Breaking News

Tag Archives: Mcgn

ಬ್ರಿಟನ್ ನಿಂದ ಶಿವಮೊಗ್ಗಕ್ಕೆ ಬಂದಿದ್ದಾರೆ 23 ಜನರು

ಬ್ರಿಟನ್ ನಿಂದ ಶಿವಮೊಗ್ಗಕ್ಕೆ ಬಂದಿದ್ದಾರೆ 23 ಜನರ ಶಿವಮೊಗ್ಗ : ಬ್ರಿಟನ್ ನಿಂದ ಶಿವಮೊಗ್ಗಕ್ಕೆ ಇದುವರೆಗೆ 23 ಜನರು ಆಗಮಿಸಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬ್ರಿಟನ್ ನಿಂದ ಬಂದ 23 ಜನರ ಗಂಟಲ ದ್ರವ ಮಾದರಿ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿದೆ. ನಾಳೆ ಸಂಜೆಯ ಒಳಗಾಗಿ ಇವರ ವರದಿ ಬರುತ್ತದೆ. ಬಳಿಕ ಬ್ರಿಟನ್ ನಿಂದ ಬಂದವರಿಗೆ ಕರೋನಾ ಇದೆಯೇ ಇಲ್ಲವೇ ಎಂಬುದು ತಿಳಿಯುತ್ತದೆ ಎಂದು ಹೇಳಿದರು. ...

Read More »

ಶಿವಮೊಗ್ಗ ಮೆಡಿಕಲ್ ಕಾಲೇಜು ಸೌಲಭ್ಯಗಳನ್ನು ಉತ್ತಮಪಡಿಸಲು ಕ್ರಮ: ಸಂಸದ ಬಿ.ವೈ.ರಾಘವೇಂದ್ರ

  ಶಿವಮೊಗ್ಗ : ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬುವುದು ಸೇರಿದಂತೆ ಕಾಲೇಜಿನಲ್ಲಿ ಸೌಲಭ್ಯಗಳನ್ನು ಉತ್ತಮಪಡಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ತಿಳಿಸಿದರು. ಇಂದು ಮೆಡಿಕಲ್ ಕಾಲೇಜಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಮೆಡಿಕಲ್ ಕಾಲೇಜಿನಲ್ಲಿ ಖಾಲಿಯಿರುವ 133 ಸಿ ದರ್ಜೆ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ರೋಸ್ಟರ್ ನಿಯಮಾವಳಿಯನ್ನು ನೇಮಕಾತಿಯಲ್ಲಿ ಪಾಲಿಸಬೇಕು. ಉಳಿದ ಖಾಯಂ ಹುದ್ದೆಗಳ ನೇಮಕಾತಿಗಾಗಿ ಆದಷ್ಟು ಬೇಗನೆ ಇಲಾಖೆಯ ನೇಮಕಾತಿ ಮತ್ತು ವೃಂದ ನಿಯಮಾವಳಿಯನ್ನು ರಚಿಸುವಂತೆ ...

Read More »