Breaking News

ಶಿವಮೊಗ್ಗ

ಸಕ್ರೆಬೈಲು ಹಿರಿಯ ಆನೆ ಗೀತಾ ಇನ್ನಿಲ್ಲ

ಶಿವಮೊಗ್ಗ: ರಾಜ್ಯದ ಆನೆ ಬಿಡಾರಗಳಲ್ಲೇ ಅತಿ ಹಿರಿಯ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಕ್ರೆಬೈಲು ಆನೆ ಬಿಡಾರದ ಹಿರಿಯ ಆನೆ ಗೀತಾ ಇಂದು ಬೆಳಗ್ಗೆ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದೆ. ವಯೋಸಹಜ ಕಾರಣದಿಂದ‌ ಗೀತಾ ಆನೆ ಕಳೆದ ನಾಲ್ಕು ದಿನದಿಂದ ಆಹಾರವನ್ನು ತ್ಯಜಿಸಿತ್ತು. ಇಂದು ಬೆಳಗ್ಗೆ ಸಕ್ರೆಬೈಲು ಕ್ರಾಲ್ ಸಮೀಪ ಮೃತಪಟ್ಟಿದೆ. ಗೀತಾ ಆನೆಯನ್ನು 1968ರಲ್ಲಿ ಕಾಕನಕೋಟೆಯಲ್ಲಿ ಸೆರೆ ಹಿಡಿದು ಪಳಗಿಸಿ ಬಳಿಕ ಸಕ್ರೆಬೈಲು ಆನೆ ಬಿಡಾರಕ್ಕೆ ತರಲಾಗಿತ್ತು. ರಾಜ್ಯದ ಅತಿ ಹಿರಿಯ ಆನೆ ಮೃತಪಟ್ಟಿರುವುದು ನೋವಿನಸಂಗತಿಯಾಗಿದೆ.

Read More »

ಕ್ಯಾಂಟರ್ ಪಲ್ಟಿ, ಗೋವುಗಳ ಸಾವು

ಶಿವಮೊಗ್ಗ: ಗೋವುಗಳನ್ನು ಸಾಗಿಸುತ್ತಿದರೆ ಕ್ಯಾಂಟರ್ ಪಲ್ಟಿಯಾದ ಪರಿಣಾಮ ಕ್ಯಾಂಟರ್ ನಲ್ಲಿದ್ದ ಎಂಟು ಎತ್ತು ಹಾಗೂ ಎಮ್ಮೆಗಳು ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಸಮೀಪ ಇಂದು ಮುಂಜಾನೆ ನಡೆದಿದೆ. ಘಟನೆ ನಡೆದ ಕೂಡಲೇ ಸ್ಥಳೀಯರು ಕಾರ್ಯಾಚರಣೆ ನಡೆಸಿ ಆರು ಗೋವುಗಳನ್ನು ರಕ್ಷಣೆ ಮಾಡಿದ್ದಾರೆ. ದಾವಣಗೆರೆಯಿಂದ ಮಂಗಳೂರಿಗೆ ಕ್ಯಾಂಟರ್ ನಲ್ಲಿ ಗೋವುಗಳನ್ನು ಸಾಗಣೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಘಟನೆಯಲ್ಲಿ ಕ್ಯಾಂಟರ್ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ತುಂಗಾನಗರ,ದೊಡ್ಡಪೇಟೆ, ಕೋಟೆ ಠಾಣಾ ವ್ಯಾಪ್ತಿಯ ಜನರ ಗಮನಕ್ಕೆ 

  ಶಿವಮೊಗ್ಗ : ಇಂದು (ಡಿಸೆಂಬರ್ 8)  ಬೆಳಿಗ್ಗೆ 7 ರಿಂದ ಬೆಳಿಗ್ಗೆ 10 ರ ವರೆಗೆ ಈ ಸೂಚಿಸಲಾದ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮೂರು ಗಂಟೆಗಳ ಕಾಲ ಇರುವ ಕರ್ಫ್ಯೂ ಸಡಿಲ ಮಾಡಲಾಗಿದೆ. ಬೆಳಿಗ್ಗೆ 3 ಗಂಟೆಗಳ ಕಾಲ ಈ ಮೂರೂ ಠಾಣಾ ವ್ಯಾಪ್ತಿಯ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ…ಅಂಗಡಿಗಳನ್ನು ತೆರೆದು ಸಾರ್ವಜನಿಕ ಸೇವೆ ನೀಡಬಹುದು. ಶಿವಮೊಗ್ಗ ನಗರದಾದ್ಯಂತ 144 ಸೆಕ್ಷನ್ ಬುಧವಾರದ ವರೆಗೆ ಮುಂದುವರೆಯಲಿದೆ…  

Read More »

ಸಹಜ ಸ್ದಿತಿಯತ್ತ ಶಿವಮೊಗ್ಗ: ಆದ್ರೂ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿರುವ ಜನ

ಶಿವಮೊಗ್ಗ : ನಿನ್ನೆ ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದ್ದರಿಂದ ಆರಂಭಗೊಂಡಿರುವ ಗಲಾಟೆಯನ್ನು ನಿಯಂತ್ರಣ ಮಾಡಲು ಪೋಲಿಸರು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144 ನಿಷೇದಾಜ್ಞೆ ಜಾರಿಗೊಳಿಸಿದ್ದರು. ಈ ಕಾರಣದಿಂದಾಗಿ ಇಂದು ಬೆಳಗ್ಗೆಯಿಂದಲೇ ಶಿವಮೊಗ್ಗ ನಗರ ಸಹಜ ಸ್ಥಿತಿಗೆ ಮರಳಿದೆ. ಆದರೆ ನಿನ್ನೆಯ ಗಲಭೆಯಿಂದ ಭಯಭೀತರಾಗಿರುವ ಜನತೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಶಿವಮೊಗ್ಗದ ಬಹುತೇಕ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗದ ಎಲ್ಲ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಲಾಗಿದೆ. ಆದರೆ ಹಾಲಿನ ಅಂಗಡಿಗಳು ಹಾಗೂ ಮೆಡಿಕಲ್ ಶಾಪ್ ಗಳನ್ನು ...

Read More »

ವದಂತಿಗಳಿಗೆ ಕಿವಿಗೊಡಬೇಡಿ. ಶಿವಮೊಗ್ಗದಲ್ಲಿ ಶಾಂತಿ ಕಾಪಾಡಲು ಬಿಗಿ ಬಂದೋಬಸ್ತು : ಐಜಿಪಿ ರವಿ

  ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಶಾಂತಿ ಕಾಪಾಡಲು ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದ್ದು, ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಪೂರ್ವ ವಲಯ ಐಜಿಪಿ ರವಿ ಅವರು ಮನವಿ ಮಾಡಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗುರುವಾರ ಶಿವಮೊಗ್ಗ ನಗರದಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ 62ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತೀವ್ರ ನಿಗಾ ಇರಿಸಲಾಗಿದೆ ಎಂದು ಹೇಳಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ನೆರೆಯ ಜಿಲ್ಲೆಗಳಿಂದ ಪೊಲೀಸರನ್ನು ಕರೆಯಿಸಲಾಗಿದೆ. 148 ಪ್ರದೇಶಗಳನ್ನು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಎಂದು ...

Read More »

ಶಿವಮೊಗ್ಗದ 3 ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಕರ್ಫ್ಯೂ ಜಾರಿ

ಶಿವಮೊಗ್ಗ : ಬಜರಂಗದಳದ ಕಾರ್ಯಕರ್ತ ನಾಗೇಶ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ನಗರದಲ್ಲಿ ಉಂಟಾದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಶಿವಮೊಗ್ಗದ ಮೂರು ಠಾಣಾ ವ್ಯಾಪ್ತಿಯಲ್ಲಿ ಕರ್ಪ್ಯೂ ಜಾರಿಗೊಳಿಸಲಾಗಿದೆ. ಶಿವಮೊಗ್ಗದ ದೊಡ್ಡಪೇಟೆ, ತುಂಗಾನಗರ, ಕೋಟೆ ಠಾಣೆ ವ್ಯಾಪ್ತಿಯಲ್ಲಿ ಸಂಜೆ 6 ರಿಂದ ನಾಳೆ ಬೆಳಗ್ಗೆ 6 ರವರೆಗೆ ರಾತ್ರಿ ಕರ್ಪ್ಯೂ ಜಾರಿಗೊಳಿಸಲಾಗಿದೆ. ಉಳಿದಂತೆ ನಗರದಾದ್ಯಂತ ಡಿ.5ರ ಬೆಳಿಗ್ಗೆ 10 ಗಂಟೆಯವರೆಗೂ ನಿಷೇಧಾಜ್ಞೆ ಇರಲಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತರಾಜು ತಿಳಿಸಿದ್ದಾರೆ.  

