Cnewstv.in / 10.03.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮಾರ್ಚ್ 12 ಕ್ಕೆ.. ಹರೀಶ ವಯಸ್ಸು 36..
ಕರಾವಳಿ ಯುವಪ್ರತಿಭೆಗಳ ಸಿನಿಮಾ ” ಹರೀಶ ವಯಸ್ಸು 36″ ಟೈಟಲ್ ಸಾಂಗ್ ಗೆ ಧ್ವನಿಯಾಗಿದ್ದಾರೆ “ಪವರ್ ಸ್ಟಾರ್ ಪುನೀತ್ ರಾಜಕುಮಾರ್ “.
ದಕ್ಷಿಣ ಕನ್ನಡ ಜಿಲ್ಲೆಯ ಯುವ ಪ್ರತಿಭೆಗಳು ಸೇರಿ ಮಾಡಿರುವ ಸಿನಿಮಾ ” ಹರೀಶ ವಯಸ್ಸು 36 ” ಈ ವಿಭಿನ್ನ ಶೀರ್ಷಿಕೆಯ ಚಿತ್ರದ ಟೈಟಲ್ ಹಾಡಿಗೆ ಧ್ವನಿಯಾಗಿದ್ದಾರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಈ ಹಾಡು ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ, ಶಿರಡಿ ಸಾಯಿ ಬಾಲಾಜಿ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಲಕ್ಷ್ಮಿಕಾಂತ್ ರಾವ್, ತ್ರಿಲೋಕ್, ಹಾಗೂ ಚಕ್ರಧರ್ ರೆಡ್ಡಿ ಬಂಡವಾಳ ಹೂಡಿದ್ದಾರೆ,
ಈ ಚಿತ್ರವನ್ನು ಕರಾವಳಿಯ ಗುರುರಾಜ್ ಜೇಷ್ಠ ನಿರ್ದೇಶಿಸಿದ್ದಾರೆ, ಇದು ಇವರ ಮೊದಲ ಪ್ರಯತ್ನ, ಇವರೇ ಚಿತ್ರದ ಸಂಗೀತ ನಿರ್ದೇಶಕರು ಕೂಡ, ಈ ಚಿತ್ರವನ್ನು ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆ ಮತ್ತು ಮಂಗಳೂರಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆಸಲಾಗಿದೆ, ಚಿತ್ರದ ನಾಯಕನಾಗಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ನಟಿಸಿರುವ ಯೋಗೀಶ್ ಶೆಟ್ಟಿಯವರು ಪೂರ್ಣಪ್ರಮಾಣದ ನಾಯಕನಟನಾಗಿ ಹೊರಹೊಮ್ಮಿದ್ದಾರೆ,
ನಾಯಕಿಯಾಗಿ ಶ್ವೇತಾ ಅರೆಹೊಳೆ, ತಾರಾಗಣದಲ್ಲಿ ದೀಪಿಕಾ ರಾಮ್ ಜಗ ರಾಮ್, ಪ್ರಕಾಶ್ ತೂಮಿನಾಡು, ಮಂಜುಳಾ ಜನಾರ್ಧನ್ ಶೋಭಾ ಶೆಟ್ಟಿ , ಮುಂತಾದವರಿದ್ದಾರೆ, ಚಿತ್ರಕ್ಕೆ ಮೋಹನ್ ಪಡ್ರೆ ಛಾಯಾಗ್ರಹಣವಿದೆ, ಶಿವಮೊಗ್ಗದ ಭಾರತ್ ಸಿನೆಮಾಸ್ ಮತ್ತು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಮಾರ್ಚ್ ಹನ್ನೊಂದಕ್ಕೆ ಪ್ರದರ್ಶನವಿದೆ, ಶಿವಮೊಗ್ಗದ ಜನತೆ ಯುವಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕಾಗಿ ಚಿತ್ರ ತಂಡ ವಿನಂತಿಸಿದೆ.
ರಘು ಕಡೂರು (ಶಿವಮೊಗ್ಗ ಸಿನಿಮಾಸ್ ಅಡ್ಡ ) ಶಿವಮೊಗ್ಗ
ಇದನ್ನು ಒದಿ : https://cnewstv.in/?p=8948
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv