Breaking News

ಬದುಕು ಕಸಿದುಕೊಂಡ ಬಣ್ಣದ ಹಬ್ಬ

 

ಹಾವೇರಿ: ಹೋಳಿ ಹಬ್ಬದ ಓಕುಳಿ ಆಡಿದ ಇಬ್ಬರು ಬಾಲಕರು ಸ್ನಾನ ಮಾಡಲು ನದಿಗೆ ತೆರಳಿದ್ದರು. ಈ ವೇಳೆ ಈಜಲು ಬಾರದೇ ಬಾಲಕರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಹಾವೇರಿ ತಾಲೂಕಿನ ನಾಗನೂರಿನಲ್ಲಿ ನಡೆದಿದೆ. ಮಹೇಶ್ ದುಂಡಣ್ಣನವರ (13)ವಿರೇಶ್ ಅಕ್ಕಿವಳ್ಳಿ (13) ಮೃತ ದುರ್ದೈವಿಗಳು. ಘಟನಾ ಸ್ಥಳದಲ್ಲಿ  ಮೃತ ಬಾಲಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

*