Cnewstv.in / 19.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಭದ್ರಾವತಿ ಜೆಡಿಎಸ್ ಮುಖಂಡ ಎಸ್.ಕುಮಾರ್ ಸೇರಿದಂತೆ ವಿವಿಧ ಪಕ್ಷದ 40 ಮಂದಿ ಬಿಜೆಪಿಗೆ ಸೇರ್ಪಡೆ..
ಶಿವಮೊಗ್ಗ : ಭದ್ರಾವತಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಭದ್ರಾ ಕೋಟೆ ಅಂತ ಬಿಂಬಿತವಾಗಿತ್ತು. ಅಪ್ಪಾಜಿ ಗೌಡರ ನಂತರ ಜೆಡಿಎಸ್ ಪ್ರಭಾವಿ ನಾಯಕರೆಂದರೆ ಎಸ್ ಕುಮಾರ್. ಭದ್ರಾವತಿ ತಾಲೂಕಿನಲ್ಲಿ ತಮ್ಮದೇ ಅಭಿಮಾನಿಗಳನ್ನು ಹೊಂದಿರುವ ಜೆಡಿಎಸ್ ಮುಖಂಡ ಎಸ್.ಕುಮಾರ್ ಸೇರಿದಂತೆ ವಿವಿಧ ಪಕ್ಷದ 40 ಕ್ಕೂ ಹೆಚ್ಚು ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಭದ್ರಾವತಿ ಜೆ.ಡಿ.ಎಸ್ ಮುಖಂಡರು, ಮಾಜಿ ಜಿ.ಪಂ. ಸದಸ್ಯರಾದ ಎಸ್. ಕುಮಾರ್ ಕೆಂಚೇನಹಳ್ಳಿ. ಜೆ.ಡಿ.ಎಸ್ ಮುಖಂಡರಾದ ಚಿಕ್ಕಗೊಪ್ಪೇನಹಳ್ಳಿಯ ಪ್ರದೀಪ್, ಕಾಂಗ್ರೆಸ್ ನ ಮುಖಂಡರಾದ ಶ್ರೀ ಸತೀಶ್ ಗೌಡ ಹೊನ್ನಟ್ಟಿ ಹೊಸೂರು ಹಾಗೂ ಭದ್ರಾವತಿ ತಾಲ್ಲೂಕು ಈಡಿಗ ಸಮಾಜದ ಅಧ್ಯಕ್ಷರಾದ ನಟರಾಜ್ ಇಂದು ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾಗಿದ್ದಾರೆ.
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಚಿವ ಕೆ. ಎಸ್. ಈಶ್ವರಪ್ಪ, ಸಂಸದರಾದ ಬಿ.ವೈ.ರಾಘವೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ.ಡಿ. ಮೇಘರಾಜ್, ಎಂ.ಬಿ.ಭಾನುಪ್ರಕಾಶ್, ಮೇಯರ್ ಸುನೀತಾ ಅಣ್ಣಪ್ಪ ಹಾಗೂ ಅನೇಕ ಕಾರ್ಯಕತರು ಉಪಸ್ಥಿತರಿದ್ದರು.
ಇದನ್ನು ಒದಿ : https://cnewstv.in/?p=8535
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments