ಶಿವಮೊಗ್ಗ: ಯುವತಿಯ ವಿಚಾರಕ್ಕೆ ನಡೆದ ಗಲಾಟೆ ಹಾಗೂ ಹಳೆ ವೈಷ್ಯಮ್ಯದ ಹಿನ್ನೆಲೆಯಲ್ಲಿ ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆ ಹೊಸನಗರ ತಾಲೂಕು ರಿಪ್ಪನ್ ಪೇಟೆ ಸಮೀಪದ ಗವಟೂರು ಗ್ರಾಮದಲ್ಲಿ ನಡೆದಿದೆ. ಗವಟೂರು ಗ್ರಾಮದ ಶಶಿಕುಮಾರ್ (28) ಚಾಕು ಇರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡು ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಗವಟೂರು ಗ್ರಾಮದ ಈಶ್ವರ, ಅಭಿಷೇಕ್, ದೇವೇಂದ್ರಪ್ಪ, ಸಚಿನ್ ಎಂಬುವರೊಂದಿಗೆ ಶಶಿಕುಮಾರ್ ಗೆ ಹಳೆಯ ದ್ವೇಷವಿತ್ತು. ಜೊತೆಗೆ ಕೆಲ ದಿನಗಳ ಹಿಂದೆ ಈ ನಾಲ್ವರ ಸಂಬಂಧಿ ಯುವತಿಯೋರ್ವಳ ವಿಚಾರದಲ್ಲಿ ಶಶಿಕುಮಾರ್ ಗಲಾಟೆ ಮಾಡಿಕೊಂಡಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಈಶ್ವರ, ಅಭಿಷೇಕ್, ದೇವೇಂದ್ರಪ್ಪ ಹಾಗೂ ಸಚಿನ್ ಗವಟೂರಿನ ಕ್ಯಾಂಟೀನ್ ನಲ್ಲಿ ಶಶಿಕುಮಾರ್ ಒಬ್ಬನೇ ಸಿಕ್ಕಾಗ ಹಲ್ಲೆ ಮಾಡಿದ್ದಲ್ಲದೆ ಚಾಕು ಚುಚ್ಚಿ ಪರಾರಿಯಾಗಿದ್ದಾರೆ. ಈ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
C News TV Kannada News Online in cnewstv