ಭದ್ರಾವತಿ ತಾಲೂಕು ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವೈಯಕ್ತಿಕವಾಗಿ ಹಣ ದುರುಪಯೋಗ ಪಡಿಸಿಕೊಳ್ಳಲಾಗುತ್ತದೆ. ಕಾಮಗಾರಿ ಅನುಷ್ಠಾನ ಆಗದೆ ಕೂಲಿ ಹಣ ಪಾವತಿಸುತ್ತಿದ್ದಾರೆ. ಆ ಊರಿನವರೇ ಅಲ್ಲದ ವ್ಯಕ್ತಿಗಳಿಗೆ ಹಣವನ್ನು ಪಾವತಿ ಮಾಡಲಾಗಿದೆ. ಇದು ದೊಡ್ಡೇರಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ದೊಡ್ಡೇರಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ರವರು ಎಲ್ಲಾ ಅವ್ಯವ್ಯಹಾರಕ್ಕೆ ಸಾಥ್ ನೀಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ...
Read More »ಶಿವಮೊಗ್ಗ
ಶಿವಮೊಗ್ಗ ಜಿಲ್ಲಾ ಪೊಲೀಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 04 ಜನ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮುಖ್ಯ ಮಂತ್ರಿಗಳ ಚಿನ್ನದ ಪದಕ
ಶಿವಮೊಗ್ಗ ಜಿಲ್ಲಾ ಪೊಲೀಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ಅಧಿಕಾರಿಗಳಾದ ಡಾ|| ಶೇಖರ್ ಹೆಚ್. ಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ. ಕೆ ಟಿ ಗುರುರಾಜ್ ಪೊಲೀಸ್ ನಿರೀಕ್ಷಕರು, ಸಿಇಎನ್ ಪೊಲೀಸ್ ಠಾಣೆ, ಶಿವಮೊಗ್ಗ. ಅಂಥೋನಿ, ಎಎಸ್ಐ, ದೊಡ್ಡಪೇಟೆ ಪೊಲೀಸ್ ಠಾಣೆ, ಶಿವಮೊಗ್ಗ , ಇಂದ್ರೇಶ, ಸಿಹೆಚ್.ಸಿ- 1968, ಸಿಡಿಆರ್ ವಿಭಾಗ, ಜಿಲ್ಲಾ ಪೊಲೀಸ್ ಕಛೇರಿ ಶಿವಮೊಗ್ಗ ರವರು ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿರುವ ಪ್ರಶಂಸನೀಯ ಸೇವೆಗಾಗಿ* 2017ನೇ ಹಾಗೂ 2018ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಗಳ ಚಿನ್ನದ ಪದಕಕ್ಕೆ ಪಾತ್ರರಾಗಿರುತ್ತಾರೆ. ಇವರಿಗೆ ಶಿವಮೊಗ್ಗ ...
Read More »ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್ ಅವರ ಹುಟ್ಟುಹಬ್ಬ ಆಚರಣೆ
ಶಿವಮೊಗ್ಗ ನಗರದ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಕೆ.ಬಿ. ಪ್ರಸನ್ನ ಕುಮಾರ್ ಅವರ 45ನೇ ಹುಟ್ಟುಹಬ್ಬದ ಅಂಗವಾಗಿ ಅವರ ನಿವಾಸದಲ್ಲಿ ಹಾಗೂ ಜೀವನ ಸಂಜೆ ವೃದ್ಧಾಶ್ರಮದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಶುಭ ಕೋರಿ ಅಚರಿಸಲಾಯಿತು.
Read More »ರೈಲಿನಿಂದ ಆಕಸ್ಮಿಕವಾಗಿ ತುಂಗಾ ನದಿಗೆ ಬಿದ್ದಿದ್ದ ಯುವತಿ ಶವ ಪತ್ತೆ. ಸತತ 36 ಗಂಟೆಗಳ ಕಾರ್ಯಚರಣೆ.
ಶಿವಮೊಗ್ಗ : ನ.12 ರಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಜನಶತಾಬ್ದಿ ರೈಲಿನಲ್ಲಿ ಸಹನಾ ಹಾಗೂ ಅವರ ತಾಯಿ ಪ್ರಯಾಣ ಮಾಡುತ್ತಿದ್ದರು. ಸಿ ಎ ವ್ಯಾಸಂಗ ಮಾಡುತ್ತಿದ್ದ ಸಹಾನ(24) ರೈಲಿನ ಬಾಗಿಲ ಬಳಿ ನಿಂತಿದ್ದಾಗ ಅಕಸ್ಮತ್ ಅಗಿ ಕಾಲು ಜಾರಿ ತುಂಗಾ ನದಿಗೆ ಬಿದ್ದಿದ್ದಳು. ಕಳೆದ ಎರಡು ದಿನದಿಂದ ಸಹನಾ ಶವಕ್ಕಾಗಿ ತುಂಗಾ ನದಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದರು. ಇಂದು ಬೆಳಗ್ಗೆ ತುಂಗಾ ನದಿಯಲ್ಲಿ ಸಹನಾ ಮೃತದೇಹ ಪತ್ತೆಯಾಗಿದೆ. ಘಟನೆ ನಡೆದು 36 ಗಂಟೆಯ ನಂತರ ಸಹನಾ ಶವ ಸಚಿವ ಈಶ್ವರಪ್ಪನವರ ...
Read More »ಟ್ರಾಫಿಕ್ ವ್ಯವಸ್ಥೆ ಸುಧಾರಣೆಗೆ ಸ್ಮಾರ್ಟ್ ಸಿಟಿ ಅನುದಾನ ಬಳಕೆ : ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್
ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಟ್ರಾಫಿಕ್ ವ್ಯವಸ್ಥೆ ಸುಧಾರಿಸಲು ಸ್ಮಾರ್ಟ್ ಸಿಟಿ ಅನುದಾನವನ್ನು ಬಳಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು. ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಶಿವಮೊಗ್ಗ ನಗರದ ರಸ್ತೆ ಗುಂಡಿಗಳನ್ನು ಮುಚ್ಚುವುದು, ರಸ್ತೆ ಉಬ್ಬುಗಳ ನಿರ್ಮಾಣ, ಸೂಚನಾ ಫಲಕಗಳ ಅಳವಡಿಕೆ ಸೇರಿದಂತೆ ಅಗತ್ಯ ಕೆಲಸ ಕಾರ್ಯಗಳನ್ನು ಮಾಡಬೇಕಿದೆ. ಇದಕ್ಕಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅನುದಾನವನ್ನು ಬಳಸಿಕೊಳ್ಳಲಾಗುವುದು. ರಸ್ತೆ ಅಪಘಾತ ತಪ್ಪಿಸಲು ನಗರ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ವರದಿಯನ್ನು ಸಲ್ಲಿಸುವಂತೆ ...
Read More »ವೈಯಕ್ತಿಕ ಸೌಲಭ್ಯಗಳನ್ನು ತಲುಪಿಸಲು ಆದ್ಯತೆ ನೀಡಿ: ಸಂಸದ ಬಿ.ವೈ.ರಾಘವೇಂದ್ರ
ದಿಶಾ ಸಮಿತಿ ಸಭೆ ಶಿವಮೊಗ್ಗ : ಕೋವಿಡ್ ಹಿನ್ನೆಲೆಯಲ್ಲಿ ಜನರಿಗೆ ನೇರವಾಗಿ ಸೌಲಭ್ಯಗಳನ್ನು ಒದಗಿಸುವ ಸಾಮಾಜಿಕ ಭದ್ರತಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಫಲಾನುಭವಿಗಳ ಆಯ್ಕೆ ಸೇರಿದಂತೆ ಯೋಜನೆಗಳ ಅನುಷ್ಟಾನ ಸಂದರ್ಭದಲ್ಲಿ ಸ್ಥಳೀಯವಾಗಿ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯಾವುದೇ ಯೋಜನೆ ಅನುಷ್ಟಾನದಲ್ಲಿ ಸಮಸ್ಯೆಗಳು ಉಂಟಾದರೆ ತಕ್ಷಣ ಗಮನಕ್ಕೆ ತಂದು ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಗ್ರಾಮ ಜ್ಯೋತಿ ಯೋಜನೆ: ದೀನ ದಯಾಳ್ ಉಪಾಧ್ಯಾಯ್ ಗ್ರಾಮ ಜ್ಯೋತಿ ಯೋಜನೆಯಡಿ ಗ್ರಾಮೀಣ ವಿದ್ಯುದ್ದೀಕರಣ, ಫೀಡರ್ ಬೇರ್ಪಡಿಸುವಿಕೆ ...
Read More »ಪೊಲೀಸರಿಗೆ ಮುಂಬಡ್ತಿ…
ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಎಂ.ಶಾಂತರಾಜು ಅವರು ಇಬ್ಬರು ಸಿ.ಹೆಚ್.ಸಿ. ಅವರನ್ನು ಎಎಸ್ಐ ಹುದ್ದೆಗೆ ಹಾಗೂ ಇಬ್ಬರು ಸಿಪಿಸಿ ಅವರಿಗೆ ಸಿ.ಹೆಚ್.ಸಿ ಹುದ್ದೆಗೆ, ಓರ್ವ ಎ.ಹೆಚ್.ಸಿ ರವರಿಗೆ ಎ.ಆರ್.ಎಸ್.ಐ. ಹುದ್ದೆಗೆ ಹಾಗೂ 2 ಎಪಿಸಿ ರವರಿಗೆ ಎ.ಹೆಚ್.ಸಿ ಹುದ್ದೆಗೆ ಮುಂಬಡ್ತಿ ನೀಡಿ ಆದೇಶಿಸಿದ್ದಾರೆ. ಸಿ.ಹೆಚ್.ಸಿ ಹುದ್ದೆಯಿಂದ ಎಎಸ್ಐ ಹುದ್ದೆಗೆ ಮುಂಬಡ್ತಿ ವಿವರ ಮಹೇಂದ್ರಕುಮಾರ್, ಸಿ.ಹೆಚ್.ಸಿ 531, ಶಿವಮೊಗ್ಗ ಟ್ರಾಫಕ್ ಪಶ್ಚಿಮ ಠಾಣೆ ಇವರಿಗೆ ನಗರ ಪೊಲೀಸ್ ಠಾಣೆಯ ಎಎಸ್ಐ ಹುದ್ದೆಗೆ ಮುಂಬಡ್ತಿ ನೀಡಿದೆ. ನಾಗರಾಜ್, ಸಿ.ಹೆಚ್.ಸಿ 563, ತುಂಗಾನಗರ ಪೊಲೀಸ್ ಠಾಣೆ ಇವರಿಗೆ ಜೋಗ ...
