ಶಿವಮೊಗ್ಗ : ನ.12 ರಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಜನಶತಾಬ್ದಿ ರೈಲಿನಲ್ಲಿ ಸಹನಾ ಹಾಗೂ ಅವರ ತಾಯಿ ಪ್ರಯಾಣ ಮಾಡುತ್ತಿದ್ದರು. ಸಿ ಎ ವ್ಯಾಸಂಗ ಮಾಡುತ್ತಿದ್ದ ಸಹಾನ(24) ರೈಲಿನ ಬಾಗಿಲ ಬಳಿ ನಿಂತಿದ್ದಾಗ ಅಕಸ್ಮತ್ ಅಗಿ ಕಾಲು ಜಾರಿ ತುಂಗಾ ನದಿಗೆ ಬಿದ್ದಿದ್ದಳು. ಕಳೆದ ಎರಡು ದಿನದಿಂದ ಸಹನಾ ಶವಕ್ಕಾಗಿ ತುಂಗಾ ನದಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದರು. ಇಂದು ಬೆಳಗ್ಗೆ ತುಂಗಾ ನದಿಯಲ್ಲಿ ಸಹನಾ ಮೃತದೇಹ ಪತ್ತೆಯಾಗಿದೆ. ಘಟನೆ ನಡೆದು 36 ಗಂಟೆಯ ನಂತರ ಸಹನಾ ಶವ ಸಚಿವ ಈಶ್ವರಪ್ಪನವರ ಮನೆಯ ಹಿಂಭಾಗದ ಬಳಿ ಶವ ದೊರೆತಿದೆ..
Recent Comments