23507 ಮೀನುಗಾರರ ಸಾಲಮನ್ನಾವನ್ನು ರಾಜ್ಯ ಸರ್ಕಾರ ಮಾಡಿದೆ. ರಾಜ್ಯದ ಮೀನುಗಾರರು ವಾಣಿಜ್ಯ ಬ್ಯಾಂಕ್ ಹಾಗೂ ಪ್ರಾದೇಶಿಕ ಬ್ಯಾಂಕುಗಳಿಂದ ಪಡೆದ 50,000 ರೂ ವರೆಗಿನ 60.584 ಕೋಟಿ ರೂ ಸಾಲಮನ್ನಾ ಮಾಡಲಾಗಿದೆ ಎಂದು ಬಿ.ವೈ. ರಾಘವೇಂದ್ರ ಇಂದು ತಮ್ಮ ಟ್ವಿಟರ್ ನಲ್ಲಿ ಟ್ವಿಟ್ ಮಾಡಿದ್ದಾರೆ.
Read More »ರಾಜ್ಯ
ಮುಂಬೈ ಮಳೆಗೆ ಸಿಕ್ಕಿಬಿದ್ದ ಪೇಜಾವರ ಶ್ರೀಗಳಿಗೆ ಮುಸ್ಲಿಂ ಟ್ಯಾಕ್ಸಿ ಚಾಲಕ ಸಹಾಯ!
ಮುಂಬಯಿ ಮಹಾನಗರಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಈ ಸಂದರ್ಭ ಪೇಜಾವರ ಮಠಾಧೀಶ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಅವರು ನಗರದ ಬೊರಿವಲಿ ರೈಲು ನಿಲ್ದಾಣದಲ್ಲಿ ಕೆಲಹೊತ್ತು ಬಾಕಿಯಾಗಿದ್ದರು. ಕೊನೆಗೆ ಕನ್ನಡಿಗ ಮುಸ್ಲಿಂ ಟ್ಯಾಕ್ಸಿ ಚಾಲಕನೊಬ್ಬ ಸುರಕ್ಷಿತವಾಗಿ ಡೊಂಬಿವಿಲಿಗೆ ತಲುಪಿಸಿದ ಘಟನೆ ನಡೆದಿದೆ. ಪೇಜಾವರ ಶ್ರೀಗಳು ಬರೋಡಾದಿಂದ ಡೊಂಬಿವಿಲಿಗೆ ರೈಲಿನಲ್ಲಿ ಪ್ರಯಾಣಿಸುತಿದ್ದರು. ಅವರಿಗೆ ಮಧ್ಯಾಹ್ನ 3ಕ್ಕೆ ಡೊಂಬಿವಿಲಿಯ ಕಾರ್ಯಕ್ರಮವೊಂದರಲ್ಲಿ »ಗವಹಿಸಬೇಕಾಗಿತ್ತು. ಆದರೆ ಭಾರೀ ಮಳೆಯಿಂದಾಗಿ ಸುಮಾರು 50 ಕಿ.ಮೀ.ನಷ್ಟುಹಿಂದೆ ಬೊರಿವಿಲಿಯಲ್ಲಿ ರೈಲು ಮುಂದಕ್ಕೆ ಹೋಗಲಾಗದೇ ನಿಂತುಬಿಟ್ಟಿತು. ಆಗ 8 ಗಂಟೆಯಾಗಿತ್ತು. ಕೊನೆಗೆ ಟ್ಯಾಕ್ಸಿಯಲ್ಲಿ ಡೊಂಬಿವಿಲಿಗೆ ಹೊರಡಲು ...
Read More »ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಪೂರೈಕೆ ಮಾಡಲು ಮಲೆನಾಡಿಗರ ತೀವ್ರ ವಿರೋಧ.
ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಪೂರೈಕೆ ಮಾಡಲು ಮಲೆನಾಡಿಗರ ತೀವ್ರ ವಿರೋಧ. ಶಿವಮೊಗ್ಗ: ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಾಗಲು ಮಲೆನಾಡಿಗರು ಕಾರಣವಲ್ಲ. ಹೀಗಿರುವಾಗ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ಏಕೆ ನೀರು ಪೂರೈಕೆ ಮಾಡಬೇಕು. ಈಗಾಗಲೇ ಅಣೆಕಟ್ಟೆಗಳ ನಿರ್ಮಾಣಕ್ಕಾಗಿ ಲಕ್ಷಾಂತರ ಎಕರೆ ಅರಣ್ಯವನ್ನು ನಾಶ ಮಾಡಿ ಮಲೆನಾಡನ್ನೇ ಹಾಳು ಮಾಡಲಾಗಿದೆ. ಇದೀಗ ಬೆಂಗಳೂರಿಗೆ ಲಿಂಗನಮಕ್ಕಿಯಿಂದ ನೀರು ಒದಗಿಸಲು ಮತ್ತೆ ಅರಣ್ಯ ನಾಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಲೆನಾಡಿಗರು ಪಟ್ಟು ಹಿಡಿದಿದ್ದಾರೆ. ಜೊತೆಗೆ ಲಿಂಗನಮಕ್ಕಿ ನೀರನ್ನು ಮಲೆನಾಡಿನ ಜನರಿಗೇ ನೀಡಿ ಎಂದು ಹೋರಾಟದ ಹಾದಿಯನ್ನೂ ಹಿಡಿದಿದ್ದಾರೆ. ರಾಜ್ಯದಲ್ಲಿ ಯಾವುದೇ ...
Read More »ಜಲಕ್ಷಾಮದ ಆತಂಕ ಇನ್ನಿಲ್ಲ ತುಂಬಿ ಹರಿಯುತ್ತಿದೆ ನೇತ್ರಾವತಿ ನದಿ..
ಜಲಕ್ಷಾಮದ ಆತಂಕ ಇನ್ನಿಲ್ಲ ತುಂಬಿ ಹರಿಯುತ್ತಿದೆ ನೇತ್ರಾವತಿ ನದಿ.. ಕಳೆದ ಎರಡು ಮೂರು ದಿನಗಳಿಂದ ರಾಜ್ಯದ ಕರಾವಳಿ, ದಕ್ಷಿಣ ಕನ್ನಡ, ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಬಿರುಗಾಳಿ ಸಹಿತ ಬಾರಿ ಮಳೆಗೆ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಧರ್ಮಸ್ಥಳದಲ್ಲಿನ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದಿದೆ.. ಇದರಿಂದಾಗಿ ಧರ್ಮಸ್ಥಳದಲ್ಲಿನ ಜಲಕ್ಷಾಮದ ಆತಂಕ ನಿವಾರಣೆಯಾಗಿದೆ. ಭಕ್ತರು ಸಂತಸದಿಂದ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ..
Read More »ಕಾರ್ನಾಡ್ ನಿಧನ: ಮೂರು ದಿನ ಶೋಕ, 1 ದಿನ ರಜೆ
ಇಂದು ನಿಧನರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ಗಿರೀಶ್ ಕಾರ್ನಾಡ್ ಅವರ ಗೌರವಾರ್ಥ ಸರ್ಕಾರಿ ಶಾಲೆ, ಕಾಲೇಜು ಕಚೇರಿಗಳಿಗೆ ಒಂದು ದಿನ ರಜೆ ಘೋಷಿಸಲಾಗಿದೆ ಹಾಗೂ ಮೂರು ದಿನಗಳ ಕಾಲ ರಾಜ್ಯಾದ್ಯಂತ ಶೋಕಾಚರಣೆ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಹಾಗೂ ಮೃತರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು. ಸಾಹಿತಿ ಗಿರೀಶ್ ಕಾರ್ನಾಡ್ ಅವರ ಅಂತ್ಯ ಸಂಸ್ಕಾರ ಬಯ್ಯಪ್ಪನಹಳ್ಳಿಯಲ್ಲಿರುವ ಕಲ್ಪಲಿ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ. ಆದರೆ ಇನ್ನೂ ಸಮಯ ನಿಗದಿಯಾಗಿಲ್ಲ… ಗಿರೀಶ್ ಕಾರ್ನಾಡ್ ಅವರ ಅಂತಿಮ ಸಂಸ್ಕಾರಕ್ಕೆ ಸಂಬಂಧಪಟ್ಟಂತೆ ...
Read More »ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಇನ್ನಿಲ್ಲ
ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ( 81) ಬಹು ಅಂಗಾಂಗ ವೈಫಲ್ಯದಿಂದ ಬೆಂಗಳೂರಿನ ಲ್ಯಾವೆಲಿ ರಸ್ತೆಯಲ್ಲಿರುವ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸ್ಯಾಂಡಲ್ವುಡ್ ಹಾಲಿವುಡ್ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ . ಗಿರೀಶ್ ಕಾರ್ನಾಡ್ ಅವರು 1938ರ ಮೇ 19ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಂದೆ ಡಾ.ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ್ರಗತಿಶೀಲ ಮನೋಭಾವದ ಡಾ.ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದುಕೊ೦ಡರು.
Read More »ಮಹಿಳೆಯರ ಸುರಕ್ಷತೆಗೆ ಪಿಂಕ್ ಸಾರಥಿ ಆರಂಭ
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ವಿಧಾನಸೌಧದ ಮುಂಭಾಗದಲ್ಲಿ ಬಿಎಂಟಿಸಿಯ 25 ಪಿಂಕ್ ಸಾರಥಿ ವಾಹನಗಳಿಗೆ ಚಾಲನೆ ನೀಡಿದರು. ಮಹಿಳೆಯರ ಸುರಕ್ಷತೆಗಾಗಿ ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆಯಡಿ ಪಿಂಕ್ ಸಾರಥಿ ವಾಹನಗಳನ್ನ ನಗರದಲ್ಲಿ ಪ್ರಾರಂಭಿಸಲಾಗಿದೆ. ಇವು ಬಿಎಂಟಿಸಿ ಬಸ್ ಸಂಚಾರ ಮಾಡುವ ಮಾರ್ಗಗಳಲ್ಲಿ ಗಸ್ತು ತಿರುಗಲಿದ್ದಾವೆ. ವಿಶೇಷವಾಗಿ ರಾತ್ರಿ ವೇಳೆ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಗೆ ಈ ವಾಹನಗಳು ಹೆಚ್ಚಿನ ಒತ್ತು ನೀಡಲಿದೆ. ಇನ್ನೂ ಪಿಂಕ್ ಸಾರಥಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಡಿಸಿ ತಮ್ಮಣ್ಣ, ಬಿಎಂಟಿಸಿ ಅಧ್ಯಕ್ಷ ಹ್ಯಾರಿಸ್, ಬಿಎಂಟಿಸಿ ಎಂಡಿ ಎನ್.ವಿ.ಪ್ರಸಾದ್, ಭದ್ರತೆ ಮತ್ತು ...
Read More »ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರದ ಡಬಲ್ ಧಮಾಕ; ಜಯಂತಿ ರಜೆಗೆ ಅಡ್ಡಿಯಿಲ್ಲ
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ನಾಲ್ಕನೆಯ ಶನಿವಾರ ರಜೆ ನೀಡುವ ಜತೆಯಲ್ಲಿ ವಿವಿಧ ಜಯಂತಿ ಆಚರಣೆ ವೇಳೆ ನೀಡಲಾಗುತ್ತಿದ್ದ ರಜೆಗೆ ಕತ್ತರಿ ಹಾಕಲು ಸರ್ಕಾರ ಮುಂದಾಗಿತ್ತು. ಆದರೆ, ಅದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಸರ್ಕಾರಿ ಕಚೇರಿಗಳಿಗೆ ಪ್ರತಿ ತಿಂಗಳ ನಾಲ್ಕನೆ ಶನಿವಾರ ರಜೆ ನೀಡುವುದಾಗಿ ಸರ್ಕಾರ ಪ್ರಕಟಿಸಿತ್ತು. ಅದರ ಜತೆಗೆ ಕೆಲವು ಜಯಂತಿಗಳಿಗೆ ನೀಡುತ್ತಿದ್ದ ರಜೆಯನ್ನು ರದ್ದುಗೊಳಿಸಲಾಗಿತ್ತು. ಆರನೇ ವೇತನ ಆಯೋಗ ತನ್ನ 2ನೇ ಅವಧಿಯಲ್ಲಿ ನಾಲ್ಕನೆ ಶನಿವಾರದ ರಜೆಗೆ ಕುರಿತು ಶಿಫಾರಸು ...
