Breaking News

ಸಾರ್ವಜನಿಕ ಅಭಿಯೋಜಕ ಎಸಿಬಿ ಬಲೆಗೆ

ಶಿವಮೊಗ್ಗ: ಭದ್ರಾವತಿಯ ನಿರಂಜನ್ ಕದಂ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಕೊಡಿಸಲು ತಮ್ಮ ಕಕ್ಷಿದಾರರಿಂದ 50 ಸಾವಿರ ಲಂಚಕ್ಕೆ‌ ಬೇಡಿಕೆ ಇಟ್ಟಿದ್ದ‌ ಭದ್ರಾವತಿ 4 ನೇ ಅಡಿಷನಲ್ ಸೆಷೆನ್ಸ್ ನ್ಯಾಯಾಲಯದ ಹೆಚ್ಚುವರಿ ಸಾರ್ವಜನಿಕ ಅಭಿಯೋಜಕ ರವೀಂದ್ರ ಇಂದು 20 ಸಾವಿರ ರೂಪಾಯಿ ಲಂಚಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ನಿರಂಜನ್ ಕದಂ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಕೊಡಿಸಲು 50 ಸಾವಿರ ರೂಪಾಯಿ ಲಂಚ ನೀಡುವಂತೆ ತನ್ನ ಕಕ್ಷಿದಾರ ಸುನೀಲ್ ಗಾಯಕ್ವಾಡ್ ಎಂಬುವರ ಬಳಿ ರವೀಂದ್ರ ಬೇಡಿಕೆ ಇಟ್ಟಿದ್ದರು. ಇಂದು ರವೀಂದ್ರ ಅವರು ಭದ್ರಾವತಿಯ ತಮ್ಮ ಕಚೇರಿಯಲ್ಲಿ ಸುನೀಲ್ ಗಾಯಕ್ ವಾಡ್ ಅವರಿಂದ 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಎಸಿಬಿ ಕಾರ್ಯಾಚರಣೆಯಲ್ಲಿ ಡಿವೈಎಸ್ ಪಿ ವೇಣುಗೋಪಾಲ್, ಇನ್ಸ್ ಪೆಕ್ಟರ್ ಗಳಾದ ವೀರೇಂದ್ರ, ತಿಪ್ಪೆಸ್ವಾಮಿ, ಸಿಬ್ಬಂದಿಗಳಾದ ಹರೀಶ್, ವಸಂತ್, ನಾಗರಾಜ್, ರಘುನಾಯ್ಕ, ಸುರೇಂದ್ರ, ಯೋಗೇಶ್ವರಪ್ಪ, ಶ್ರೀನಿವಾಸ್ ಇದ್ದರು.

Leave a Reply

Your email address will not be published. Required fields are marked *

*