ಶಿವಮೊಗ್ಗ:
ಆಯತಪ್ಪಿ ಬಾವಿಗೆ ಬಿದ್ದು ನರ್ಸಿಂಗ್ ವಿದ್ಯಾರ್ಥಿನಿಯೋರ್ವಳು ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದ ಅಂಜಲಿ(19) ಮೃತ ದುರ್ದೈವಿ. ದನಗಳಿಗೆ ನೀರು ಕುಡಿಸಲು ಎಂದಿನಂತೆಯೇ ಬೆಳಿಗ್ಗೆ ಬಾವಿಗೆ ಹೋಗಿದ್ದ ಅಂಜಲಿ, ನೀರು ಸೇದುವಾಗ ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾಳೆ. ನೀರು ತರಲು ಹೋಗಿದ್ದ ಅಂಜಲಿ ಬಾರದಿದ್ದನ್ನು ಗಮನಿಸಿ, ಮನೆಯವರು ಬಾವಿಯ ಬಳಿಗೆ ಬಂದು ಪರಿಶೀಲಿಸಿದಾಗ ಅಂಜಲಿ ಬಾವಿಗೆ ಬಿದ್ದಿರುವುದು ಗಮನಕ್ಕೆ ಬಂದಿದೆ. ತ್ಯಾಗರ್ತಿ ಗ್ರಾಮಕ್ಕೆ ಸಾಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಈ ಸಂಬಂಧ ಪ್ರಕರಣ ಸಹ ದಾಖಲಾಗಿದೆ.
C News TV Kannada News Online in cnewstv