ಶಿವಮೊಗ್ಗ: ಇದು ಅಂತಿಂಥ ನಾಯಿಯಲ್ಲ. ಮಾಲೀಕರಿಂದ ತಪ್ಪಿಸಿಕೊಂಡ ಈ ನಾಯಿ ಇದೀಗ ಪೊಲೀಸರ ವಶದಲ್ಲಿದೆ. ಈ ನಾಯಿ ಪೊಲೀಸರ ವಶಕ್ಕೆ ಬಂದ ಕಥೆಯೇ ಒಂದು ರೋಚಕ.
ಶಿವಮೊಗ್ಗದ ಗಾಡಿಕೊಪ್ಪದಲ್ಲಿ ಮಾಲೀಕರಿಂದ ತಪ್ಪಿಸಿಕೊಂಡಿದ್ದ ದಷ್ಟಪುಷ್ಟವಾಗಿದ್ದ ಲ್ಯಾಬ್ರಡಾರ್ ನಾಯಿ ಕಾಣಿಸಿಕೊಂಡಿದೆ. ಯಾರೋ ಸಾಕಿದ ನಾಯಿ ಎಂಬುದನ್ನು ಅರಿತ ಮೀನು ವ್ಯಾಪಾರಿಯೊಬ್ಬರು ನಾಯಿಯನ್ನು ಕರೆದುಕೊಂಡು ತನ್ನ ಮನೆಗೆ ಬಂದಿದ್ದಾರೆ. ನಾಯಿಯ ಮಾಲೀಕರು ಬರಬಹುದೇನೋ ಎಂದು ಕಾದಿದ್ದಾರೆ. ಆದರೆ ನಾಯಿಯ ಮಾಲೀಕರು ಬರಲೇ ಇಲ್ಲ. ಅಷ್ಟರಲ್ಲಾಗಲೇ ಸಂಜೆಯಾಗಿದ್ದು, ನಾಯಿ ಕೂಗಾಡಲಾರಂಭಿಸಿದೆ. ಆಗ ಏನು ಮಾಡಬೇಕೆಂದು ದಿಕ್ಕುತೋಚದ ಮೀನು ವ್ಯಾಪಾರಿ ತುಂಗಾ ನಗರ ಪಿಎಸ್ ಐ ತಿರುಮಲೇಶ್ ಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ತಿರುಮಲೇಶ್ ನಾಯಿಯನ್ನು ಪೊಲೀಸ್ ಠಾಣೆಗೆ ಕರೆತಂದು ಅದಕ್ಕೆ ಆಹಾರದ ವ್ಯವಸ್ಥೆ ಮಾಡಿದ್ದಾರೆ. ಪ್ರಸ್ತುತ ಪೊಲೀಸ್ ಠಾಣೆಯಲ್ಲೇ ವಾಸ್ತವ್ಯ ಹೂಡಿರುವ ನಾಯಿ ಪೊಲೀಸರ ಆರೈಕೆಯಲ್ಲಿ ಕಾಲಕಳೆಯುತ್ತಿದೆ. ಇನ್ನೊಂದು ದಿನ ನಾಯಿಯ ಮಾಲೀಕರಿಗೆ ಕಾಯುತ್ತೇವೆ. ಒಂದು ವೇಳೆ ಯಾರೂ ಬಾರದೇ ಇದ್ದಲ್ಲಿ ನಾಯಿ ಸಾಕಲು ಮುಂದೆ ಬರುವವರಿಗೆ ಅಥವಾ ಡಾಗ್ ಕೇರ್ ಸೆಂಟರ್ ಗೆ ನಾಯಿಯನ್ನು ಕಳುಹಿಸುವುದಾಗಿ ಪಿಎಸ್ ಐ ತಿರುಮಲೇಶ್ ತಿಳಿಸಿದ್ದಾರೆ.
C News TV Kannada News Online in cnewstv