Read More »

ಎಪಿಎಂಸಿಯ ಸಹಾಯಕ ನಿರ್ದೇಶಕರ ಕಚೇರಿಯ ಸೂಪರಿಂಟೆಂಡೆಂಟ್ ಎಸಿಬಿ ಬಲೆಗೆ

  ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶಿವಮೊಗ್ಗ ಎಪಿಎಂಸಿಯಲ್ಲಿ ದಾಳಿ ನಡೆಸಿ, ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಯೊಬ್ಬರನ್ನು ಬಂಧಿಸಿದ್ದಾರೆ.ಎಪಿಎಂಸಿಯ ಸಹಾಯಕ ನಿರ್ದೇಶಕರ ಕಚೇರಿಯ ಸೂಪರಿಂಟೆಂಡೆಂಟ್ ಸಾಮ್ಯಾ ನಾಯ್ಕ ಬಂಧಿತರು. ಐದು ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ. ಎಪಿಎಂಸಿ ಟ್ರೇಡ್ ಲೈಸೆನ್ಸ್ ರದ್ದುಗೊಳಿಸಲು ಸೂಪರಿಂಟೆಂಡೆಂಟ್ ಸಾಮ್ಯಾ ನಾಯ್ಕ ಅವರು 10 ಸಾವಿರ ರೂ. ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಉಮಾ ಮಹೇಶ್ ಎಂಬುವವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇವತ್ತು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸಾಮ‍್ಯಾ ನಾಯ್ಕ ಅವರನ್ನು ಬಂಧಿಸಲಾಗಿದ್ದು, ಹಣವನ್ನು ...

Read More »

ಒಂದು ನಾಯಿಯ ಕಥೆ

ಶಿವಮೊಗ್ಗ: ಇದು ಅಂತಿಂಥ ನಾಯಿಯಲ್ಲ. ಮಾಲೀಕರಿಂದ ತಪ್ಪಿಸಿಕೊಂಡ ಈ ನಾಯಿ ಇದೀಗ ಪೊಲೀಸರ ವಶದಲ್ಲಿದೆ. ಈ ನಾಯಿ ಪೊಲೀಸರ ವಶಕ್ಕೆ ಬಂದ ಕಥೆಯೇ ಒಂದು ರೋಚಕ. ಶಿವಮೊಗ್ಗದ ಗಾಡಿಕೊಪ್ಪದಲ್ಲಿ ಮಾಲೀಕರಿಂದ ತಪ್ಪಿಸಿಕೊಂಡಿದ್ದ ದಷ್ಟಪುಷ್ಟವಾಗಿದ್ದ ಲ್ಯಾಬ್ರಡಾರ್ ನಾಯಿ ಕಾಣಿಸಿಕೊಂಡಿದೆ. ಯಾರೋ ಸಾಕಿದ ನಾಯಿ ಎಂಬುದನ್ನು ಅರಿತ ಮೀನು ವ್ಯಾಪಾರಿಯೊಬ್ಬರು ನಾಯಿಯನ್ನು ಕರೆದುಕೊಂಡು ತನ್ನ ಮನೆಗೆ ಬಂದಿದ್ದಾರೆ. ನಾಯಿಯ ಮಾಲೀಕರು ಬರಬಹುದೇನೋ ಎಂದು ಕಾದಿದ್ದಾರೆ. ಆದರೆ ನಾಯಿಯ ಮಾಲೀಕರು ಬರಲೇ ಇಲ್ಲ. ಅಷ್ಟರಲ್ಲಾಗಲೇ ಸಂಜೆಯಾಗಿದ್ದು, ನಾಯಿ ಕೂಗಾಡಲಾರಂಭಿಸಿದೆ‌. ಆಗ ಏನು ಮಾಡಬೇಕೆಂದು ದಿಕ್ಕುತೋಚದ ಮೀನು ವ್ಯಾಪಾರಿ ತುಂಗಾ ...

