Breaking News

ಲೋಕ ಕಲ್ಯಾಣಾರ್ಥ ರುದ್ರ ಹೋಮ.

Cnewstv.in / 26.04.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಲೋಕ ಕಲ್ಯಾಣಾರ್ಥ ರುದ್ರ ಹೋಮ.

ಶಿವಮೊಗ್ಗ : ಲೋಕ ಕಲ್ಯಾಣಾರ್ಥ ರವೀಂದ್ರ ನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಶತ ಕೋಟೆ ಓಂ ನಮಃ ಶಿವಾಯ ಜಪ ಯಜ್ಞ ಅಂಗವಾಗಿ ಶ್ರೀ ರುದ್ರ ಹೋಮ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

ಮೇ 30 ಶನಿವಾರದಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಪೂಜೆ, ಗೋಪೂಜೆ, ಗುರುವಂದನಾ, ದೇವನಾಂದಿ, ಶ್ರೀಮಹಾಗಣಪತಿ ಹೋಮ, ರುದ್ರ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮಾಡಲಾಗುತ್ತದೆ.

ಬೆಳಿಗ್ಗೆ 11.30 ಕ್ಕೆ ಧಾರ್ಮಿಕ ಉಪನ್ಯಾಸವನ್ನು ಆದರ್ಶ್ ಗೋಖಲೆಯವರು ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪ್ರಸನ್ನ ಗಣಪತಿ ದೇವಸ್ಥಾನ ಅರ್ಚಕ ವೃಂದ ಹಾಗೂ ಭಜನಾ ಪರಿಷತ್ ವತಿಯಿಂದ ಕೇಳಿಕೊಳ್ಳಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ವೆ.ಬ್ರ.‌ ಶ್ರೀ ಶಂಕರನಾರಾಯಣ ಭಟ್, ಭಜನಾ ಪರಿಷತ್ ಉಪಾಧ್ಯಕ್ಷರಾದ ಎನ್ ಶ್ರೀಧರ್, ಕಾರ್ಯದರ್ಶಿಗಳಾದ ಶಬರೀಶ್ ಕಣ್ಣನ್ ಉಪಸ್ಥಿತರಿದ್ದರು.‌

ಇದನ್ನು ಒದಿ‌ : https://cnewstv.in/?p=9571

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*