ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಎಂ.ಶಾಂತರಾಜು ಅವರು ಇಬ್ಬರು ಸಿ.ಹೆಚ್.ಸಿ. ಅವರನ್ನು ಎಎಸ್ಐ ಹುದ್ದೆಗೆ ಹಾಗೂ ಇಬ್ಬರು ಸಿಪಿಸಿ ಅವರಿಗೆ ಸಿ.ಹೆಚ್.ಸಿ ಹುದ್ದೆಗೆ, ಓರ್ವ ಎ.ಹೆಚ್.ಸಿ ರವರಿಗೆ ಎ.ಆರ್.ಎಸ್.ಐ. ಹುದ್ದೆಗೆ ಹಾಗೂ 2 ಎಪಿಸಿ ರವರಿಗೆ ಎ.ಹೆಚ್.ಸಿ ಹುದ್ದೆಗೆ ಮುಂಬಡ್ತಿ ನೀಡಿ ಆದೇಶಿಸಿದ್ದಾರೆ.
ಸಿ.ಹೆಚ್.ಸಿ ಹುದ್ದೆಯಿಂದ ಎಎಸ್ಐ ಹುದ್ದೆಗೆ ಮುಂಬಡ್ತಿ ವಿವರ
ಮಹೇಂದ್ರಕುಮಾರ್, ಸಿ.ಹೆಚ್.ಸಿ 531, ಶಿವಮೊಗ್ಗ ಟ್ರಾಫಕ್ ಪಶ್ಚಿಮ ಠಾಣೆ ಇವರಿಗೆ ನಗರ ಪೊಲೀಸ್ ಠಾಣೆಯ ಎಎಸ್ಐ ಹುದ್ದೆಗೆ ಮುಂಬಡ್ತಿ ನೀಡಿದೆ.
ನಾಗರಾಜ್, ಸಿ.ಹೆಚ್.ಸಿ 563, ತುಂಗಾನಗರ ಪೊಲೀಸ್ ಠಾಣೆ ಇವರಿಗೆ ಜೋಗ ಪೊಲೀಸ್ ಠಾಣೆಯ ಎಎಸ್ಐ ಹುದ್ದೆಗೆ ಮುಂಬಡ್ತಿ ನೀಡಿದೆ.
ಸಿಪಿಸಿ ಹುದ್ದೆಯಿಂದ ಸಿ.ಹೆಚ್.ಸಿ ಹುದ್ದೆಗೆ ಮುಂಬಡ್ತಿ ವಿವರ
ಪ್ರವೀಣ್ ಪಾಟೀಲ್, ಸಿಪಿಸಿ 1629, ಶಿವಮೊಗ್ಗ ಟ್ರಾಫೀಕ್ ಪೂರ್ವ ಠಾಣೆ ಇವರಿಗೆ ಶಿವಮೊಗ್ಗ ಟ್ರಾಫಿಕ್ ಪಶ್ಚಿಮ ಠಾಣೆಯ ಸಿ.ಹೆಚ್.ಸಿ ಹುದ್ದೆಗೆ ಮುಂಬಡ್ತಿ ನೀಡಿದೆ.
ಕುಮಾರನಾಯ್ಕ, ಸಿಪಿಸಿ 1569, ಪೇಪರ್ಟೌನ್ ಪೊಲೀಸ್ ಠಾಣೆ ಇವರಿಗೆ ತುಂಗಾನಗರ ಪೊಲೀಸ್ ಠಾಣೆಯ ಸಿ.ಹೆಚ್.ಸಿ ಹುದ್ದೆಗೆ ಮುಂಬಡ್ತಿ ನೀಡಿದೆ.
ಎ.ಹೆಚ್.ಸಿ ಹುದ್ದೆಯಿಂದ ಎಆರ್ಎಸ್ಐ ಹುದ್ದೆಗೆ ಮುಂಬಡ್ತಿ
ಎಸ್.ವಿ.ಮೇಘರಾಜ್, ಎ.ಹೆಚ್.ಸಿ. 24, ಡಿಎಆರ್ ಶಿವಮೊಗ್ಗ ಇವರಿಗೆ ಡಿ.ಎ.ಆರ್. ಶಿವಮೊಗ್ಗ ಘಟಕದ ಎಆರ್ಎಸ್ಐ ಹುದ್ದೆಗೆ ಮುಂಬಡ್ತಿ ನೀಡಿದೆ.
ಎಪಿಸಿ ಹುದ್ದೆಯಿಂದ ಎ.ಹೆಚ್.ಸಿ. ಹುದ್ದೆಗೆ ಮುಂಬಡ್ತಿ
ಪ್ರಕಾಶ್ ಕೆ, ಎಪಿಸಿ 61, ಡಿಎಆರ್ ಶಿವಮೊಗ್ಗ ಇವರಿಗೆ ಡಿ.ಎ.ಆರ್. ಶಿವಮೊಗ್ಗ ಘಟಕದ ಎ.ಹೆಚ್.ಸಿ ಹುದ್ದೆಗೆ ಮುಂಬಡ್ತಿ ನೀಡಿದೆ.
ತೀರ್ಥನಾಯ್ಕ ಎಪಿಸಿ 62, ಡಿಎಆರ್ ಶಿವಮೊಗ್ಗ ಇವರಿಗೆ ಡಿ.ಎ.ಆರ್. ಶಿವಮೊಗ್ಗ ಘಟಕದ ಎ.ಹೆಚ್.ಸಿ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜು ತಿಳಿಸಿರುತ್ತಾರೆ.
C News TV Kannada News Online in cnewstv