Cnewstv.in / 1.4.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ವಲಸೆ ಹೋದ ಕಾಶ್ಮೀರಿ ಪಂಡಿತರ ಬಗ್ಗೆ ಬಿಜೆಪಿ ಅಪ ಪ್ರಚಾರ ಹರಡುವುದರೊಂದಿಗೆ, ದೇಶಾದ್ಯಂತ ವಿಷಮಕಾರಿ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ – ಶರದ್ ಪವಾರ್.
ನವದೆಹಲಿ : ‘ದಿ ಕಾಶ್ಮೀರ್ ಫೈಲ್ಸ್ ‘ ಸಿನಿಮಾ ಮೂಲಕ ಕಣಿವೆ ಪ್ರದೇಶದಿಂದ ವಲಸೆ ಹೋದ ಕಾಶ್ಮೀರಿ ಪಂಡಿತರ ಬಗ್ಗೆ ಬಿಜೆಪಿ ಅಪ ಪ್ರಚಾರ ಹರಡುವುದರೊಂದಿಗೆ ದೇಶಾದ್ಯಂತ ವಿಷಮಕಾರಿ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಗುರುವಾರ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ನಿಜವಾಗಿಯೂ ಕಾಶ್ಮೀರಿ ಪಂಡಿತರ ಬಗ್ಗೆ ಕಾಳಜಿ ಇದ್ದರೆ, ಅವರಿಗೆ ಪುನರ್ವಸತಿ ಕಲ್ಪಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಬೇಕು. ಮುಸ್ಲಿಂರ ಬಗ್ಗೆ ಅವರಲ್ಲಿ ಆಕ್ರೋಶದ ಭಾವನೆಯನ್ನು ಮೂಡಿಸಬಾರದು ಎಂದರು.
ಕಾಶ್ಮೀರಿ ಪಂಡಿತರು ಕಾಶ್ಮೀರ ತೊರೆದದ್ದು ನಿಜ, ಆದರೆ, ಮುಸ್ಲಿಂರು ಕೂಡಾ ಅದೇ ರೀತಿ ಟಾರ್ಗೆಟ್ ಆಗಿದ್ದಾರೆ. ಕಾಶ್ಮೀರಿ ಪಂಡಿತರು ಮತ್ತು ಮುಸ್ಲಿಮರ ಮೇಲಿನ ದಾಳಿಗೆ ಪಾಕಿಸ್ತಾನ ಮೂಲದ ಉಗ್ರ ಗುಂಪುಗಳು ಕಾರಣ ಎಂದು ಶರದ್ ಪವಾರ್ ತಿಳಿಸಿದರು.
ಇದನ್ನು ಒದಿ : https://cnewstv.in/?p=9215
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv