ಪೋಲಿಸ್ ಇಲಾಖೆಯ ಸಿಬ್ಬಂದಿಗಳ ಬಹುದಿನದ ಬೇಡಿಕೆಯಾಗಿದ್ದ ಔರದ್ಕರ್ ವರದಿಯನ್ನು ದೀಪಾವಳಿಯಿಂದ ಜಾರಿಗೊಳಿಸಲಾಗುವುದು ಎಂದು ಇತ್ತೀಚೆಗೆ ಸಿಎಂ ಬಿ.ಎಸ್.ವೈ ಹೇಳಿದ ಬೆನ್ನಲ್ಲೇ ಈ ವರದಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಖಂಡನೆಗಳು ಆರಂಭವಾಗಿದ್ದವು.
ಆದರೆ ಈಗ ಪೊಲೀಸ್ ಸಿಬ್ಬಂದಿಗಳೇ ಸಿಎಂಗೆ ಪತ್ರ ಬರೆದು ಔರಾದ್ಕರ್ ವರದಿಯನ್ನ ರದ್ದುಗೊಳಿಸಿ ಎಂದು ಒತ್ತಾಯಿಸಿದ್ದಾರೆ.
ವೇತನ ತಾರತಮ್ಯ ನಿವಾರಣೆಗಾಗಿ ಔರಾದ್ಕರ್ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಆದರೆ ವರದಿ ಸಿದ್ಧಪಡಿಸುವಾಗ ಆರ್ಥಿಕ ಇಲಾಖೆ ತನ್ನ ಚಾಣಾಕ್ಷ್ಯತನವನ್ನು ತೋರಿಸಿದೆ ಎಂದು ಆರೋಪಿಸಲಾಗಿದು. ಡಿಜಿ ಹಾಗೂ ಐಜಿ ಹೊರಡಿಸಿದ್ದ ಫಿಟ್ಮೆಂಟ್ ಅಂತ ಮೂಲ ವೇತನ ನಿಗದಿಯಾಗಬೇಕಿತ್ತು. ಆದರೆ ಅದನ್ನು ರದ್ದುಪಡಿಸಿ ಕೇವಲ ಹೊಸದಾಗಿ ಸೇರ್ಪಡೆಯಾದ ಸಿಬ್ಬಂದಿಗೆ ಮಾತ್ರ ವೇತನ ನಿಗದಿ ಮಾಡಲಾಗಿದೆ. ಇದರಿಂದ ಔರಾದ್ಕರ್ ವರದಿ ಮೂಲ ಉದ್ದೇಶವನ್ನೇ ಮರೆಮಾಚಲಾಗಿದೆ ಎಂದು ಹೇಳಲಾಗುತ್ತಿದೆ.. ಈಗಿನ ವರದಿಯು ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಗೃಹ ಸಚಿವರು ತೀರ್ಮಾನಿಸಿ ಜಾರಿಗೊಳಿಸಿದಂತಿಲ್ಲ. ಈ ವರದಿಯ ಜಾರಿಯಿಂದ ಪೊಲೀಸರ ಜೀವನ ಮಟ್ಟ ಸುಧಾರಿಸುತ್ತೆ ಎಂದು ನಂಬಲಾಗಿತ್ತು. ಆದರೆ ಆರ್ಥಿಕ ಇಲಾಖೆಯು ಪೊಲೀಸ್ ಇಲಾಖೆಯ ಬಹುದಿನದ ಬೇಡಿಕೆಗೆ ತಣ್ಣೀರೆರಚಿದೆ. ವರದಿಯ ಮೂಲ ಉದ್ದೇಶವನ್ನು ಬಿಟ್ಟು ಆರ್ಥಿಕ ಇಲಾಖೆಯು ಹೊಸದಾಗಿ ವರದಿಯನ್ನು ಮಾರ್ಪಾಡು ಮಾಡಿರುವ ವರದಿ ಜಾರಿಯಾದ್ರೆ ವೇತನ ತಾರತಮ್ಯದಿಂದ ಪೊಲೀಸರು ವೈಯಕ್ತಿಕವಾಗಿ ಖಿನ್ನತೆಗೆ ಒಳಗಾಗೋ ಸಾಧ್ಯತೆ ಇದೆ..ಈ ವರದಿಯಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಶೇ95ರಷ್ಟು ಸಿಬ್ಬಂದಿಗೆ ಒಂದು ರೂಪಾಯಿ ಪ್ರಯೋಜನವಿಲ್ಲ. ಆದ್ದರಿಂದ ಸರ್ಕಾರ ರಾಘವೇಂದ್ರ ಔರಾದ್ಕರ್ ವರದಿಯ ಮೂಲ ಉದ್ದೇಶದ ಬೇಡಿಕೆಯನ್ನು ಜಾರಿಗೊಳಿಸಿ ಪೊಲೀಸ್ ಸಿಬ್ಬಂದಿಗೆ ನೆರವು ನೀಡಬೇಕಾಗಿ ಈ ಮೂಲಕ ಆಗ್ರಹಿಸುತ್ತೇವೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಯುವ ಕಾಂಗ್ರೆಸ್ನಿಂದ ಉಗ್ರವಾದ ಹೋರಾಟ ನಡೆಸಬೇಕಾಗುತ್ತೆ ಎಂದು ಅಧ್ಯಕ್ಷರಾದ ಹೆಚ್.ಪಿ. ಗಿರೀಶ್ ಹಾಗೂ ಶಿವಮೊಗ್ಗ ನಗರ ಯುವ ಕಾಂಗ್ರೆಸ್ ನಿಂದ ಎಚ್ಚರಿಗೆ ನೀಡಿದ್ದರು..
Recent Comments