Cnewstv.in / 11.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮನೆಗಳ್ಳತನ ಮಾಡಿದ ಆರೋಪಿಯ ಬಂಧನ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ನಗದು ವಶ.
ಶಿವಮೊಗ್ಗ : ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಿದ್ದ ಆರೋಪಿಯನ್ನು ಪೇಪರ್ ಟೌನ್ ಪೊಲೀಸರು ಬಂಧಿಸಿದ್ದಾರೆ.
ರಬ್ಬರ್ ಕಾಡು ಗ್ರಾಮದ ವಾಸಿಯೊಬ್ಬರು ತಮ್ಮ ವಾಸದ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ ಮನೆಗೆ ವಾಪಾಸ್ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಹಿಂಭಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಮನೆಯ ಒಳಗಡೆ ಅಲ್ಮೆರಾದಲ್ಲಿ ಮನೆ ಕಟ್ಟುವ ಸಲುವಾಗಿ ತಂದಿಟ್ಟಿದ್ದ 6 ಲಕ್ಷ ನಗದು ಹಣ ಮತ್ತು ಸುಮಾರು 5,66,000/- ರೂ ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೇಪರ್ ಟೌನ್ ಪೊಲೀಸ್ ಠಾಣೆ ಸಿಬ್ಬಂದ್ಧಿಗಳು ಚೇತನ್ ಎಸ್ ಎಂಬುವವರನ್ನು ಬಂಧಿಸಿದ್ದಾರೆ. ಆರೋಪಿತನಿಂದ ಸುಮಾರು ರೂ 5,60,000/- ನಗದು ಹಣ ಹಾಗೂ ರೂ 6,43,000/- ಅಂದಾಜು ಮೌಲ್ಯದ ಒಟ್ಟು 134.44 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.
ಇದನ್ನು ಒದಿ : https://cnewstv.in/?p=8946
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments