Breaking News

ಕಲಾವಿದನ ಕುಟುಂಬಕ್ಕೆ ನೆರವಾದ ಪತ್ರಕರ್ತ ಶಿ.ಜು.ಪಾಶ.

 

ಶಿವಮೊಗ್ಗ : ಶಿವಮೊಗ್ಗದ ಕಲಾವಿದರಾದ ಕಿಶೋರ್ ಇತ್ತೀಚೆಗೆ ಮೃತಪಟ್ಟಿದ್ದರು. ಕಿಶೋರ್ ತಿರಿಕೊಂಡ ಕೆಲವೇ ದಿನಗಳಲ್ಲಿ ಅವರ ತಾಯಿಯೂ ಸಹ ತೀರಿಕೊಂಡರು. ಕಿಶೋರ್ ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ಹೆಚ್ಚಾಯಿತು. ಈ ಸಂಬಂಧದಲ್ಲಿ ಶಿವಮೊಗ್ಗದ ಪತ್ರಕರ್ತರ ಮಲೆನಾಡು ಎಕ್ಸ್ಪ್ರೆಸ್ ಪತ್ರಿಕೆಯ ಸಂಪಾದಕರಾದ ಶಿ.ಜು ಪಾಶರವರು ಮೊದಲು 35000 ರೂಪಾಯಿಗಳನ್ನ ಸಂಗ್ರಹಿಸಿದರು ನಂತರ ತಾವೇ ಸ್ವತಹ 50000 ರೂಪಾಯಿಗಳ ನೆರವು ನೀಡಿದ್ದಾರೆ. ಈ ಸಂದರ್ಭದಲ್ಲಿ ಶಿವಮೊಗ್ಗ ಪತ್ರಿಕಾ ಭವನದ ಅಧ್ಯಕ್ಷರಾದ ಮಂಜುನಾಥ್ ಮಲೆನಾಡು ಎಕ್ಸ್ಪ್ರೆಸ್ ಪತ್ರಿಕೆಯ ಸಂಪಾದಕರಾದ ಶಿ.ಜು.ಪಾಶ, ಸುಧೀರ್ ಪದ್ಮನಾಭ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

*