Read More »ಬಿ ವೈ ಅರ್ 223360 ಮತಗಳ ಅಂತರದಿಂದ ಭರ್ಜರಿ ಗೆಲುವು
ಶಿವಮೊಗ್ಗ ಲೋಕಸಭಾ ನೂತನ ಸಂಸದರಾಗಿ ಬಿ.ವೈ.ರಾಘವೇಂದ್ರ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ 2021 ಬೂತ್ ಗಳ ಮತಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿ ಬಿ. ವೈ. ರಾಘವೇಂದ್ರ 223360 ಮತಗಳ ಅಂತರದಿಂದ ಜಯಗಳಿದ್ದಾರೆ. ಒಟ್ಟು ಬಿ.ವೈ.ಅರ್ 729872 ಮತಗಳನ್ನು ಪಡೆದಿದ್ದಾರೆ. ಜೆ.ಡಿ.ಎಸ್.ಅಭ್ಯರ್ಥಿ ಮಧುಬಂಗಾರಪ್ಪ ನವರಿಗೆ 506517 ಮತಗಳನ್ನು ಪಡೆದಿದ್ದಾರೆ. ಅದರೆ ಯಾವುದೇ ಸುತ್ತಿನಲ್ಲೂ ಮಧುಬಂಗಾರಪ್ಪ ನವರಿಗೆ ಲೀಡ್ ಸಿಗಲಿಲ್ಲ.. ಮತ್ತೊಮ್ಮೆ ಶಿವಮೊಗ್ಗ ಜಿಲ್ಲೆ ಬಿಜೆಪಿಯ ಭದ್ರ ಕೋಟೆ ಎಂದು ನಿರುಪಿಸುದೆ…
Read More »ಶಿವಮೊಗ್ಗ ಲೋಕಸಭಾ ನೂತನ ಸಂಸದರಾಗಿ ಬಿ.ವೈ.ರಾಘವೇಂದ್ರ
ಶಿವಮೊಗ್ಗ ಲೋಕಸಭಾ ನೂತನ ಸಂಸದರಾಗಿ ಬಿ.ವೈ.ರಾಘವೇಂದ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ 2020 ಬೂತ್ ಗಳ ಮತಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿ ಬಿ. ವೈ. ರಾಘವೇಂದ್ರ 222706 ಮತಗಳ ಅಂತರದಿಂದ ಜಯಗಳಿದ್ದಾರೆ. ಒಟ್ಟು ಬಿ.ವೈ.ಅರ್ 729051 ಮತಗಳನ್ನು ಪಡೆದಿದ್ದಾರೆ. ಜೆ.ಡಿ.ಎಸ್.ಅಭ್ಯರ್ಥಿ ಮಧುಬಂಗಾರಪ್ಪ ನವರಿಗೆ 506345 ಮತಗಳನ್ನು ಪಡೆದಿದ್ದಾರೆ. ಅದರೆ ಯಾವುದೇ ಸುತ್ತಿನಲ್ಲೂ ಮಧುಬಂಗಾರಪ್ಪ ನವರಿಗೆ ಲೀಡ್ ಸಿಗಲಿಲ್ಲ.. ಮತ್ತೊಮ್ಮೆ ಶಿವಮೊಗ್ಗ ಜಿಲ್ಲೆ ಬಿಜೆಪಿಯ ಭದ್ರ ಕೋಟೆ ಎಂದು ನಿರುಪಿಸುದೆ…ಇನ್ನು ಅಂಚೆ ಮತಗಳ ಎಣಿಕೆ ಬಾಕಿ ಇದ್ದು ಗೆಲುವಿನ ಅಂತರ ಇನ್ನು ಹೆಚ್ಚಾಗುವ ಸಾದ್ಯತೆ ...
Read More »
Recent Comments