Cnewstv.in / 05.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ದಾಖಲೆ ಸಲ್ಲಿಸದ ಸಂಘಗಳ ನೋಂದಣಿ ರದ್ದತಿಗೆ ಕ್ರಮ
ಶಿವಮೊಗ್ಗ : ಐದು ವರ್ಷಗಳಿಗೂ ಮೀರಿ ತಹಲ್‍ವರೆವಿಗೂ ವಾರ್ಷಿಕ ದಾಖಲೆಗಳನ್ನು ಸಂಘಗಳ ನೋಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸದೇ ಇರುವ ಸಂಘಗಳ ನೊಂದಣಿ ರದ್ದತಿಗೆ ಕ್ರಮವಿಟ್ಟು ಆಕ್ಷೇಪಣೆಗಾಗಿ ನೋಟಿಸ್ ಮೂಲಕ ಹೆಚ್ಚಿನ ಅವಧಿ ನೀಡಿದ್ದರೂ ದಾಖಲೆಗಳನ್ನು ಸಲ್ಲಿಸದೇ ಇರುವ ಸಂಘಗಳು ಈ ಪ್ರಕಟಣೆ ಪ್ರಕಟಣೆಗೊಂಡ 07 ದಿನಗಳ ಒಳಗಾಗಿ ಆಕ್ಷೇಪಣೆ ಸಲ್ಲಿಸದಿದ್ದಲ್ಲಿ ಸಂಘಗಳ ನೋಂದಣಿ ರದ್ದು ಮಾಡಲು ಕ್ರಮ ವಹಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲೆಯ ಸಂಘಗಳ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.
ಸಂಘಗಳ ವಿವರ : ಭದ್ರಾವತಿಯ ಆರ್ಯ ನಯನಜ ಕ್ಷತ್ರೀಯ ಕ್ಷೇಮಾಭಿವೃದ್ಧಿ ಸಂಘ, ದಿ ಭದ್ರ ಹಾಕರ್ಸ್ ಅಸೋಸಿಯೇಷನ್, ಭದ್ರಾವತಿ ತಾಲೂಕು ಅರೆಕಾ ವೆಂಡರ್ಸ್ ಅಸೋಸಿಯೇಷನ್,ಭದ್ರಾವತಿ ತಾಲೂಕು ಬಾಪೂಜಿ ಹರಿಜನ ಸೇವಾಸಂಘ, ಶ್ರೀ ಶಾರದಾ ಮಹಿಳಾ ಮಂಡಲ, ಶ್ರೀ ಭೋಧಿವೃಕ್ಷ ಕ್ಷೇಮಾಭಿವೃದ್ಧಿ ಸಂಘ. ಶಿವಮೊಗ್ಗದ ಆರ್ಯ ನಯನಜ ಕ್ಷತ್ರೀಯ ಸಂಘ, ಕರ್ನಾಟಕ ರಾಜ್ಯದ ಮಾಲೇಜು (ಗಿರಿಜನ) ವರ್ಗದ ಸಂಘ, ಶಿವಮೊಗ್ಗ ಜಿಲ್ಲಾ ಗೋಂದಳಿ ಮರಾಠ ಸಮಾಜ, ಐಕ್ಯೂಬೆಲ್ ಎಜುಕೇಷನ್ ಸೊಸೈಟಿ, ಶ್ರೀ ಗುರುಸಿಂಗ್ ಸಭಾ, ಹಳೇ ತೀರ್ಥಹಳ್ಳಿ ರಸ್ತೆ, ಶಿವಮೊಗ್ಗ ಜಿಲ್ಲಾ ಸಂಚಾರಿ ವಾಹನ ಚಾಲಕರ ಸಂಘ, ಶಿವಮೊಗ್ಗ ತಾಲೂಕು ಸ್ವೀಪರ್ಸ್ & ಸ್ಕ್ಯಾವೆಂಜರ್ಸ್ ಸೇವಾ ಸಂಘ,
ಶಿವಮೊಗ್ಗ ಮರ್ಚೆಂಟ್ಸ್ ಅಸೋಸಿಯೇಷನ್. ತೀರ್ಥಹಳ್ಳಿಯ ಕಸ್ತೂರಿ ಬಾ ಮಹಿಳಾ ಸಮಾಜ, ಶಾಂತಿನಿ ಮಹಿಳಾ ಸಮಾಜ, ಕಮಲ ನೆಹರು ಮಹಿಳಾ ಸಮಾಜ,ಬನಶಂಕರಿ ಮಹಿಳಾ ಸಮಾಜ, ಅನ್ನಪೂರ್ಣೇಶ್ವರಿ ಮಹಿಳಾ ಸಮಾಜ. ಶಿಕಾರಿಪುರದ ವಿಯನತಿ ವಿದ್ಯಾ ಸಂಸ್ಥೆ, ರೇಣುಕಾಂಬ ಮಹಿಳಾ ಮಂಡಲ, ಮರ್ಚೆಂಟ್ಸ್ ಅಸೋಸಿಯೇಷನ್, ಸರಸ್ವತಿ ಮಹಿಳಾ ಮಂಡಲ. ಸಾಗರದ ವಿನೋಬಾ ಯುವಕರ ಸಂಘ, ದಿ.ಆನಂದಪುರಂ ಜನರಲ್ ಹಾಸ್ಟಲ್ ಸೊಸೈಟಿ ಅಸೋಸಿಯೇಷನ್, ಮರ್ಚೆಂಟ್ಸ್ ರಿಕ್ರಿಯೇಷನ್ ಅಸೋಸಿಯೇಷನ್. ಈ ಎಲ್ಲಾ 26 ಸಂಘಗಳು ಕೂಡಲೇ ತಮ್ಮ ದಾಖಲೆಗಳನ್ನು ಅಥವಾ ಆಕ್ಷೇಪಣೆಯನ್ನು ಸಲ್ಲಿಸದಿದ್ದಲ್ಲಿ ನೋಂದಣಿ ರದ್ದತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಇದನ್ನು ಒದಿ : https://cnewstv.in/?p=8850
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv