ಶಿವಮೊಗ್ಗ: ಸರ್ಕಾರಿ ನೌಕರರೇ ಅಂಗಡಿ ಮಾಲೀಕರೊಬ್ಬರ ಮೇಲೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಶಿವಮೊಗ್ಗದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಶಿವಮೊಗ್ಗ ವಿನೋಬನಗರದ ಪೊಲೀಸ್ ಚೌಕಿ ಬಳಿಯ ಮೊಬೈಲ್ ಅಂಗಡಿ ಮಾಲೀಕನ ಮೇಲೆ ಸರ್ಕಾರಿ ನೌಕರರು ಹಲ್ಲೆ ನಡೆಸಿರುವ ಸಿಸಿ ಟಿವಿ ದೃಷ್ಯಾವಳಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರ್ಕಾರಿ ನೌಕರರು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ ಆತನ ವಿರುದ್ಧ ಸರ್ಕಾರಿ ಕೆಲಸಕ್ಕೆ ಅಡ್ಡಿ ಕೇಸನ್ನೂ ದಾಖಲಿಸಿ ಜೈಲಿಗೂ ಕಳಿಸಿದ್ದಾರೆ. ಶಿವಮೊಗ್ಗದ ವಿನೋಬನಗರದ ಪೊಲೀಸ್ ಚೌಕಿ ಬಳಿಯಿರುವ ಬಟ್ಟೆ ಅಂಗಡಿಯಲ್ಲಿ ಪ್ಲಾಸ್ಟಿಕ್ ಇರಬಹುದು ...
Read More »ಶಿವಮೊಗ್ಗ
ಸ್ಮಾರ್ಟ್ ಸಿಟಿ ಕಾಮಗಾರಿ ತ್ವರಿತ ಅನುಷ್ಟಾನಕ್ಕೆ ಕ್ರಮ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್
ಶಿವಮೊಗ್ಗ : ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಡಿ 945ಕೋಟಿ ರೂ. ಮೊತ್ತದ ಅಂದಾಜಿನ 50ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದ್ದು, ಅನುಷ್ಟಾನ ಕಾರ್ಯ ಇನ್ನಷ್ಟು ಚುರುಕುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು. ಅವರು ಗುರುವಾರ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಅತಿವೃಷ್ಟಿಯಿಂದಾಗಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಕಳೆದ ಕೆಲವು ತಿಂಗಳಿನಲ್ಲಿ ನಿರೀಕ್ಷಿತ ವೇಗದಲ್ಲಿ ನಡೆದಿರುವುದಿಲ್ಲ. ಇದೀಗ ಅಗತ್ಯ ತಾಂತ್ರಿಕ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಅನುಷ್ಟಾನ ವೇಗ ಪಡೆದುಕೊಂಡಿದೆ. ಕಾಮಗಾರಿ ಅನುಷ್ಟಾನ ಇಲಾಖೆಗಳಾಗಿರುವ ಮೆಸ್ಕಾಂ, ನೀರು ...
Read More »ಲೋಕಕಲ್ಯಾಣಾರ್ಥ ಕೆಎಸ್ ಈಶ್ವರಪ್ಪ ಮನೆಯಲ್ಲಿ ಚಂಡಿಕಾಯಾಗ.
ಲೋಕಕಲ್ಯಾಣಾರ್ಥ ಪ್ರತಿವರ್ಷದಂತೆ ಈ ಬಾರಿಯೂ ಸಹ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಕೆಎಸ್ ಈಶ್ವರಪ್ಪನವರ ಮನೆಯಲ್ಲಿ ಚಂಡಿಕಾಯಾಗವನ್ನು ನಡೆಸಲಾಯಿತು. ಯಾಗಕ್ಕೆ ಮೊದಲು ತಮ್ಮ ಮನೆ ದೇವರಾದ ಮಲ್ಲೇಶ್ವರ ದೇವರನ್ನು ಸಚಿವ ಕೆಎಸ್ ಈಶ್ವರಪ್ಪ ತಲೆಯಮೇಲೆ ಹೊತ್ತು ತಂದರು ನಂತರ ದೇವರುಗಳಾದ ಮಲ್ಲೇಶ್ವರ ಹಾಗೂ ಚೌಡಮ್ಮ ದೇವಿಗೆ ಕುಟುಂಬದವರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಚಂಡಿಕಾಯಾಗ ನೆರವೇರಿಸಲಾಯಿತು.
Read More »ಬಿಜೆಪಿ ಶಿವಮೊಗ್ಗ ನಗರಾಧ್ಯಕ್ಷರಾಗಿ ಎನ್.ಕೆ.ಜಗದೀಶ್ ಆಯ್ಕೆ.
ಶಿವಮೊಗ್ಗ: ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷರಾಗಿ ಎನ್.ಕೆ.ಜಗದೀಶ್ ಆಯ್ಕೆಯಾಗಿದ್ದಾರೆ. ಶಿವಮೊಗ್ಗದ ಶುಭಮಂಗಳ ಕಲ್ಯಾಣಮಂದಿರದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಜಗದೀಶ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ನಗರ ಪ್ರಧಾನಕಾರ್ಯದರ್ಶಿಯಾಗಿ ಬಳ್ಳೆಕೆರೆ ಸಂತೋಷ್, ಮೋಹನ್ ರೆಡ್ಡಿ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಸುರೇಖಾ ಮುರುಳೀಧರ್, ಪ್ರಧಾನ ಕಾರ್ಯದರ್ಶಿಯಾಗಿ ರಶ್ಮಿ ಶ್ರೀನಿವಾಸ್, ಆರತಿ ಹ.ಮಾ.ಪ್ರಕಾಶ್, ಯುವ ಮೋರ್ಚಾ ಅಧ್ಯಕ್ಷರಾಗಿ ದರ್ಶನ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಪ್ರದೀಪ್ ಹಾಗೂ ಸೆಲ್ವರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Read More »ರಾಮಮಂದಿರ ಜಾಗ ಹಿಂದುಗಳಿಗೆ ಸೇರಿದ್ದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಐತಿಹಾಸಿಕ ಅಯೋದ್ಯ ವಿವಾದ ಕುರಿತು ಸುಪ್ರೀಂಕೋರ್ಟ್ ಅಂತಿಮ ತೀರ್ಪನ್ನು ನೀಡಿದೆ. ವಿವಾದಿತ ಜಮೀನು ಇನ್ನೂ ಮುಂದೆ ರಾಮಲಲ್ಲಾ ಪಾಲಾಗಿದೆ.. ಮಂದಿರ ನಿರ್ಮಾಣದ ಹೊಣೆಯನ್ನು ಸಿಜೆಐ ಸರ್ಕಾರಕ್ಕೆ ನೀಡಿದೆ, ಇನ್ನೂ ರಾಮಮಂದಿರ ನಿರ್ಮಾಣಕ್ಕೆ ಸರ್ಕಾರ ಮೂರು ತಿಂಗಳೊಳಗೆ ಯೋಜನೆಯನ್ನು ರೂಪಿಸಿ, ನಿರ್ವಹಣೆಯನ್ನು ಟ್ರಸ್ಟಿಗೆ ನೀಡಬೇಕು ಎಂದು ಆದೇಶವನ್ನು ನೀಡಿದ್ದು, ಸಂಪೂರ್ಣ 2.77 ಎಕರೆ ಟ್ರಸ್ಟ್ ವಶಕ್ಕೆ ನೀಡಲಾಗಿದೆ..ಸುನ್ನಿ ವಕ್ಫ್ ಬೋರ್ಡಿಗೆ ಬೇರೆಡೆ ಪರ್ಯಾಯ. 5 ಎಕರೆ ಜಮೀನು ನೀಡಲಾಗುವುದು.
Read More »ಅಯೋದ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್.
ಶಿವಮೊಗ್ಗ: ಅಯೋಧ್ಯೆ ಅಂತಿಮ ತೀರ್ಪು ಇಂದು ಹೊರಬರಲಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರುವುದರಿಂದಾಗಿ ಪೊಲೀಸರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ನಾಳೆ ಈದ್ ಮಿಲಾದ್ ಹಬ್ಬದಆಚರಣೆಗಾಗಿ ಮುಸ್ಲಿಂ ಸಮುದಾಯದವರು ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ವೇದಿಕೆ ಸೇರಿದಂತೆ ಟಿಪ್ಪು ಹಾಗೂ ಹಸಿರು ಬಾವುಟಗಳನ್ನು ಕಟ್ಟಿದ್ದರು. ಅಷ್ಟರಲ್ಲಾಗಲೇ ಸುಪ್ರೀಂ ಕೋರ್ಟ್ ಇಂದೇ ತೀರ್ಪು ನೀಡುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಅಮೀರ್ ಅಹಮದ್ ವೃತ್ತದಲ್ಲಿ ಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
Read More »ಶಿವಮೊಗ್ಗಕ್ಕೆ ಆಗಮಿಸಿದ್ದ ನಟ ಶ್ರೀಮುರಳಿ
ಭರಾಟೆ ಚಿತ್ರ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಾಯಕ ನಟ ಶ್ರೀಮುರುಳಿ ಸೇರಿದಂತೆ ಭರಾಟೆ ಚಿತ್ರತಂಡ ಶಿವಮೊಗ್ಗಕ್ಕೆ ಆಗಮಿಸಿ ಅಭಿಮಾನಿಗಳೊಂದಿಗೆ ತಮ್ಮ ಖುಷಿಯನ್ನು ಹಂಚಿಕೊಂಡರು. ಹೆಚ್.ಪಿ.ಸಿ ಚಿತ್ರಮಂದಿರಕ್ಕೆ ಆಗಮಿಸಿದ ನಟ ಶ್ರೀಮುರುಳಿಯನ್ನು ಅಭಿಮಾನಿಗಳು ಡೊಳ್ಳುಕುಣಿತದ ಮೂಲಕ ಭರ್ಜರಿಯಾಗಿ ಸ್ವಾಗತಿಸಿದರು. ಅಭಿಮಾನಿಗಳೊಂದಿಗೆ ಮುರುಳಿ ಸಹ ಕುಣಿದು ಕುಪ್ಪಳಿಸಿದರು ಮತ್ತೊಂದೆಡೆ ನಮ್ಮ ಯುವಜನತೆ ಶ್ರೀಮುರುಳಿ ಜೊತೆಗೆ ಸೆಲ್ಫಿಗಾಗಿ ಮುಗಿಬಿದ್ದಿದ್ದರು..
Read More »ಶಿವಮೊಗ್ಗದಲ್ಲಿ ಧಾರಾಕಾರ ಮಳೆ
ಶಿವಮೊಗ್ಗ ನಗರದಲ್ಲಿ ಇಂದು ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಶಿವಮೊಗ್ಗ ನಗರದ ಹಲವು ಬಡಾವಣೆಗಳು ಸಂಪೂರ್ಣ ಜಲಾವೃತಗೊಂಡಿವೆ. ಶಿವಮೊಗ್ಗದ ಬಾಪೂಜಿ ನಗರದ ನೂರಕ್ಕೂ ಹೆಚ್ಷು ಮನೆಗಳಿಗೆ ನಿನ್ನೆ ರಾತ್ರಿಯೂ ನೀರು ನುಗ್ಗಿತ್ತು. ಮಧ್ಯಾಹ್ನದ ವೇಳೆಗೆ ಮನೆಯನ್ನು ಶುಚಿಯಾಗಿಸಿಕೊಳ್ಳಲಾಗಿತ್ತು. ಆದರೆ ಇಂದು ಸಂಜೆ ಮತ್ತೆ ಧಾರಾಕಾರ ಮಳೆಯಾಗಿರುವುದರಿಂದ ಬಾಪೂಜಿ ನಗರ ಮತ್ತೆ ಜಲಾವೃತವಾಗಿದೆ. ಶಿವಮೊಗ್ಗದ ಪ್ರತಿಷ್ಠಿತ ಬಡಾವಣೆಯಾಗಿರುವ ಗೋಪಾಲಗೌಡ ಬಡಾವಣೆಯ ರಸ್ತೆಗಳ ಮೇಲೆ ಮೂರು ಅಡಿಗೂ ಹೆಚ್ಚು ನೀರು ತುಂಬಿಕೊಂಡಿತ್ತು. ಇನ್ನು ಕಾಂಗ್ರೆಸ್ ಕಚೇರಿ ಎದುರಿನ ರಸ್ತೆ ಮೇಲೆ ಮೂರು ಅಡಿಗೂ ಹೆಚ್ಚು ನೀರ ...
Read More »ಸರ್ಕಾರಿ ಶಾಲೆಗಳ ದುರಸ್ತಿ, ಶೌಚಾಲಯ ನಿರ್ಮಾಣಕ್ಕೆ 14.61 ಕೋಟಿ ರೂ. ಅನುದಾನ: ಸಚಿವ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ : ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳ ದುರಸ್ತಿ ಹಾಗೂ ಶೌಚಾಲಯಗಳ ನಿರ್ಮಾಣಕ್ಕಾಗಿ ಇದೇ ಮೊದಲ ಬಾರಿಗೆ ಸರ್ಕಾರ 14.61 ಕೋಟಿ ರೂ. ಅನುದಾನ ಒದಗಿಸಿದ್ದು, ಮೂರು ತಿಂಗಳ ಒಳಗಾಗಿ ಎಲ್ಲಾ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಕುರಿತಾಗಿ ಅಧಿಕಾರಿಗಳು, ಮುಖ್ಯೋಪಾಧ್ಯಾಯರು ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು. ನಗರ ವ್ಯಾಪ್ತಿಯಲ್ಲಿ 86ಶಾಲೆಗಳಲ್ಲಿ ಕೊಠಡಿ ದುರಸ್ತಿಗಾಗಿ ...
Read More »ಪೊಲಿಸ್ ಇಲಾಖೆಯ ನೌಕರರಿಗೆ ಔರಾದ್ಕರ್ ವರದಿಯ ಮೂಲ ಉದ್ದೇಶವನ್ನೆ ಜಾರಿಗೊಳಿಸಿ – ಹೆಚ್.ಪಿ.ಗಿರೀಶ್
ಪೋಲಿಸ್ ಇಲಾಖೆಯ ಸಿಬ್ಬಂದಿಗಳ ಬಹುದಿನದ ಬೇಡಿಕೆಯಾಗಿದ್ದ ಔರದ್ಕರ್ ವರದಿಯನ್ನು ದೀಪಾವಳಿಯಿಂದ ಜಾರಿಗೊಳಿಸಲಾಗುವುದು ಎಂದು ಇತ್ತೀಚೆಗೆ ಸಿಎಂ ಬಿ.ಎಸ್.ವೈ ಹೇಳಿದ ಬೆನ್ನಲ್ಲೇ ಈ ವರದಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಖಂಡನೆಗಳು ಆರಂಭವಾಗಿದ್ದವು. ಆದರೆ ಈಗ ಪೊಲೀಸ್ ಸಿಬ್ಬಂದಿಗಳೇ ಸಿಎಂಗೆ ಪತ್ರ ಬರೆದು ಔರಾದ್ಕರ್ ವರದಿಯನ್ನ ರದ್ದುಗೊಳಿಸಿ ಎಂದು ಒತ್ತಾಯಿಸಿದ್ದಾರೆ. ವೇತನ ತಾರತಮ್ಯ ನಿವಾರಣೆಗಾಗಿ ಔರಾದ್ಕರ್ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಆದರೆ ವರದಿ ಸಿದ್ಧಪಡಿಸುವಾಗ ಆರ್ಥಿಕ ಇಲಾಖೆ ತನ್ನ ಚಾಣಾಕ್ಷ್ಯತನವನ್ನು ತೋರಿಸಿದೆ ಎಂದು ಆರೋಪಿಸಲಾಗಿದು. ಡಿಜಿ ಹಾಗೂ ಐಜಿ ಹೊರಡಿಸಿದ್ದ ಫಿಟ್ಮೆಂಟ್ ಅಂತ ಮೂಲ ವೇತನ ನಿಗದಿಯಾಗಬೇಕಿತ್ತು. ಆದರೆ ಅದನ್ನು ರದ್ದುಪಡಿಸಿ ಕೇವಲ ಹೊಸದಾಗಿ ಸೇರ್ಪಡೆಯಾದ ಸಿಬ್ಬಂದಿಗೆ ಮಾತ್ರ ವೇತನ ನಿಗದಿ ಮಾಡಲಾಗಿದೆ. ಇದರಿಂದ ಔರಾದ್ಕರ್ ವರದಿ ಮೂಲ ಉದ್ದೇಶವನ್ನೇ ಮರೆಮಾಚಲಾಗಿದೆ ಎಂದು ಹೇಳಲಾಗುತ್ತಿದೆ.. ಈಗಿನ ವರದಿಯು ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಗೃಹ ಸಚಿವರು ತೀರ್ಮಾನಿಸಿ ಜಾರಿಗೊಳಿಸಿದಂತಿಲ್ಲ. ಈ ವರದಿಯ ಜಾರಿಯಿಂದ ಪೊಲೀಸರ ಜೀವನ ಮಟ್ಟ ಸುಧಾರಿಸುತ್ತೆ ಎಂದು ನಂಬಲಾಗಿತ್ತು. ಆದರೆ ಆರ್ಥಿಕ ಇಲಾಖೆಯು ಪೊಲೀಸ್ ಇಲಾಖೆಯ ಬಹುದಿನದ ಬೇಡಿಕೆಗೆ ತಣ್ಣೀರೆರಚಿದೆ. ವರದಿಯ ಮೂಲ ಉದ್ದೇಶವನ್ನು ಬಿಟ್ಟು ಆರ್ಥಿಕ ಇಲಾಖೆಯು ಹೊಸದಾಗಿ ವರದಿಯನ್ನು ಮಾರ್ಪಾಡು ಮಾಡಿರುವ ವರದಿ ಜಾರಿಯಾದ್ರೆ ವೇತನ ತಾರತಮ್ಯದಿಂದ ಪೊಲೀಸರು ವೈಯಕ್ತಿಕವಾಗಿ ಖಿನ್ನತೆಗೆ ಒಳಗಾಗೋ ಸಾಧ್ಯತೆ ಇದೆ..ಈ ವರದಿಯಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಶೇ95ರಷ್ಟು ಸಿಬ್ಬಂದಿಗೆ ಒಂದು ರೂಪಾಯಿ ಪ್ರಯೋಜನವಿಲ್ಲ. ಆದ್ದರಿಂದ ಸರ್ಕಾರ ರಾಘವೇಂದ್ರ ಔರಾದ್ಕರ್ ವರದಿಯ ಮೂಲ ಉದ್ದೇಶದ ಬೇಡಿಕೆಯನ್ನು ...
Read More »
C News TV Kannada News Online in cnewstv