Breaking News

ರಾಜ್ಯ ಸರ್ಕಾರದ ಸದನ ಸಮಿತಿಯಿಂದ ಬೇಡಜಂಗಮ ಸಮಾಜಕ್ಕೆ ಅವಮಾನ ತೀವ್ರ ಖಂಡನೀಯ.

Cnewstv.in / 28.04.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ರಾಜ್ಯ ಸರ್ಕಾರದ ಸದನ ಸಮಿತಿಯಿಂದ ಬೇಡಜಂಗಮ ಸಮಾಜಕ್ಕೆ ಅವಮಾನ ತೀವ್ರ ಖಂಡನೀಯ.

ಶಿವಮೊಗ್ಗ : ಕರ್ನಾಟಕ ರಾಜ್ಯ ಸರ್ಕಾರದ ಸದನ ಸಮಿತಿ ಸಭೆಯಲ್ಲಿ ಬೇಡ ಜಂಗಮ ಒಕ್ಕೂಟದ ರಾಜ್ಯಾಧ್ಯಕ್ಷರು ಖ್ಯಾತ ನ್ಯಾಯವಾದಿಗಳಾದ ಬಿ ಡಿ ಹಿರೇಮಠ ರವರು
ಬೇಡಜಂಗಮ ಸಮಾಜಕ್ಕೆ ಕೇಂದ್ರ ಸರ್ಕಾರದ ಅಧಿನಿಯಮ ಅಧಿಕಾರ ವ್ಯಾಪ್ತಿಗೆ ಒಳಪಡುವ ಜಂಗಮ (ಅನುಸೂಚಿತ) ಜಾತಿಗೆ ಕಾನೂನುಬದ್ಧವಾಗಿ ಜಾತಿ ಪ್ರಮಾಣ ಪತ್ರ, ಸಂವಿಧಾನ ಹಕ್ಕು ದೊರಕಿಸಿಕೊಡುವ ನಿಗಮ ಸ್ಥಾಪಿಸುವ
ಮನವಿಯನ್ನು ರಾಜ್ಯ ಸರ್ಕಾರಕ್ಕೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ
ಸಂಘಟನೆಗಳು ಹಾಗೂ ರಾಜ್ಯ ಸಮಿತಿಯು ಸಲ್ಲಿಸಿದ ಈ ಮನವಿ ಕುರಿತು ಮಾಹಿತಿ ಕೇಳಲು ಸದನ ಸಮಿತಿಗೆ ಹೋದಾಗ ಸದನ ಸಮಿತಿಯ ಪದಾಧಿಕಾರಿಗಳು ಅಸಭ್ಯವಾಗಿ ವರ್ತಿಸಿ ಮಾಹಿತಿಯನ್ನು ಕೇಳಲು ಹೋದ ಹಿರಿಯ ನ್ಯಾಯವಾದಿಗಳು
ರಾಜ್ಯಾಧ್ಯಕ್ಷರಾದ ಬಿಡಿ ಹಿರೇಮಠ ಅವರನ್ನು ಅವಮಾನಿಸಿರುತ್ತಾರೆ ಇದನ್ನು ಶಿವಮೊಗ್ಗ ಜಿಲ್ಲಾ ಬೇಡ ಜಂಗಮ ಸಮಾಜ ತೀವ್ರವಾಗಿ ಖಂಡಿಸುತ್ತದೆ.

ಈಗಾಗಲೇ ಸಭೆಯಲ್ಲಿ ನಡೆದ ಈ ವಿಚಾರವು ಇಡೀ ಬೇಡಜಂಗಮ ಸಮಾಜಕ್ಕೆ ಅವಮಾನ ಮಾಡಿದ ಹಾಗೆ ಕೂಡಲೇ ರಾಜ್ಯ ಸರ್ಕಾರವು ನಮ್ಮ ಸಮಾಜಕ್ಕೆ ಹಾಗೂ
ನಮ್ಮ ರಾಜ್ಯಾಧ್ಯಕ್ಷರಿಗೆ ಅವಮಾನ ಮಾಡಿದ ಇಂತಹ ದುರಾಳತನ ಸದನ ಸಮಿತಿಯ ಸದಸ್ಯರುಗಳನ್ನು ವಜಾ ಮಾಡಿ, ನಮ್ಮ ಸಮಾಜಕ್ಕೆ ಸಿಗಬೇಕಾದ ಕಾನೂನುಬದ್ಧ
ಪ್ರಮಾಣಪತ್ರವನ್ನು ನೀಡುವಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಬೇಕು. ಇಲ್ಲವಾದಲ್ಲಿ
ರಾಜ್ಯಾದ್ಯಂತ ಬೇಡಜಂಗಮ ಸಮಾಜದಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಬೇಡ ಜಂಗಮ ಸಮಾಜ ಎಚ್ಚರಿಸುತ್ತದೆ.

ಈ ಸಂಬಂಧದಲ್ಲಿ ಜಿಲ್ಲಾ ಬೇಡ ಜಂಗಮ ಸಮಾಜದ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ ಕಾರ್ಯದರ್ಶಿಗಳಾದ ಸೋಮನಾಥ್ ಕೆ.ಅರ್. ಖಜಾಂಚಿ ಉಮೇಶ್ ಹಿರೇಮಠ ಸೇರಿದಂತೆ ಸಮಾಜದ ಸದಸ್ಯರು ಉಪಸ್ಥಿತರಿದ್ದರು

ಇದನ್ನು ಒದಿ‌ : https://cnewstv.in/?p=9598

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*