Breaking News

ಭಗವಂತ್ ಮಾನ್‌ರವರು ಭ್ರಷ್ಟಾಚಾರದ ವಿರುದ್ಧ ತೆಗೆದುಕೊಂಡ ನಿರ್ಧಾರ ಇಡೀ ರಾಷ್ಟ್ರ ರಾಜಕಾರಣದಲ್ಲಿ ಹೊಸ ಮಾದರಿಯಾಗಿದೆ – ಎಎಪಿ.

Cnewstv.in / 27.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಭಗವಂತ್ ಮಾನ್‌ರವರು ಭ್ರಷ್ಟಾಚಾರದ ವಿರುದ್ಧ ತೆಗೆದುಕೊಂಡ ನಿರ್ಧಾರ ಇಡೀ ರಾಷ್ಟ್ರ ರಾಜಕಾರಣದಲ್ಲಿ ಹೊಸ ಮಾದರಿಯಾಗಿದೆ – ಎಎಪಿ.

ಶಿವಮೊಗ್ಗ : ಪಂಜಾಬ್ ಅಮ್ ಆದ್ಮ ಪಾರ್ಟಿಯ ಸರ್ಕಾರದ ಆರೋಗ್ಯ ಸಚಿವರಾಗಿರುವ ವಿಜಯ್ ಸಿಂಗಾರವರ ಮೇಲೆ ಖರೀದಿ ಮತ್ತು ಟೆಂಡರ್‌ಗಳ ಹಗರಣದ ಕಾರಣ ಅವರನ್ನು ಪಂಜಾಬ್ ಸರ್ಕಾರ ಸಚಿವ ಸ್ಥಾನದಿಂದ ಮಂಗಳವಾರ ವಜಾ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಅವರನ್ನು ಪೋಲೀಸ್ ಬಂಧನಕ್ಕೆ ಒಳಪಡಿಸಲಾಗಿದೆ.

ಫೆಬ್ರುವರಿ 10ರಂದು ಸರ್ಕಾರ ರಚಿಸಿದ ಸಿ.ಎಂ. ಭಗವಂತ್ ಮಾನ್‌ರವರು ಭ್ರಷ್ಟಾಚಾರದ ವಿರುದ್ಧ ತೆಗೆದುಕೊಂಡ ನಿರ್ಧಾರ ಇಡೀ ರಾಷ್ಟ್ರ ರಾಜ್ಯಕಾರಣದಲ್ಲಿ ಹೊಸ ರಾಜಕಾರಣಕ್ಕೆ ಮಾದರಿಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಆಮ್ ಆದ ಪಾರ್ಟಿಯ ರಾಜಕೀಯ ನಾಯಕರುಗಳಿಗೆ ಎಚ್ಚರಿಕೆಯ ಗಂಟೆಯಾಗಿರುತ್ತದೆ. ಭಗವಂತ ಮಾನ್‌ರವರ ಈ ದಿಟ್ಟ ನಿರ್ಧಾರ ಇಡೀ ರಾಷ್ಟ್ರದಲ್ಲಿ ಶ್ಲಾಘನೀಯವಾಗಿದೆ. ಈ ಕ್ರಮವನ್ನು ಆಮ್ ಆದ್ಮ ಪಾರ್ಟಿಯ ಸ್ಥಾಪಕರು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್‌ರವರು ಭಗವಂತ್ ಮಾನ್‌ರವರು ತೆಗೆದುಕೊಂಡ ನಿರ್ಧಾರ ಭ್ರಷ್ಟಾಚಾರದ ವಿರುದ್ಧ ತೆಗೆದುಕೊಂಡಿರುವ ಕ್ರಮ ಮತ್ತು ಭ್ರಷ್ಟಾಚಾರದ ವಿರುದ್ಧ ಪಡೆದಿರುವ ಜಯವೆಂದು ಮತ್ತು ಆಮ್ ಆದ್ವಿ ಪಕ್ಷದ ರಾಜಕಾರಣಿಗಳ ನೈತಿಕ ಬಲ ಹೆಚ್ಚಿಸಿದೆ ಎಂದು ಭಗವೆಂಶ್‌ ಮಾನ್‌ರವರನ್ನು ಹೊಗಳಿ ಕೊಂಡಾಡಿದ್ದಾರೆ.
ಬ್ರಷ್ಟಾಚಾರ ದೇಶದ್ರೋಹದ ಕೃತ್ಯವೆಂದು ಕಟುವಾಗಿ ಟೀಕಿಸಿದ್ದಾರೆ.

ಕ್ರೇಜಿವಾಲ್‌ರವರ ನಂತರ ಭಗವಂತ್ ಮಾನ್ ದೇಶದ ಇತಿಹಾಸದಲ್ಲಿ 2ನೇ ಮುಖ್ಯಮಂತ್ರಿಯಾಗಿದ್ದಾರೆ.
ಬ್ರಷ್ಟಾಚಾರ ಮಾಡಿದ ಈ ಪ್ರಕರಣ ಟಿ.ವಿ, ಮತ್ತು ಪತ್ರಿಕಾ ಮಾಧ್ಯಮಕ್ಕೆ ತಿಳಿದಿರಲಿಲ್ಲ. ಪಕ್ಷದ ವರ್ಚಸ್ಸಿಗೆ ಧಕ್ಕೆ ಬಾರದ ರೀತಿಯಲ್ಲಿ ಯಾರಿಗೂ ತಿಳಿಸದೆ ಪ್ರಕರಣವನ್ನು ಮುಚ್ಚಿ ಹಾಕಬಹುದಿತ್ತು. ಹಾಗೇನಾದರೂ ಮಾಡಿದ್ದರೆ ಅಮ್ ಆದ್ಮಿ ಪಕ್ಷದ ಮೇಲೆ ನಂಬಿಕೆ ಇಟ್ಟಿರುವ ದೇಶದ ಕೋಟ್ಯಾಂತರ ಜನತೆಗೆ ದ್ರೋಹ ಬಗೆದಂತೆ ಆಗುತ್ತಿತ್ತು. ಹೀಗಾಗಿ ನಾನು ಆ ಬ್ರಷ್ಟ ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇನೆ
ಎಂದು ಪಂಜಾಬ್‌ ಮುಖ್ಯಮಂತ್ರಿ ವಿವರಿಸಿದರು. ಈ ಕ್ರಮ ಮಾದರಿಯ ರಾಜಕಾರಣಕ್ಕೆ ಸಾಕ್ಷಿಯಾಗಿರುತ್ತದೆ ಎಂದರು.

ಎಎಪಿ‌ ಕಾರ್ಯಕರ್ತರ ಮತ್ತು ಮುಖಂಡರುಗಳ ಸಮಾವೇಶ.

ದಿನಾಂಕ: 29-05-2022ರಂದು ಭಾನುವಾರ ಬೆಳಗ್ಗೆ 11-00 ಗಂಟೆಗೆ ಸೇಂಟ್ ಥಾಮಸ್ ಹಾಲ್ ಮಿಷನ್ ಕಾಂಪೌಂಡ್ ಶಿವಮೊಗ್ಗದಲ್ಲಿ ಮೂರು ಜಿಲ್ಲಾ ಮಟ್ಟದ ವಲಯವಾರು ಶಿವಮೊಗ್ಗ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಆಮ್ ಆದ್ವಿ ಪಾರ್ಟಿಯ ಕಾರ್ಯಕರ್ತರ ಮತ್ತು ಮುಖಂಡರುಗಳ ಸಮಾವೇಶ ನಡೆಯಲಿದೆ. ಎಎಪಿ ಪಾರ್ಟಿಯ ವೀಕ್ಷಕರುಗಳಾಗಿ ದೆಹಲಿಯ ಶ್ರೀಯುತ ಪುನಿತ್ ಸಿಂಗ್ ಹಾಗೂ ವಕೀಲರಾಗಿರುವ ಶ್ರೀಯುತ ಕೆ.ದಿವಾಕರ್ ಹಾಗೂ ರಾಜ್ಯ ನಾಯಕರಾದ ಶ್ರೀಯುತ. ಗೋಪಾಲ್ ರವರು ಆಗಮಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಗ್ರಾಮ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಮುಂಬರುವ ವಿಧಾನಸಭೆ ಚುನಾವಣೆಗೆ ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿ, ದಹಲಿ ಮತ್ತು ಪಂಜಾಬ್ ಮಾದರಿಯ ಸರ್ಕಾರದ ಜನಪರ ಯೋಜನೆಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಯಥಾವತ್ತಾಗಿ ರಾಜ್ಯದ ಎಲ್ಲಾ
ಗ್ರಾಮದ ಮನೆ ಬಾಗಿಲಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನಕ್ಕೆ ಚಾಲನೆ ನೀಡಲಾಗುವುದು ಎಂದರು.

ಇದನ್ನು ಒದಿ : https://cnewstv.in/?p=9955

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*