Read More »

ಸುಲಿಗೆ ಪ್ರಕರಣ ಮೂವರು ಆರೋಪಿಗಳ ಬಂಧನ ಹಾಗೂ 15ಲಕ್ಷ ರೂ. ನಗದು ಕೃತ್ಯಕ್ಕೆ ಬಳಸಿದ ಕಾರು ವಶ

  ನವೆಂಬರ್ 24 ರಂದು 35 ವರ್ಷದ ನಫೀಸ್ ಆಲಂ ಎಂಬುವವರು ಕೊಲ್ಲಾಪುರದಿಂದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ರೂ 15 ಲಕ್ಷ ರೂ ನಗದನ್ನು ಇಟ್ಟುಕೊಂಡು ಆನವಟ್ಟಿ ಮಾರ್ಗವಾಗಿ ಸಾಗರದ ಕಡೆಗೆ ಬರುತ್ತಿರುವಾಗ, ರಾತ್ರಿ ಸುಮಾರು 10-30 ಗಂಟೆಗೆ ಯಾರೋ ದುಷ್ಕರ್ಮಿಗಳು ಕಾರಿನಲ್ಲಿ ಇವರನ್ನು ಹಿಂಬಾಲಿಸಿಕೊಂಡು ಬಂದು, ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಆನವಟ್ಟಿ – ಸೊರಬ ಮುಖ್ಯ ರಸ್ತೆಯ ಕೊರಕೋಡು ಕ್ರಾಸ್ ನ ಹತ್ತಿರ ಕಾರನ್ನು ಅಡ್ಡಗಟ್ಟಿ, ಇವರಿಗೆ ಹೆದರಿಸಿ ಈ ಹದಿನೈದು ಲಕ್ಷ ನಗದು ಮತ್ತು ಸ್ವಿಫ್ಟ್ ಡಿಸೈರ್ ಕಾರನ್ನು ಬಲವಂತವಾಗಿ ...

Read More »

ಕಾಣೆಯಾದ ಬಾಲಕ ಶವವಾಗಿ ಪತ್ತೆ.

  ಶಿವಮೊಗ್ಗ: ಕಾಣೆಯಾಗಿದ್ದ ಬಾಲಕ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತಾಲೂಕಿನ ಹೊಳೆಹನಸವಾಡಿಯಲ್ಲಿ ನಡೆದಿದೆ. ಶಿವಮೊಗ್ಗ ಹೊರ ವಲಯದ ಚಿಕ್ಕಲ್ ನಿವಾಸಿಯಾದ ಮೊಹಮದ್ ಹುಸೈನ್(12) ಮೊನ್ನೆ 23 ರಂದು ತನ್ನ ಸ್ನೇಹಿತರ ಜೊತೆ ತುಂಗಾ ನದಿಯಲ್ಲಿ ಈಜಾಡಲು ಹೋಗಿದ್ದ, ಈ ವೇಳೆ ಹುಸೈನ್ ನದಿಯಲ್ಲಿ ಮುಳುಗಿದ್ದಾನೆ. ಈತನ ಜೊತೆಯ ಸ್ನೇಹಿತರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ವೇಳೆಗಾಗಲೇ ಹುಸೈನ್ ತಂದೆ ನೂರ್ ಅಹಮದ್ ಸ್ನೇಹಿತರಲ್ಲಿ ವಿಚಾರಿಸಿದರು ಸಹ ಅವರು ನದಿಯಲ್ಲಿ ಮುಳಗಿರುವ ವಿಚಾರ ತಿಳಿಸಲಿಲ್ಲ. ಇದರಿಂದ ಹುಸೈನ್ ತಂದೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ...

Read More »