Breaking News

ಬಿಜೆಪಿ ಕಛೇರಿಕ್ಕೆ ಕಾಲಿಟ್ಟದ್ದಕ್ಕೆ, ಕಾಂಗ್ರೆಸ್ ತನ್ನ ಪಾಪ ತೊಳೆದುಕೊಂಡಿದೆ.!! ಎಸ್. ಎನ್. ಚನ್ನಬಸಪ್ಪ.

Cnewstv.in / 18.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಬಿಜೆಪಿ ಕಛೇರಿಕ್ಕೆ ಕಾಲಿಟ್ಟದ್ದಕ್ಕೆ, ಕಾಂಗ್ರೆಸ್ ತನ್ನ ಪಾಪ ತೊಳೆದುಕೊಂಡಿದೆ.!! ಎಸ್. ಎನ್. ಚನ್ನಬಸಪ್ಪ.

ಶಿವಮೊಗ್ಗ : ಬಿಜೆಪಿ ಕಛೇರಿಗೆ ಬಂದು ಕಾಂಗ್ರೆಸ್ ನವರು ತಮ್ಮ ಪಾಪ ತೊಳೆದುಕೊಂಡಿದ್ದಾರೆ ಎಂದು ಅಡಳಿತ ಪಕ್ಷದ ನಾಯಕ ಎಸ್. ಎನ್. ಚನ್ನಬಸಪ್ಪನವರು ಹೇಳಿದ್ದಾರೆ.

ನೆನ್ನೆ ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಜಿಲ್ಲಾ ಯುವ ಕಾಂಗ್ರೆಸ್ ತನ್ನ ಪಾಪವನ್ನು ತೊಳೆದುಕೊಂಡಿದೆ. ರಾಷ್ಟ್ರಭಕ್ತರು ಇರುವಂತಹ ಕಾರ್ಯಾಲಯಕ್ಕೆ ಕಾಂಗ್ರೇಸ್ ನವರು ಬಂದು ತಮ್ಮ ಪಾಪವನ್ನು ತೊಳೆದುಕೊಂಡಿದ್ದಾರೆ.‌ ಇದು ನಮಗೆ ದೇವಾಲಯ ಇದ್ದಂತೆ. ಕಾಂಗ್ರೆಸ್ ಯುವಕರು ರಾಷ್ಟ್ರಭಕ್ತರಾಗಿ ಬಂದಿದ್ದೀರಿ, ಪ್ರೇರಣ ತೆಗೆದುಕೊಂಡಿದ್ದೀರಿ, ದೇಶದ ಉನ್ನತಿಯ ದಿಕ್ಕಿನೆಡೆಗೆ ಹೆಜ್ಜೆಯನ್ನು ಹಾಕಬೇಕು ಎಂದರು.

ಇದನ್ನು ಒದಿ : https://cnewstv.in/?p=8505

ಒಂದು ಕಡೆ ಪಾಪ ತೊಳೆದುಕೊಂಡರೆ, ಮತ್ತೊಂದು ಕಡೆ ಪಾಪ ಮಾಡುತ್ತಿದ್ದಾರೆ.

ಕಾಂಗ್ರೇಸ್ ನವರು ಒಂದು ಕಡೆ ಪಾಪ ತೊಳೆದುಕೊಂಡರೆ ಮತ್ತೊಂದು ಕಡೆ ಪಾಪ ಮಾಡುತ್ತಿದ್ದಾರೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಶುದ್ದ ಅಯೋಗ್ಯ, ರೌಡಿಶೀಟರ್. ಬೆಂಗಳೂರಿನಲ್ಲಿ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ.‌ ಇದು ಅವರು ನಡೆದುಕೊಳ್ಳುತ್ತಿರುವ ರೀತಿ. ಹಿರಿಯ ನಾಯಕರಾದ ಈಶ್ವರಪ್ಪನವರಿಗೆ ಕಾಲಿನಲ್ಲಿ ಒದ್ದಿದ್ದಾರೆ, ಇದೇನಾ ನಿಮ್ಮ ದೇಶಭಕ್ತಿಯ ಎಂದು ಪ್ರಶ್ನಿಸಿದರು ??

ನಲಪಾಡ್ ನೇತೃತ್ವದ ಅಡಿಯಲ್ಲಿರುವ ಯುವ ಸಂಘಟನೆ ಮಾಡ್ತಾಯಿದ್ದೀರಾ,. ಅವರು ಬೆಂಗಳೂರಿನಲ್ಲಿ ಮುತ್ತಿಗೆ ಹಾಕಿದ್ರು ಅಂತ ಶಿವಮೊಗ್ಗದಲ್ಲಿ ಯುವಕರು ಮುತ್ತಿಗೆ ಹಾಕಿದರು. ಬೆಳೆಯುತ್ತಿರುವ ಯುವಕರಿಗೆ ಕಾಂಗ್ರೆಸ್ ಯಾವರೀತಿಯ ಮಾರ್ಗದರ್ಶನವನ್ನು ತೋರಿಸುತ್ತಿದ್ದೀರಿ?? ದಿಕ್ಕು ದೇಶೆ ಇಲ್ಲದ ಕಾಂಗ್ರೆಸ್ ಬಿಜೆಪಿಗೆ ರಾಷ್ಟ್ರಭಕ್ತಿಯ ಪಾಠ ಮಾಡುವ ಅವಶ್ಯಕತೆ ಇಲ್ಲ ಎಂದು ಟಾಂಗ್ ನೀಡಿದರು.

ಇದನ್ನು ಒದಿ : https://cnewstv.in/?p=8510

 

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*