Breaking News

ಸ್ಯಾಂಡಲ್ ವುಡ್ ಗೆ ಕಾಲಿಟ್ಟಿ ಜನಾರ್ದನ್ ರೆಡ್ಡಿ ಪುತ್ರ

Cnewstv.in / 02.03.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಸ್ಯಾಂಡಲ್ ವುಡ್ ಗೆ ಕಾಲಿಟ್ಟಿ ಜನಾರ್ದನ್ ರೆಡ್ಡಿ ಪುತ್ರ

ಬೆಂಗಳೂರು : ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಸಿನಿ ಜಗತ್ತಿಗೆ ಪಾದಾರ್ಪಣೆ ಮಾಡಿದ್ದಾರೆ.

ಜನಾರ್ದನ ರೆಡ್ಡಿ ಪುತ್ರ ಸಿನಿಮಾಗಳಲ್ಲಿ ಅಭಿನಯಿಸುವುದು ಅನುಮಾನ ಅವರು ರಾಜಕೀಯಕ್ಕೆ ಎಂಟ್ರಿ ಕೊಡ ಬಹುದು ಎನ್ನುವ ಮಾತುಗಳು ಮತೊಂದು ಕಡೆ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು, ಇದೀಗ ಈ ಸುದ್ದಿಗೆ ಬ್ರೇಕ್ ಬಿದ್ದಿದ್ದು ಕಿರೀಟ ರೆಡ್ಡಿ ಪ್ರಥಮ ಬಾರಿಗೆ ನಾಯಕನಟರಾಗಿ ಲಾಂಚ್ ಆಗಲಿದ್ದಾರೆ.

ಕಿರೀಟ ರೆಡ್ಡಿಯವರ ಚಿತ್ರ ಲವ್ ಕಮ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಲಾಂಚ್ ಆಗಲಿದೆ. ತೆಲುಗಿನ ಹೆಸರಾಂತ ಸಂಸ್ಥೆ ವರಾಹಿ ಫಿಲಂಸ್ ನಿರ್ಮಿಸಿದ್ದು, ಸಾಯಿ ಕೊರಪಾಠಿ ನಿರ್ಮಿಸುತ್ತಿದ್ದಾರೆ. ರಾಧಾಕೃಷ್ಣ ನಿರ್ದೇಶನ ಮಾಡಿದ್ದಾರೆ.

ಚಿತ್ರದ ಅದ್ದೂರಿ ಲಾಂಚ್ ಕಾರ್ಯಕ್ರಮವನ್ನು ಮಾರ್ಚ್ 4 ರಂದು ಪಡಿಸಲಾಗಿದ್ದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಜಮೌಳಿ ಅವರು ಭಾಗವಹಿಸಲಿದ್ದಾರೆ. ಕಿರೀಟ ಸಿನಿಮಾದಲ್ಲಿ ದೊಡ್ಡ ತಾರಾಬಳಗ ಇರುವುದರಿಂದ ಸಿನಿ ಪ್ರಿಯರಿಗೆ ಮಸ್ತ್ ಎಂಟರ್ಟೈನ್ ಮಾಡಲಿದೆ.

ರಾಕ್‌ಸ್ಟಾರ್‌ ದೇವಿ ಶ್ರೀ ಪ್ರಸಾದ್‌ ಸಂಗೀತ ನೀಡಲಿದ್ದು, ಕೆ ಸೆಂಥಿಲ್‌ ಕುಮಾರ್‌ ಛಾಯಾಗ್ರಹಣ ಮಾಡಿದ್ದಾರೆ. ಪೀಟರ್ ಹೆನ್ ಆಕ್ಷನ್ ಕೊರಿಯೋಗ್ರಾಫರ್ ಆಗಿದ್ದು, ರವೀಂದರ್ ಪ್ರೊಡಕ್ಷನ್ ಡಿಸೈನರ್ ಆಗಿದ್ದಾರೆ.

ಇದನ್ನು ಒದಿ : https://cnewstv.in/?p=8799

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*