Breaking News

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಾದ್ಯಂತ ಮಾರ್ಚ್ ತಿಂಗಳಿನಲ್ಲಿ ಫೇಸ್ ಮಾಸ್ಕ್ ಧರಿಸದವರ ವಿರುದ್ಧ ಎಷ್ಟು ಪ್ರಕರಣಗಳು ದಾಖಲಾಗಿದೆ ಗೊತ್ತಾ ?!

  ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಾದ್ಯಂತ ಫೇಸ್ ಮಾಸ್ಕ್ ಧರಿಸದವರ ವಿರುದ್ಧ ಪೊಲೀಸ್ ಇಲಾಖೆ ಯಿಂದ ಕಾರ್ಯಾಚರಣೆ ನಡೆಸಿ ಮಾರ್ಚ್ 1 ರಿಂದ ಮಾರ್ಚ್ 31ರ ವರೆಗೆ ಒಟ್ಟು 1694 ಪ್ರಕರಣಗಳನ್ನು ದಾಖಲಿಸಿ, ರೂ 2,23,350 ದಂಡ ವಿಧಿಸಿ ಕ್ರಮ ಕೈಗೊಂಡಿದೆ ಎಂದು ಪೊಲೀಸ್ ಅಧೀಕ್ಷಕರಾದ ಶ್ರೀ ಕೆ.ಎಂ ಶಾಂತರಾಜು ರವರು ತಿಳಿಸಿರುತ್ತಾರೆ. ತಾಲ್ಲೂಕುವಾರು ದಾಖಲಾದ ಪ್ರಕರಣಗಳು :  ಶಿವಮೊಗ್ಗ ತಾಲ್ಲೂಕ್ : ಒಟ್ಟು 468 ಪ್ರಕರಣಗಳನ್ನು ದಾಖಲಿಸಿ ರೂ 1,00,750 ದಂಡ ವಿಧಿಸಲಾಗಿದೆ. ಭದ್ರಾವತಿ ತಾಲ್ಲೂಕ್ : ಒಟ್ಟು 827 ಪ್ರಕರಣಗಳನ್ನು ದಾಖಲಿಸಿ ...

Read More »

ಬದುಕು ಕಸಿದುಕೊಂಡ ಬಣ್ಣದ ಹಬ್ಬ

  ಹಾವೇರಿ: ಹೋಳಿ ಹಬ್ಬದ ಓಕುಳಿ ಆಡಿದ ಇಬ್ಬರು ಬಾಲಕರು ಸ್ನಾನ ಮಾಡಲು ನದಿಗೆ ತೆರಳಿದ್ದರು. ಈ ವೇಳೆ ಈಜಲು ಬಾರದೇ ಬಾಲಕರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಹಾವೇರಿ ತಾಲೂಕಿನ ನಾಗನೂರಿನಲ್ಲಿ ನಡೆದಿದೆ. ಮಹೇಶ್ ದುಂಡಣ್ಣನವರ (13)ವಿರೇಶ್ ಅಕ್ಕಿವಳ್ಳಿ (13) ಮೃತ ದುರ್ದೈವಿಗಳು. ಘಟನಾ ಸ್ಥಳದಲ್ಲಿ  ಮೃತ ಬಾಲಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ರಮೇಶ್ ಜಾರಕಿಹೊಳಿ ಬಂದಿಸಿ : ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಪಂಜಿನ ಮೆರವಣಿಗೆ

  ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಇಂದು ಪಂಜಿನ ಮೆರವಣಿಗೆಯನ್ನು ನಡೆಸಲಾಯಿತು. ರಾಜ್ಯ ತಲೆತಗ್ಗಿಸುವಂತೆ ಕೆಲಸ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಡಿದ್ದಾರೆ. ಅತ್ಯಾಚಾರಿ ರಮೇಶ್ ಜಾರಕಿಹೊಳಿಗೆ ರಕ್ಷಣೆ ನೀಡುತ್ತಿರುವ ಬಿಜೆಪಿ ಸರ್ಕಾರದ ಧೋರಣೆಯನ್ನು ಖಂಡಿಸಿ ನಗರದ ಗೋಪಿವೃತ್ತದಿಂದ ಮಹಾವೀರ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಎಸ್ ಸುಂದರೇಶ್ , ಮಾಜಿ ಶಾಸಕರಾದ ಕೆ ಬಿ ಪ್ರಸನ್ನಕುಮಾರ್ , ಮಾಜಿ ಸೂಡಾ ಅಧ್ಯಕ್ಷರಾದ ಎನ್ ರಮೇಶ್ , ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ...

