Breaking News

ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ನೇರವಾಗಿ ಅಕ್ಕಿ ಬೇಳೆ ವಿತರಣೆ: ಜ್ಯೋತಿ ಎಸ್.ಕುಮಾರ್

 

ಶಿವಮೊಗ್ಗ : ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ಈ ಸಾಲಿನಲ್ಲಿ 108ದಿನಗಳ ಅವಧಿಯ ಅಕ್ಕಿ ಮತ್ತು ಬೇಳೆಯನ್ನು ನೇರವಾಗಿ ವಿತರಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಪ್ರಸ್ತುತ 53ದಿನಗಳ ಅವಧಿಯ ರೇಶನ್ ಸರಬರಾಜಾಗಿದ್ದು, ತಲಾ ವಿದ್ಯಾರ್ಥಿಗೆ ಪ್ರತಿದಿನಕ್ಕೆ 100ಗ್ರಾಂ ಅಕ್ಕಿ ಮತ್ತು 37ಗ್ರಾಂ ಬೇಳೆಯಂತೆ ಒಂದೇ ಕಂತಿನಲ್ಲಿ ಇಂದಿನಿAದ ವಿದ್ಯಾರ್ಥಿಗಳಿಗೆ ವಿತರಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಡಿಸೆಂಬರ್‌ನಿAದ ಶಾಲೆ ಆರಂಭ ಸಾಧ್ಯತೆ: ಪ್ರೌಢಶಾಲೆ ಆರಂಭಿಸುವ ಕುರಿತಾಗಿ ವಿವಿಧ ಹಂತಗಳಲ್ಲಿ ಈಗಾಗಲೇ ಚರ್ಚೆ ನಡೆದಿದ್ದು, ಡಿಸೆಂಬರ್ ತಿಂಗಳಿನಿAದ ತರಗತಿಗಳು ಆರಂಭವಾಗುವ ಸಾಧ್ಯತೆ ಇದೆ. ಸರ್ಕಾರ ಈ ಕುರಿತು ಮಾರ್ಗಸೂಚಿಯನ್ನು ಸಹ ಹೊರಡಿಸಿದೆ. ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಶೇ.98ರಷ್ಟು ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದಾಖಲಾತಿಯಲ್ಲಿ ಶೇ.100ರಷ್ಟು ಹೆಚ್ಚಳ ಉಂಟಾಗಿದೆ. ಪಠ್ಯಪುಸ್ತಕ ಪೂರ್ಣ ಪ್ರಮಾಣದಲ್ಲಿ ಸರಬರಾಜಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಮೇಶ್ ಅವರು ಮಾಹಿತಿ ನೀಡಿದರು.

ಟ್ಯಾಬ್ ವಿತರಣೆ: ಖಾಸಗಿ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗುವಂತೆ ಟ್ಯಾಬ್ ವಿತರಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಇಬ್ಬರು ವಿದ್ಯಾರ್ಥಿಗಳಿಗೆ ತಲಾ ಒಂದು ಟ್ಯಾಬ್ ವಿತರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 4800 ಟ್ಯಾಬ್‌ಗಳನ್ನು ವಿತರಿಸಲಾಗುವುದು. ಸಿಲೆಬಸ್ ಬಳಿಕ ಟ್ಯಾಬ್ ಅನ್ನು ಮತ್ತೆ ಶಾಲೆಗೆ ವಿದ್ಯಾರ್ಥಿಗಳು ಹಿಂತಿರುಗಿಸಬೇಕಾಗುವುದು. ಜಿಲ್ಲೆಯಲ್ಲಿ ಶೇ.12ರಿಂದ 13ರಷ್ಟು ವಿದ್ಯಾರ್ಥಿಗಳ ಮನೆಯಲ್ಲಿ ಟಿವಿ ಇಲ್ಲದಿರುವುದು ಸಮೀಕ್ಷೆ ಮೂಲಕ ತಿಳಿದು ಬಂದಿದೆ ಎಂದರು.

Leave a Reply

Your email address will not be published. Required fields are marked *

*