Cnewstv.in / 19.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಫೆ. 27 ರಿಂದ ಮತ್ತೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಆರಂಭ.
ಬೆಂಗಳೂರು : ಕಾಂಗ್ರೆಸ್ ಮೇಕೆದಾಟು ಹೋರಾಟದ ಪಾದಯಾತ್ರೆ ಮತ್ತೆ ಫೆಬ್ರವರಿ 27ರಿಂದ ರಾಮನಗರದಿಂದ ಆರಂಭಗೊಳ್ಳಲಿದೆ ಎಂದು ಸಿದ್ದರಾಮಯ್ಯನವರು ತಿಳಿಸಿದ್ದಾರೆ.
ಜನವರಿ 9 ರಂದು ಆರಂಭಿಸಲಾಗಿದ್ದ ನಮ್ಮನೀರು, ನಮ್ಮ ಹಕ್ಕು ಪಾದಯಾತ್ರೆಯನ್ನು ಕೊರೊನಾ ಗೈಡ್ ಲೈನ್ಸ್ ಹಾಗೂ ಜೊತೆಗೆ ನಮ್ಮಿಂದ ರೋಗ ಹೆಚ್ಚಾಗಬಾರದು ಎಂಬ ಕಾರಣಕ್ಕಾಗಿ ಪಾದಯಾತ್ರೆಯನ್ನು ನಿಲ್ಲಿಸಲಾಗಿತ್ತು. ಅದರೆ ಈ ಬಾರಿ ಯಾವ ಕೊರೊನಾ ಗೈಡ್ ಲೈನ್ಸ್ ಕೂಡ ಇಲ್ಲ. ಕಾಂಗ್ರೆಸ್ ಪಕ್ಷದ ನಾಯಕರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ಸರ್ಕಾರದ ಯಾವುದೇ ಒತ್ತಡಕ್ಕೆ ನಾವು ಮಾಡುವುದಿಲ್ಲ ಎಂದರು.
ಈಗಾಗಲೇ ಜನವರಿ 9 ರಿಂದ 13 ರ ತನಕ ನಡೆದ ಪಾದಯಾತ್ರೆ ಮೊದಲ ಹಂತದಲ್ಲಿ ಮುಗಿದಿದ್ದು, ಮತ್ತೆ ರಾಮನಗರದಿಂದ ಮುಂದಿನ 5 ದಿನಗಳು, ಎರಡನೇ ಹಂತದ ಪಾದಯಾತ್ರೆ ನಡೆಯಲಿದೆ. ಕೊನೆಯದಿನ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾರೋಪ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು
ಇದನ್ನು ಒದಿ : https://cnewstv.in/?p=8531
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments