲಿ ಕೊಚ್ಚಿಹೋದ ಪ್ರವಾಸಿಗರನ್ನು ರಕ್ಷಿಸಿದ ಸ್ಥಳೀಯರು
ಈ ರೀತಿಯಾಗಿ: ಒಂದು ವೇಳೆ; ಹೊಸ ನ ನ ನ ಒಂದು ವೇಳೆ ಅದು ಸಂಭವಿಸುವುದಿಲ್ಲ. ಒಂದು ವೇಳೆ ಅದು ಸಂಭವಿಸುವುದಿಲ್ಲ. ಒಂದು ವೇಳೆ, ಅದು ಇಲ್ಲದಿರಲಿ. ವೇ ವೇ ಳೆ ಳೆ ಳೆ Contact For ADVT 7676236690
Read More »ಸಿಟಿ ಬಸ್ಸಿನಲ್ಲಿ ಪಿಕ್ ಪಾಕೆಟ್ ಮಾಡಿದ್ದ ಆರೋಪಿಯ ಬಂಧನ
ದಿನಾಂಕ17/8/19 ರಂದು ಅಜ್ಜಂಪುರದ ಲೋಕೇಶಪ್ಪರವರು ಸಿಟಿ ಬಸ್ಸಿನಲ್ಲಿ ಹೋಗುತ್ತಿರುವಾಗ ಮೀನಾಕ್ಷಿ ಭವನದ ಹತ್ತಿರ ಅವರ ಜೇಬಿನಲ್ಲಿ ಇದ್ದ 25,000/- ಹಣವನ್ನು ಪಿಕ್ ಪಾಕೆಟ್ ಮಾಡಿದ್ದು ಈ ಬಗ್ಗೆ ಕೋಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಆರೋಪಿ ಪತ್ತೆಗಾಗಿ ಮಾನ್ಯ ಪೋಲೀಸ್ ಅಧೀಕ್ಷಕರಾದ ಕೆ.ಎಂ . ಶಾಂತರಾಜ್. ಐ.ಪಿ.ಎಸ್. & ಹೆಚ್ಚು ವರಿ ಪೋಲೀಸ್ ಅಧೀಕ್ಷಕರಾದ ಡಾ.ಶೇಖರ್ .ಹೆಚ್.ಟಿ. ಕೆ.ಎಸ್.ಪಿ.ಎಸ್. , ಡಿ.ವೈ.ಎಸ್.ಪಿ.ಉಮೇಶ್ ಈಶ್ವರ ನಾಯ್ಕ, ಮತ್ತು ಸಿ.ಪಿ.ಐ ರವರಾದ ಕೆ.ಟಿ.ಗುರುರಾಜ. ರವರ ಮಾರ್ಗದರ್ಶನದಲ್ಲಿ ಕೋಟೆ ಪೋಲೀಸ್ ಠಾಣೆಯ ಪಿ.ಎಸ್.ಐ ರವರಾದ ಹೆಚ್.ತಿಮ್ಮಯ್ಯ ರವರ ...
Read More »ನೇಣು ಬಿಗಿದುಕೊಂಡು ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಆತ್ಮಹತ್ಯೆ.
ನೇಣು ಬಿಗಿದುಕೊಂಡು ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಆತ್ಮಹತ್ಯೆ. ಸಾಗರದ ಸರ್ಕಾರಿ ಉರ್ದು ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿನಿ ರುಹಿನಾ(15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ಸಾಗರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಾಗರ ನಗರ ಠಾಣೆ ಇನ್ಸ್ ಪೆಕ್ಟರ್ ಮಹಾಬಲೇಶ್ ನಾಯ್ಕ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.. Contact for news and advertisement 99166 60399
Read More »ರಸ್ತೆಯಲ್ಲಿ ಕಾಣಿಸಿಕೊಂಡ ಕಾಡುಕೋಣಗಳ ಹಿಂಡು
ಶಿವಮೊಗ್ಗ: ಹೊಸನಗರ ತಾಲೂಕಿನ ಹುಲಿಕಲ್ ಪಿಕ್ ಅಪ್ ಡ್ಯಾಂ ಮೇಲಿನ ರಸ್ತೆಯಲ್ಲಿ ಕಾಡುಕೋಣಗಳ ಹಿಂಡು ಕಾಣಿಸಿಕೊಂಡಿದೆ. ಸುಮಾರು ಎಂಟರಿಂದ ಹತ್ತು ಕಾಡುಕೋಣಗಳ ಹಿಂಡು ರಸ್ತೆ ಮೇಲೆ ಸಂಚರಿಸುವ ವಾಹನಗಳು ಹಾರನ್ ಹೊಡೆದರು ಕೂಡ ನಿರ್ಭಿತಿಯಿಂದ ಸಂಚರಿಸುತ್ತಿದೆ. ಮಾಸ್ತಿಕಟ್ಟೆ ಹಾಗೂ ಹುಲಿಕಲ್ ಭಾಗದಲ್ಲಿ ಬೆಳೆಗಳ ಮೇಲೆದಾಳಿ ನಡೆಸಬಹುದು ಎಂಬ ಅಂತಕ ರೈತರಲ್ಲಿ ಮೂಡಿದೆ.
Read More »
C News TV Kannada News Online in cnewstv