Breaking News

ಬ್ರಿಟನ್ ನಿಂದ ಶಿವಮೊಗ್ಗಕ್ಕೆ ಬಂದಿದ್ದಾರೆ 23 ಜನರು

ಬ್ರಿಟನ್ ನಿಂದ ಶಿವಮೊಗ್ಗಕ್ಕೆ ಬಂದಿದ್ದಾರೆ 23 ಜನರ

ಶಿವಮೊಗ್ಗ : ಬ್ರಿಟನ್ ನಿಂದ ಶಿವಮೊಗ್ಗಕ್ಕೆ ಇದುವರೆಗೆ 23 ಜನರು ಆಗಮಿಸಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬ್ರಿಟನ್ ನಿಂದ ಬಂದ 23 ಜನರ ಗಂಟಲ ದ್ರವ ಮಾದರಿ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿದೆ. ನಾಳೆ ಸಂಜೆಯ ಒಳಗಾಗಿ ಇವರ ವರದಿ ಬರುತ್ತದೆ. ಬಳಿಕ ಬ್ರಿಟನ್ ನಿಂದ ಬಂದವರಿಗೆ ಕರೋನಾ ಇದೆಯೇ ಇಲ್ಲವೇ ಎಂಬುದು ತಿಳಿಯುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಬ್ರಿಟನ್ ನಿಂದ ಬಂದವರಿಗೆ ಕರೋನಾ ಇದೆಯೇ ಇಲ್ಲವೇ ಎಂಬುದು ನಾನು ಹೇಳಿದ ಬಳಿಕವಷ್ಟೇ ಅಧಿಕೃತ. ನಾಳೆ ಎಲ್ಲರ ಪರೀಕ್ಷೆಯ ವರದಿ ಬರಲಿದ್ದು, ಬಳಿಕ ಈ ಬಗ್ಗೆ ಪ್ರತಿಕ್ರಿಯಿಸುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *

*