Read More »

ರಮೇಶ್ ಜಾರಕಿಹೊಳಿ ಬಂಧನಕ್ಕೆ ಆಗ್ರಹಿಸಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಎದುರು ಬೃಹತ್ ಪ್ರತಿಭಟನೆ

  ಬೆಂಗಳೂರು : ಸಿ.ಡಿ ಪ್ರಕರಣದಲ್ಲಿ ಸಿಕ್ಕಿಕೊಂಡಿರುವ ಅತೃಪ್ತ ಶಾಸಕ ಮಾಜಿ ಸಚಿವ ರಮೇಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಈ ಕೂಡಲೆ ರಮೇಶ್ ಜಾರಕಿಹೊಳಿ ಬಂಧನಕ್ಕೆ ಆಗ್ರಹಿಸಿ ಹಾಗೂ ಬಿಜೆಪಿ ಸರ್ಕಾರದ ಅನೀತಿ ಮತ್ತು ಅಧರ್ಮ ರಾಜಕಾರಣದ ವಿರುದ್ಧ ಇಂದು ಬೆಳಗ್ಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಎದುರು ಯುವ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು ಪ್ರತಿಭಟನೆ ನೇತೃತ್ವವನ್ನು ಯುವ ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಪ್ರಧಾನ ...

Read More »

ಯುವತಿಗೆ ಸಾಗರದಲ್ಲಿ 2 ಗಂಟೆ ಆಪರೇಷನ್, ವೈದ್ಯರಿಗೆ ಕಾದಿತ್ತು ಶಾಕ್

ಸಾಗರ : ಹೊಟ್ಟೆನೋವಿನಿಂದ ಬಳಲುತ್ತಿದ್ದ ಯುವತಿಗೆ ಸತತ ಎರಡು ಗಂಟೆ ಆಪರೇಷನ್‌ ಮಾಡಿ, 8 ಕೆ.ಜಿ. ತೂಕದ ಗಡ್ಡೆಯನ್ನು ಹೊರ ತೆಗೆಯಲಾಗಿದೆ.ಸಾಗರದ ತಾಯಿ ಮತ್ತು ಮಗು ಸರ್ಕಾರಿ ಆಸ್ಪತ್ರೆಯಲ್ಲಿ ಆಪರೇಷನ್‌ ನಡೆಸಲಾಯಿತು. ಸೊರಬ ತಾಲೂಕಿನ 21 ವರ್ಷದ ಯುವತಿಯೊಬ್ಬಳು ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಚಿಕಿತ್ಸೆಗೆ ಬಂದಾಗ ಸ್ಕ್ಯಾನಿಂಗ್‌ ನಡೆಸಲಾಗಿತ್ತು. ಆಗ ಗಡ್ಡೆ ಇರುವುದು ಗೊತ್ತಾಗಿತ್ತು. ಪ್ರಸೂತಿ ತಜ್ಞೆ ಡಾ.ಪ್ರತಿಮಾ, ಸಿವಿಲ್‌ ಸರ್ಜನ್‌ ಡಾ.ಪ್ರಕಾಶ್‌ ಬೋಸ್ಲೆ, ಸಿಬ್ಬಂದಿಗಳಾದ ರೀಟಾ, ರೋಹಿಣಿ, ಚಂದ್ರು ಸೇರಿದಂತೆ ಹಲವು ಸಿಬ್ಬಂದಿಗಳು ಅಪರೇಷನ್‌ ನಡೆಸಿದರು. ಸತತ ಎರಡು ಗಂಟೆ ಆಪರೇಷನ್‌ ನಡೆಸಿ, ...

Read More »

ರಾಜ್ಯ ನಾಗರೀಕ ರಕ್ಷಣಾ ಸಮಿತಿ : ಹೆಲ್ಮೆಟ್ ವಿನಾಯಿತಿಗಾಗಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ

  ಶಿವಮೊಗ್ಗ :  ನಗರದಲ್ಲಿ ಬಿಸಿಲಿನ ಧಗೆ ದಿನೇ ದಿನೇ ಹೆಚ್ಚುತ್ತಿರುವ ಕಾರಣ ಜನಸಾಮಾನ್ಯರು ಪರದಾಡುವಂತಾಗಿದೆ ಮತ್ತು ಬಿಸಿಲು ಇರುವ ಸಂದರ್ಭದಲ್ಲಿ 1ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವಾಗ ಹೆಲ್ಮೆಟನ್ನು ಧರಿಸಿರುವಾಗ ಅಲರ್ಜಿ ಸೇರಿದಂತೆ ನಾನಾ ಸಮಸ್ಯೆಗಳು ಹೆಚ್ಚಾಗುತ್ತಿವೆ ಹಾಗೂ ಹಿರಿಯ ನಾಗರೀಕರು ಬಿಸಿಲಿನಲ್ಲಿ ಹೆಲ್ಮೆಟ್ ಧಾರಣೆ ಮಾಡಿ ಪ್ರಯಾಣಿಸುವಾಗ ತಲೆಸುತ್ತು ಬರುವಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ ಆದ್ದರಿಂದ ದೂರ ಪ್ರಯಾಣ ಮಾಡುವ ಸ್ಥಳಗಳಲ್ಲಿ ಹೆಲ್ಮೆಟ್ ಪರಿಶೀಲನೆ ಮುಂದುವರಿಸಿ ನಗರ ವ್ಯಾಪ್ತಿಗಳಲ್ಲಿ ಹೆಲ್ಮೆಟ್ ಧಾರಣೆ ಗೆ ವಿನಾಯ್ತಿ ನೀಡಿ ಹೆಲ್ಮೆಟ್ ತಪಾಸಣೆ ಬದಲಾಗಿ ವೇಗ ಮಿತಿ ಯನ್ನು ...

Read More »

ಗಾಂಜಾ ಮಾರಾಟ ಮಾಡುತ್ತಿದ್ದ 4 ಜನ ಆರೋಪಿಗಳ ಬಂಧನ.

  ಶಿಕಾರಿಪುರ : ಆಶ್ರಯ ಬಡಾವಣೆ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ 4 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಶಿಕಾರಿಪುರ ಟೌನ್ ಮೂಲದ ಸುನಿಲ್ (26) ಇಮ್ರಾನ್ (22) ದಾದಾಪೀರ್ (22) ರಿಜ್ವನ್ (23) ಆರೋಪಿಗಳಿಂದ 400 ಗ್ರಾಂ ತೂಕದ ಗಾಂಜಾ ಹಾಗೂ ಗಾಂಜಾ ಮಾರಾಟ ಮಾಡಿ ಗಳಿಸಿದ 650 ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ NDPS ಕಾಯ್ದೆ ರೀತ್ಯ ಪ್ರಕರಣವನ್ನು ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಮಾದಕ ವಸ್ತು ಗಾಂಜಾ ...

Read More »

