ಶಿವಮೊಗ್ಗ: ರಾಜ್ಯದ ಆನೆ ಬಿಡಾರಗಳಲ್ಲೇ ಅತಿ ಹಿರಿಯ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಕ್ರೆಬೈಲು ಆನೆ ಬಿಡಾರದ ಹಿರಿಯ ಆನೆ ಗೀತಾ ಇಂದು ಬೆಳಗ್ಗೆ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದೆ. ವಯೋಸಹಜ ಕಾರಣದಿಂದ ಗೀತಾ ಆನೆ ಕಳೆದ ನಾಲ್ಕು ದಿನದಿಂದ ಆಹಾರವನ್ನು ತ್ಯಜಿಸಿತ್ತು. ಇಂದು ಬೆಳಗ್ಗೆ ಸಕ್ರೆಬೈಲು ಕ್ರಾಲ್ ಸಮೀಪ ಮೃತಪಟ್ಟಿದೆ. ಗೀತಾ ಆನೆಯನ್ನು 1968ರಲ್ಲಿ ಕಾಕನಕೋಟೆಯಲ್ಲಿ ಸೆರೆ ಹಿಡಿದು ಪಳಗಿಸಿ ಬಳಿಕ ಸಕ್ರೆಬೈಲು ಆನೆ ಬಿಡಾರಕ್ಕೆ ತರಲಾಗಿತ್ತು. ರಾಜ್ಯದ ಅತಿ ಹಿರಿಯ ಆನೆ ಮೃತಪಟ್ಟಿರುವುದು ನೋವಿನಸಂಗತಿಯಾಗಿದೆ.
C News TV Kannada News Online in cnewstv