Read More »ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ನೇರವಾಗಿ ಅಕ್ಕಿ ಬೇಳೆ ವಿತರಣೆ: ಜ್ಯೋತಿ ಎಸ್.ಕುಮಾರ್
ಶಿವಮೊಗ್ಗ : ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ಈ ಸಾಲಿನಲ್ಲಿ 108ದಿನಗಳ ಅವಧಿಯ ಅಕ್ಕಿ ಮತ್ತು ಬೇಳೆಯನ್ನು ನೇರವಾಗಿ ವಿತರಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಪ್ರಸ್ತುತ 53ದಿನಗಳ ಅವಧಿಯ ರೇಶನ್ ಸರಬರಾಜಾಗಿದ್ದು, ತಲಾ ವಿದ್ಯಾರ್ಥಿಗೆ ಪ್ರತಿದಿನಕ್ಕೆ 100ಗ್ರಾಂ ಅಕ್ಕಿ ಮತ್ತು 37ಗ್ರಾಂ ಬೇಳೆಯಂತೆ ಒಂದೇ ಕಂತಿನಲ್ಲಿ ಇಂದಿನಿAದ ವಿದ್ಯಾರ್ಥಿಗಳಿಗೆ ವಿತರಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದರು. ಡಿಸೆಂಬರ್‌ನಿAದ ಶಾಲೆ ಆರಂಭ ಸಾಧ್ಯತೆ: ...
Read More »ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಯಾಚಿಸಲಿ
ಶಿವಮೊಗ್ಗ: ಉಪ ಚುನಾವಣಾ ಫಲಿತಾಂಶದ ಬಳಿಕ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಹೇಳುವ ಮೂಲಕ ಜನರ ದಿಕ್ಕುತಪ್ಪಿಸಿದ್ದ ಸಿದ್ದರಾಮಯ್ಯ ಕೂಡಲೇ ರಾಜ್ಯದ ಜನರ ಬಳಿ ಕ್ಷಮೆ ಯಾಚಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದ ನಾಯಕರೇ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತಿದೆ. ಕರ್ನಾಟಕದ ಶಿರಾ ಮತ್ತು ಆರ್ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಸಿದ್ದರಾಮಯ್ಯ ...
Read More »ಕಲಾವಿದನ ಕುಟುಂಬಕ್ಕೆ ನೆರವಾದ ಪತ್ರಕರ್ತ ಶಿ.ಜು.ಪಾಶ.
ಶಿವಮೊಗ್ಗ : ಶಿವಮೊಗ್ಗದ ಕಲಾವಿದರಾದ ಕಿಶೋರ್ ಇತ್ತೀಚೆಗೆ ಮೃತಪಟ್ಟಿದ್ದರು. ಕಿಶೋರ್ ತಿರಿಕೊಂಡ ಕೆಲವೇ ದಿನಗಳಲ್ಲಿ ಅವರ ತಾಯಿಯೂ ಸಹ ತೀರಿಕೊಂಡರು. ಕಿಶೋರ್ ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ಹೆಚ್ಚಾಯಿತು. ಈ ಸಂಬಂಧದಲ್ಲಿ ಶಿವಮೊಗ್ಗದ ಪತ್ರಕರ್ತರ ಮಲೆನಾಡು ಎಕ್ಸ್ಪ್ರೆಸ್ ಪತ್ರಿಕೆಯ ಸಂಪಾದಕರಾದ ಶಿ.ಜು ಪಾಶರವರು ಮೊದಲು 35000 ರೂಪಾಯಿಗಳನ್ನ ಸಂಗ್ರಹಿಸಿದರು ನಂತರ ತಾವೇ ಸ್ವತಹ 50000 ರೂಪಾಯಿಗಳ ನೆರವು ನೀಡಿದ್ದಾರೆ. ಈ ಸಂದರ್ಭದಲ್ಲಿ ಶಿವಮೊಗ್ಗ ಪತ್ರಿಕಾ ಭವನದ ಅಧ್ಯಕ್ಷರಾದ ಮಂಜುನಾಥ್ ಮಲೆನಾಡು ಎಕ್ಸ್ಪ್ರೆಸ್ ಪತ್ರಿಕೆಯ ಸಂಪಾದಕರಾದ ಶಿ.ಜು.ಪಾಶ, ಸುಧೀರ್ ಪದ್ಮನಾಭ ಉಪಸ್ಥಿತರಿದ್ದರು.
Read More »
C News TV Kannada News Online in cnewstv