80 ಅಡಿ ಆಳದ ತುಂಗಾ ಚಾನೆಲ್ನಲ್ಲಿ ಬಿದ್ದ ವ್ಯಕ್ತಿಯ ರಕ್ಷಣೆ

  ಶಿವಮೊಗ್ಗ : ಸಾಗರ ರಸ್ತೆ ಗಾಡಿಕೊಪ್ಪ ಬಳಿಯಿರುವ ತುಂಗಾ ಚಾನಲ್ಗೆಗೆ ಇಂದು ಬೆಳಗಿನ ಜಾವ ಸಾಗರ ಮೂಲದ 45 ವರ್ಷದ ಸಂತೋಷ ಎಂಬಾತ ಬಿದ್ದಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಜೀವದ ಹಂಗು ತೊರೆದು 80 ಅಡಿಗಳಷ್ಟು ಆಳದ ಚಾನೆಲ್ನಿಂದ ಸಂತೋಷ್ ನನ್ನ ರಕ್ಷಿಸಿದ್ದಾರೆ. ಸಂತೋಷ್ ಚಾನಲ್ ಗೆ ಬೀಳಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಸದ್ಯ ಸಂತೋಷ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಲೆಗೆ ಮತ್ತು ಕೈಕಾಲುಗಳಿಗೆ ಗಾಯ ಗಳಾಗಿದ್ದು, ಮೆಗ್ಗನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read More »

ಇಂದು ಶಿವಮೊಗ್ಗ ನಗರದಲ್ಲಿ ವಾಹನಗಳ ಸಂಚಾರಿ ಮಾರ್ಗ ಬದಲಾವಣೆ.

  ಶಿವಮೊಗ್ಗ : ದಿನಾಂಕಃ- 13-03-2021 ರಂದು ಶಿವಮೊಗ್ಗ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿರುವುದರಿಂದ, ಬೇರೆ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಶಿವಮೊಗ್ಗ ನಗರಕ್ಕೆ ಬರುವ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ದೃಷ್ಠಿಯಿಂದ ಈ ಕೆಳಕಂಡಂತೆ ಮಾರ್ಗ ಬದಲಾವಣೆ ಮಾಡಲಾಗಿರುತ್ತದೆ. 1)ಭದ್ರಾವತಿಯ ಕಡೆಯಿಂದ ಬರುವ ವಾಹನಗಳಿಗೆ ಎಂ.ಆರ್.ಎಸ್ ವೃತ್ತ – ಸಂದೇಶ್ ಮೋಟಾರ್ಸ್ ವೃತ್ತ – ನ್ಯೂ ಮಂಡ್ಲಿ ವೃತ್ತ – ಇಲಿಯಾಜ್ ನಗರ – ಬುದ್ದಾ ನಗರ 2)ತೀರ್ಥಹಳ್ಳಿಯ ಕಡೆಯಿಂದ ಬರುವ ವಾಹನಗಳಿಗೆ ನ್ಯೂ ಮಂಡ್ಲಿ ...

Read More »

ಶಿವಮೊಗ್ಗದಲ್ಲಿ ರೂಪಾಂತರಿತ ವೈರಸ್ ಕಂಡು ಬಂದಿಲ್ಲ: ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟನೆ

  ಶಿವಮೊಗ್ಗ :  ದುಬೈಯಿಂದ ಶಿವಮೊಗ್ಗ ಆಗಮಿಸಿದ್ದ ವ್ಯಕ್ತಿಗೆ ಕೊರೋನಾ ನೆಗಟಿವ್ ವರದಿ ಬಂದಿದ್ದು, ಜಿಲ್ಲೆಯಲ್ಲಿ ದಕ್ಷಿಣ ಆಫ್ರಿಕಾ ಮೂಲಕ ರೂಪಾಂತರಿತ ಕೊರೋನಾ ವೈರಸ್ ಪತ್ತೆಯಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸ್ಪಷ್ಟನೆ ನೀಡಿದರು. ಇಂದು  ಮೆಗ್ಗಾನ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ದುಬೈಯಿಂದ ಆಗಮಿಸಿದ್ದ ವ್ಯಕ್ತಿಯ ಕೊರೋನಾ ವರದಿ ನೆಗಟಿವ್ ಬಂದಿದ್ದು, ಪ್ರಾಥಮಿಕ ಸಂಪರ್ಕ ಹೊಂದಿರುವ ಎಲ್ಲರಿಗೂ ಸಹ ನೆಗಟಿವ್ ಬಂದಿದೆ. ಈ ವ್ಯಕ್ತಿಯೊಂದಿಗೆ ಎರಡನೇ ಹಂತದ ಸಂಪರ್ಕ ಹೊಂದಿದ್ದ 39 ಮಂದಿಯ ತಪಾಸಣೆ ನಡೆಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಇದೆ. ಈ ...

Read More »