Breaking News

80 ಅಡಿ ಆಳದ ತುಂಗಾ ಚಾನೆಲ್ನಲ್ಲಿ ಬಿದ್ದ ವ್ಯಕ್ತಿಯ ರಕ್ಷಣೆ

 

ಶಿವಮೊಗ್ಗ : ಸಾಗರ ರಸ್ತೆ ಗಾಡಿಕೊಪ್ಪ ಬಳಿಯಿರುವ ತುಂಗಾ ಚಾನಲ್ಗೆಗೆ ಇಂದು ಬೆಳಗಿನ ಜಾವ ಸಾಗರ ಮೂಲದ 45 ವರ್ಷದ ಸಂತೋಷ ಎಂಬಾತ ಬಿದ್ದಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಜೀವದ ಹಂಗು ತೊರೆದು 80 ಅಡಿಗಳಷ್ಟು ಆಳದ ಚಾನೆಲ್ನಿಂದ ಸಂತೋಷ್ ನನ್ನ ರಕ್ಷಿಸಿದ್ದಾರೆ.

ಸಂತೋಷ್ ಚಾನಲ್ ಗೆ ಬೀಳಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಸದ್ಯ ಸಂತೋಷ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಲೆಗೆ ಮತ್ತು ಕೈಕಾಲುಗಳಿಗೆ ಗಾಯ ಗಳಾಗಿದ್ದು, ಮೆಗ್ಗನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

*