Breaking News

ಯುವತಿಗೆ ಸಾಗರದಲ್ಲಿ 2 ಗಂಟೆ ಆಪರೇಷನ್, ವೈದ್ಯರಿಗೆ ಕಾದಿತ್ತು ಶಾಕ್

ಸಾಗರ : ಹೊಟ್ಟೆನೋವಿನಿಂದ ಬಳಲುತ್ತಿದ್ದ ಯುವತಿಗೆ ಸತತ ಎರಡು ಗಂಟೆ ಆಪರೇಷನ್‌ ಮಾಡಿ, 8 ಕೆ.ಜಿ. ತೂಕದ ಗಡ್ಡೆಯನ್ನು ಹೊರ ತೆಗೆಯಲಾಗಿದೆ.ಸಾಗರದ ತಾಯಿ ಮತ್ತು ಮಗು ಸರ್ಕಾರಿ ಆಸ್ಪತ್ರೆಯಲ್ಲಿ ಆಪರೇಷನ್‌ ನಡೆಸಲಾಯಿತು. ಸೊರಬ ತಾಲೂಕಿನ 21 ವರ್ಷದ ಯುವತಿಯೊಬ್ಬಳು ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಚಿಕಿತ್ಸೆಗೆ ಬಂದಾಗ ಸ್ಕ್ಯಾನಿಂಗ್‌ ನಡೆಸಲಾಗಿತ್ತು. ಆಗ ಗಡ್ಡೆ ಇರುವುದು ಗೊತ್ತಾಗಿತ್ತು.

ಪ್ರಸೂತಿ ತಜ್ಞೆ ಡಾ.ಪ್ರತಿಮಾ, ಸಿವಿಲ್‌ ಸರ್ಜನ್‌ ಡಾ.ಪ್ರಕಾಶ್‌ ಬೋಸ್ಲೆ, ಸಿಬ್ಬಂದಿಗಳಾದ ರೀಟಾ, ರೋಹಿಣಿ, ಚಂದ್ರು ಸೇರಿದಂತೆ ಹಲವು ಸಿಬ್ಬಂದಿಗಳು ಅಪರೇಷನ್‌ ನಡೆಸಿದರು. ಸತತ ಎರಡು ಗಂಟೆ ಆಪರೇಷನ್‌ ನಡೆಸಿ, ಯುವತಿಯ ಹೊಟ್ಟೆಯಲ್ಲಿ ಬೆಳೆದಿದ್ದ 8 ಕೆ.ಜಿ. ತೂಕದ ಗಡ್ಡೆಯನ್ನು ಹೊರಗೆ ತೆಗೆಯಲಾಗಿದೆ.

ಯುವತಿಯ ಹೊಟ್ಟೆಯಲ್ಲಿ ಬೆಳೆದಿದ್ದ ಗಡ್ಡೆಯನ್ನು ಹೊರಗೆ ತೆಗೆಯದೆ ಹೋಗಿದ್ದರೆ ಕೆಲವೇ ದಿನದಲ್ಲಿ ಅದು ಕ್ಯಾನ್ಸರ್‌ ರೂಪಕ್ಕೆ ಬದಲಾಗುವ ಆತಂಕವಿತ್ತು. ಸ್ವಲ್ಪ ದಿನ ಹಾಗೆ ಬಿಟ್ಟಿದ್ದರೆ ಉಸಿರಾಟದ ಸಮಸ್ಯೆಯು ಉಂಟಾಗುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

*