Breaking News

ಶಿವಮೊಗ್ಗ ಮೆಡಿಕಲ್ ಕಾಲೇಜು ಸೌಲಭ್ಯಗಳನ್ನು ಉತ್ತಮಪಡಿಸಲು ಕ್ರಮ: ಸಂಸದ ಬಿ.ವೈ.ರಾಘವೇಂದ್ರ

 

ಶಿವಮೊಗ್ಗ : ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬುವುದು ಸೇರಿದಂತೆ ಕಾಲೇಜಿನಲ್ಲಿ ಸೌಲಭ್ಯಗಳನ್ನು ಉತ್ತಮಪಡಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ತಿಳಿಸಿದರು. ಇಂದು ಮೆಡಿಕಲ್ ಕಾಲೇಜಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.

ಮೆಡಿಕಲ್ ಕಾಲೇಜಿನಲ್ಲಿ ಖಾಲಿಯಿರುವ 133 ಸಿ ದರ್ಜೆ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ರೋಸ್ಟರ್ ನಿಯಮಾವಳಿಯನ್ನು ನೇಮಕಾತಿಯಲ್ಲಿ ಪಾಲಿಸಬೇಕು. ಉಳಿದ ಖಾಯಂ ಹುದ್ದೆಗಳ ನೇಮಕಾತಿಗಾಗಿ ಆದಷ್ಟು ಬೇಗನೆ ಇಲಾಖೆಯ ನೇಮಕಾತಿ ಮತ್ತು ವೃಂದ ನಿಯಮಾವಳಿಯನ್ನು ರಚಿಸುವಂತೆ ಅವರು ಸಭೆಯಲ್ಲಿ ಉಪಸ್ಥಿತರಿದ್ದ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಪಿ.ಜಿ.ಗಿರೀಶ್ ಅವರು ಸೂಚನೆ ನೀಡಿದರು.

ರೇಡಿಯೋಲಜಿ ವಿಭಾಗದ ಎಲ್ಲಾ ಉಪಕರಣಗಳು ಶಿಮ್ಸ್‍ನಲ್ಲಿ ಲಭ್ಯವಿದ್ದು, ತಜ್ಞ ವೈದ್ಯರ ನೇಮಕಾತಿ ಆಗಬೇಕಿದೆ. ಅದುವರೆಗೆ ಲಭ್ಯವಿರುವ ಬಳಕೆದಾರರ ನಿಧಿಯನ್ನು ಉಪಯೋಗಿಸಿಕೊಂಡು ತಜ್ಞ ವೈದ್ಯರ ಸೇವೆಯನ್ನು ಪಡೆಯಲು ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಬೇಕು. ಬಳಕೆದಾರರ ನಿಧಿ ಸಂಗ್ರಹವನ್ನು ಹೆಚ್ಚಿಸಲು ಕ್ರಮ ಕೈಗೊಂಡು, ಅದರ ಮೂಲಕ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

*