Breaking News

ಕಾರಣಗಿರಿ ಸೇತುವೆ ಕಾಮಗಾರಿಗೆ ರೂ 18 ಕೋಟಿ ಅನುದಾನ ನೀಡಲು ಮುಖ್ಯಮಂತ್ರಿ ಒಪ್ಪಿಗೆ: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ

Cnewstv.in /17. 02.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕಾರಣಗಿರಿ ಸೇತುವೆ ಕಾಮಗಾರಿಗೆ ರೂ 18 ಕೋಟಿ ಅನುದಾನ ನೀಡಲು ಮುಖ್ಯಮಂತ್ರಿ ಒಪ್ಪಿಗೆ: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ.

ಬೆಂಗಳೂರು : ಕಾರಣಗಿರಿ ಮತ್ತು ಬಪ್ಪನಮನೆ ಸಂಪರ್ಕ ರಸ್ತೆಯ ಶರಾವತಿ ಹಿನ್ನೀರನ ಬಿಲ್ಸಾಗರದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಈ ಬಾರಿಯ ಆಯಾ ವ್ಯಯದಲ್ಲಿ ಸುಮಾರು ೧೮ ಕೋಟಿ ರೂಪಾಯಿಗಳ ಅನುದಾನ ಒದಗಿಸಲು ಮುಖ್ಯಮಂತ್ರಿ ಶ್ರಿ ಬಸವರಾಜ್ ಬೊಮ್ಮಾಯಿ ಒಪ್ಪಿಗೆ ನೀಡಿದ್ದಾರೆ.

ಈ ಬಗ್ಗೆ ಮಾನ್ಯ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಹಾಗೂ ಸಾಗರ ಶಾಸಕ ಶ್ರೀ ಹರತಾಳು ಹಾಲಪ್ಪ ಮತ್ತು ವಿಧಾನ ಪರಿಷತ್ ಸದಸ್ಯ ಶ್ರಿ ಅರುಣ್ ನೇತೃತ್ವದ ನಿಯೋಗ, ಮುಖ್ಯಮಂತ್ರಿ ಶ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾಗಿ, ಮನವಿ ಸಲ್ಲಿಸಿತ್ತು.

ನಿಯೋಗದಲ್ಲಿ ಸ್ಥಳೀಯರಾದ ಶ್ರಿ ಕೆ ವಿ ಕೃಷ್ಣಮೂರ್ತಿ, ನಗರ ಸೊಸೈಟಿ ಶ್ರಿ ಗುರುರಾಜ್, ಕೆ ಎಸ್ ರವಿ, ಮಧುಸೂಧನ್ ನಾವಡ ಹಾಗೂ ಶ್ರಿ ಶಾಂತ ಮೂರ್ತಿ ಹಾಗೂ ಇತರರೂ ಉಪಸ್ಥಿತರಿದ್ದರು.

ಇದನ್ನು ಒದಿ : https://cnewstv.in/?p=8505

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*